ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ- ಮೊಳಗಿತಾ ಕಾಂಗ್ರೆಸ್ ಚುನಾವಣಾ ಕಹಳೆ?

ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ- ಮೊಳಗಿತಾ ಕಾಂಗ್ರೆಸ್ ಚುನಾವಣಾ ಕಹಳೆ?

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ್ಲೇ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಮೂರೂ ಪಕ್ಷಗಳು ಕಸರತ್ತು ಶುರು ಮಾಡಿದ್ದು, ಪ್ರಚಾರದ ತಂತ್ರಗಾರಿಕೆಯಲ್ಲಿ ತೊಡಗಿದೆ. ರಾಷ್ಟ್ರಮಟ್ಟದ ನಾಯಕರೂ ಕೂಡ ಅಖಾಡಕ್ಕೆ ಧುಮುಕುತ್ತಿದ್ದು ಚುನಾವಣಾ ಕಣ ರಂಗೇರುತ್ತಿದೆ.

ಇದನ್ನೂ ಓದಿ: ಜಲಂಧರ್ ನಿಂದ ಹೋಶಿಯಾರ್‌ಪುರದತ್ತ ಸಾಗಿದ ಭಾರತ್ ಜೋಡೋ ಯಾತ್ರೆ

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇವತ್ತು ರಾಜ್ಯ ರಾಜಧಾನಿಗೆ ಎಂಟ್ರಿ ಕೊಡ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ನಾ ನಾಯಕಿ ಎಂಬ ಮಹಿಳಾ ಸಮಾವೇಶವನ್ನ ಉದ್ಘಾಟನೆ ಮಾಡಲಿದ್ದಾರೆ.  ಈಗಾಗ್ಲೇ ಪ್ರಿಯಾಂಕಾರ ದೊಡ್ಡ ದೊಡ್ಡ ಕಟೌಟ್​ಗಳು ನಗರದ ರಸ್ತೆಗಳಲ್ಲಿ ರಾರಾಜಿಸುತ್ತಿವೆ.ಈ ಮೂಲಕ ಚುನಾವಣಾ ಪ್ರಚಾರದ ಕಹಳೆ ಕೂಡ ಮೊಳಗಲಿದೆ. ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡ ಏರ್ ಪೋರ್ಟ್ ಗೆ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ಸಮಾವೇಶದ ವೇದಿಕೆಗೆ ಆಗಮಿಸಲಿದ್ದು, ಬಳಿಕ ಮಧ್ಯಾಹ್ನ 3.30ರವರೆಗೂ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇನ್ನೊಂದು ವಿಶೇಷ ಅಂದ್ರೆ ವೇದಿಕೆ ಮೇಲೆ ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಮತ್ತೊಂದೆಡೆ ನಾ ನಾಯಕಿ ಸಮಾವೇಶದ ಮೂಲಕ ಮಹತ್ವದ ಘೋಷಣೆಯಾಗುವ ಸಾಧ್ಯತೆಯೂ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಕೂಡ ಮಾಡಲಿದೆ. ಈ ಎಲ್ಲಾ ಕಾರಣಗಳಿಂದ ಪ್ರಿಯಾಂಕಾ ಗಾಂಧಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

suddiyaana