ಕರ್ನಾಟಕದ ಕನಸು ಭಗ್ನ- ವಿಜಯ್ ಹಜಾರೆ ಸೆಮಿಫೈನಲ್ನಲ್ಲಿ ಗೆದ್ದವಿದರ್ಭ

ಕರುಣ್ ನಾಯರ್ ಹಾಗೂ ಕೃಷ್ಣನ್ ಶ್ರೀಜಿತ್ ಅವರ ಅರ್ಧಶತಕಗಳ ಹೊರತಾಗಿಯೂ ಕರ್ನಾಟಕ ತಂಡ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಸೆಮಿಫೈನಲ್ನಲ್ಲಿ ಸೋತಿದೆ. ಕರ್ನಾಟಕ ವಿದರ್ಭ ವಿರುದ್ಧ 6 ವಿಕೆಟ್ಗಳ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ್ದ ಮಯಾಂಕ್ ಅಗರ್ವಾಲ್ ನಾಯಕತ್ವದ ಆತಿಥೇಯ ತಂಡ, ವಿಜಯ್ ಹಜಾರೆ ಟೂರ್ನಿಯ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಆದರೆ, ಅಮನ್ ಮೊಖಾಡೆ ಅವರ ಶತಕ ಹಾಗೂ ಆರ್ ಸಮರ್ಥ ಅವರ ಅರ್ಧಶತಕದ ಬಲದಿಂದ ವಿದರ್ಭ, ಈ ಪಂದ್ಯವನ್ನು ಗೆದ್ದು ಫೈನಲ್ಗೆ ಅರ್ಹತೆ ಪಡೆದಿದೆ.
ಬೆಂಗಳೂರು ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಪ್ ಎಕ್ಸ್ಲೆಂಟ್ ಮೊದಲನೇ ಮೈದಾನದಲ್ಲಿ ಕರ್ನಾಟಕ ನೀಡಿದ್ದ 281 ರನ್ಗಳ ಗುರಿಯನ್ನು ಹಿಂಬಾಲಿಸಿದ ವಿದರ್ಭ ತಂಡ, ಬಹುಬೇಗ ನಾಯಕ ಅಥರ್ವ ಥೈಡೆ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಆದರೆ, ಅಮನ್ ಮೊಖಾಡೆ ಅವರ ಶತಕ ಮತ್ತು ಆರ್ ಸಮರ್ಥ್ ಅವರ ಅರ್ಧಶತಕದ ಬಲದಿಂದ 46.2 ಓವರ್ಗಳಿಗೆ 4 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ: ಪುಟ್ಟ ಬಾಲಕನ ಜೊತೆ ಸಿಎಂ ಯೋಗಿ ಮಾತು – ಆ ಮಾತು ಕೇಳಿ ಆದಿತ್ಯನಾಥ್ ನಕ್ಕಿದ್ದೇಕೆ ಗೊತ್ತಾ?
ವಿದರ್ಭ ತಂಡದ ಮೊದಲನೇ ವಿಕೆಟ್ ಅನ್ನು ಬಹುಬೇಗ ಪಡೆದರೂ ಕರ್ನಾಟಕ ಬೌಲರ್ಗಳು ನಂತರದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವಲ್ಲಿ ವಿಫಲರಾದರು. ಧ್ರುವ್ ಶೋರೆ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಇವರು ಅಮನ್ ಜೊತೆ 89 ರನ್ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿದ್ದರು. ಆದರೆ, ಮೂರನೇ ವಿಕೆಟ್ಗೆ ಅಮನ್ ಹಾಗೂ ಆರ್ ಸಮರ್ಥ 147 ರನ್ಗಳ ಜೊತೆಯಾಟವನ್ನುಆಡಿದರು. ಈ ಜೋಡಿ ಬೇರ್ಪಡಿಸುವಲ್ಲಿ ಕರ್ನಾಟಕ ಬೌಲರ್ಗಳ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದ್ಭುತವಾಗಿ ಬ್ಯಾಟ್ ಮಾಡಿದ ಅಮನ್ ಮೊಖಾಡೆ 122 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 138 ರನ್ ಕಲೆ ಹಾಕಿದರು. ಆ ಮೂಲಕ ವಿದರ್ಭ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನೋಡಿರಿ

