ಚಿನ್ನಸ್ವಾಮಿ ಸಹವಾಸ ಬೇಡಪ್ಪಾ ಬೇಡ – RCB ಮ್ಯಾನೇಜ್ಮೆಂಟ್ ನಡೆಗೆ KSCA ಶಾಕ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ನಡೆಸಲೇಬೇಕು ಎಂಬ ಹಠದಲ್ಲಿರುವ KSCAಗೆ ಸ್ವತಃ RCB ಮ್ಯಾನೇಜ್ಮೆಂಟ್ ಶಾಕ್ ಕೊಟ್ಟಿದೆ. ತವರಲ್ಲಿ RCB ಪಂದ್ಯ ನಡೆಯಬೇಕು ಎಂಬ ಆಸೆ ಬೆಂಗಳೂರಿಗರದ್ದು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾವು ಆಡಲ್ಲ ಅಂತಾ ಇದೀಗ ಆರ್‌ಸಿಬಿ ಮ್ಯಾನೇಜ್ಮೆಂಟ್ ಹೇಳಿದೆ.
ಇದನ್ನೂ ಓದಿ: ಕರ್ನಾಟಕದ ಕನಸು ಭಗ್ನ- ವಿಜಯ್ ಹಜಾರೆ ಸೆಮಿಫೈನಲ್‌ನಲ್ಲಿ ಗೆದ್ದವಿದರ್ಭ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯ ನೋಡಬೇಕು ಅಂತಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡ ಅಭಿಮಾನಿಗಳಿಗೆ ನಿರಾಶೆ ಕಾದಿದೆ. ಜೊತೆಗೆ KSCAಗೂ ಕೂಡಾ ನಿರಾಶೆಯಾಗಿದೆ. ಯಾಕೆಂದರೆ, ನಮಗೆ ಚಿನ್ನಸ್ವಾಮಿ ಸ್ಟೇಡಿಯಂ ಬೇಡವೇ ಬೇಡ ಎಂದು ಆರ್‌ಸಿಬಿ ಮ್ಯಾನೇಜ್ಮೆಂಟ್ ಹೇಳುವ ಮೂಲಕ ಸಡನ್ ಶಾಕ್ ನೀಡಿದೆ.
11 ಜನ ಮೃತಪಟ್ಟ ಪ್ರಕರಣ ಚಿನ್ನಸ್ವಾಮಿ ಸ್ಟೇಡಿಯಂ ಒಂದು ರೀತಿ ಕಪ್ಪುಚುಕ್ಕೆಯಾಗಿದೆ. ಈ ಸ್ಟೇಡಿಯಂ ಮತ್ತೆ ಹಳೆ ವೈಭವವನ್ನು ಕಾಣಲು ಸಾಧ್ಯವಾಗದೆ ಪರದಾಡುತ್ತಾ ಇದೆ. ಕೆಎಸ್ಸಿಎ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಹೇಗಾದರೂ ಮಾಡಿ ಇಲ್ಲಿ ಪಂದ್ಯ ಆಡಿಸಬೇಕು ಅನ್ನೋ ರೀತಿ ಶ್ರಮ ಪಡುತ್ತಿದ್ದಾರೆ. ಆದರೆ, KSCAಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಸಡನ್ ಶಾಕ್ ನೀಡಿದೆ. ಕಾಲ್ತುಳಿತ ಪ್ರಕರಣದಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ರಮುಖ ಆರೋಪಿ ಸ್ಥಾನದಲ್ಲಿದೆ. ಅಲ್ಲದೆ ಉಪಾಧ್ಯಕ್ಷ ರಾಜೇಶ್ ಮೆನನ್ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮೇಲೆ ಈ ಘಟನೆ ಬೇಸರ ತರಿಸಿದೆ. ಹೀಗಾಗಿ ರಾಜೇಶ್ ಮೆನನ್ ಚಿನ್ನಸ್ವಾಮಿ ಸಹವಾಸ ಬೇಡ ಅಂದಿದ್ದಾರೆ. ನಾವು ರಾಯಪುರ್ ಅಥವಾ ನವೀ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ಹೋಮ್ ಗ್ರೌಂಡ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಆರ್‌ಸಿಬಿ ಪಂದ್ಯ ಚಿನ್ನಸ್ವಾಮಿಯಿಂದ ದೂರವಾದ್ರೆ ಕೆಎಸ್ಸಿಎಗೆ ಇದು ದೊಡ್ಡ ನಷ್ಟ.
ಪೊಲೀಸ್ ಇಲಾಖೆ ಈಗಾಗಲೆ 17 ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು KSCAಗೆ ಸೂಚನೆ ಕೊಟ್ಟಿತ್ತು. ಅದರ ಕಾಮಗಾರಿಯನ್ನು ಈಗಾಗಲೆ KSCA ಶುರುಮಾಡಿಕೊಂಡಿದೆ. ಗುರುವಾರದ ಸಭೆಯ ನಂತರ, ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕಮಿಷನರ್ ಪರಿಶೀಲನೆ ನಡೆಸಿದ್ದಾರೆ. ಸಭೆಯಲ್ಲಿ ಜಿಬಿಎ, ಅಗ್ನಿಶಾಮಕ, BWSSB, ಬೆಸ್ಕಾಂ ಅಧಿಕಾರಿಗಳು ಬಾಗಿಯಾಗಿದ್ದರು. ಹೇಗಾದ್ರೂ ಮಾಡಿ ಸಮಸ್ಯೆ ಬಗೆಹರಿಸಿಕೊಂಡು ಆರ್‌ಸಿಬಿ ಪಂದ್ಯವನ್ನು ಚಿನ್ನಸ್ವಾಮಿಯಲ್ಲಿ ಆಡಿಸಲು KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹರಸಾಹಸ ಪಡುತ್ತಿದ್ದಾರೆ. ಆದರೆ, ಆರ್‌ಸಿಬಿಯ ಈ ಮಾತು ಕೇಳಿ ಬೆಂಗಳೂರಿನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನೋಡಿರಿ

