ಗೆದ್ದಾಯ್ತು ಪಳಾರ್ ಗಿಲ್ಲಿ – NEXT LEVEL ಫ್ಯಾನ್ಸ್ ಕ್ರೇಜ್
ಹಳ್ಳಿ ಹೈದನ ಹಿಂದೆ ಕರುನಾಡು

ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದು ಪಕ್ಕಾ’ .. ಏನ್ರಿ ಏನ್ರಿ ಇದು ಗಿಲ್ಲಿ ಕ್ರೇಜ್.. ಒಬ್ಬ ಬಿಗ್ಬಾಸ್ ಸ್ಪರ್ಧಿಗೆ ಈ ಮಟ್ಟಿನ ಕ್ರೇಜ್ ಕರ್ನಾಟಕದಲ್ಲಿ ಇಲ್ಲಿ ತನಕ ಯಾರು ನೋಡಿಲ್ಲ.. ಮುಂದೆ ನೋಡ್ತಿವೋ ಇಲ್ವೋ ಗೊತ್ತಿಲ್ಲ..ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಗಿಲ್ಲಿಯದ್ದೇ ಸೌಂಡ್.. ಗಿಲ್ಲಿಗಾಗಿ ಮಕ್ಕಳಿಂದ ಹಿಡಿದ ಅಜ್ಜಿ ತನಕ.. ಟೀ ಮಾರೋರಿಂದ ಹಿಡಿದು ರಾಜಕಾರಣಿಗಳ ತನಕ.. ರೈತರಿಂದ ಹಿಡಿದು ಸೈನಿಕರ ತನಕ ವೋಟ್ ಕೇಳ್ತಾ ಇದ್ದಾರೆ. ಒಬ್ಬ ಬಿಗ್ಬಾಸ್ ಸ್ಪರ್ಧಿ ಪೋಟೋವನ್ನ ಟ್ಯಾಟೋ ಹಾಕಿಸಿಕೊಂಡಿದ್ದು ಇತಿಹಾಸದಲ್ಲೇ ಇದೇ ಮೊದಲು ಅನ್ಸುತ್ತೆ. ಮಂಡ್ಯದ ಗಿಲ್ಲಿ ಸೌಂಡ್ ಇಡೀ ಇಂಡಿಯಾ ತುಂಬೆಲ್ಲಾ ಕೇಳಿ ಬರ್ತಿದೆ. ಇಡೀ ಕರುನಾಡೇ ಇದೆ. ರೈತನ ಮಗನನ್ನ ಗೆಲ್ಲಿಸೋಕೆ ದೊಡ್ಡ ಸೇನೆಯೇ ರೆಡಿಯಾಗಿದೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಒಬ್ಬ ಸ್ಪರ್ಥಿಯನ್ನ ಗೆಲ್ಲಿಸೋಕೆ ಈ ಮಟ್ಟಿಗೆ ಸಪೂರ್ಟ್ ಯಾರಿಗೂ ಸಿಕ್ಕಿಲ್ಲ.
ಇದನ್ನೂ ಓದಿ: ಸಸ್ಯಕಾಶಿಯಲ್ಲಿ ತೇಜಸ್ವಿ ವಿಸ್ಮಯ ಲೋಕ – ಲಾಲ್ಬಾಗ್ ನಲ್ಲಿ ಹಾರುವ ಓತಿ ನೋಡಿದಿರಾ?
ಟೀ ಅಂಗಡಿಗಳಲ್ಲಿ.. ಹೋಟೆಲ್ಗಳಲ್ಲಿ.. ಕ್ಯಾಬ್ಗಳಲ್ಲಿ.. ಆಟೋಗಳಲ್ಲಿ ಗಿಲ್ಲಿ ಗೆದ್ರೆ ನಾವು ಫ್ರೀಯಾಗಿ ಜನರ ಸೇವೆ ಮಾಡ್ತೀವಿ ಅಂತ ಹೇಳುತ್ತಿದ್ದಾರೆ. ಶಬರಿಮಲೆ ಮಾಲಾಧಾರಿಗಳು ಗಿಲ್ಲಿ ಗೆಲ್ಲಲಿ ಅಂತ ಹೇಳುತ್ತಿದ್ದಾರೆ. ರಾಜ್ಯದ ತುಂಬೆಲ್ಲಾ.. ಗಿಲ್ಲಿ ಪರವಾಗಿ ಬೈಕ್ ಱಲಿ. ಕಾರ್ ಱಲಿಗಳು ನಡೆಯುತ್ತಿದೆ. ಒಬ್ಬ ಸೂಪರ್ ಸ್ಟಾರ್ಗೆ ಸಿಕ್ಕ ಕ್ರೇಜ್ ಗಿಲ್ಲಿಗೆ ಸಿಗುತ್ತಿದೆ. ಬೈಕ್ ಕಾರುಗಳ ಮೇಲೆ ಗಿಲ್ಲಿ ಗೆಲ್ಲಬೇಕು ಅನ್ನೋ ಪೋಸ್ಟ್ರ್ಗಳು ಅಂಟಿಸಿ ಪ್ರಚಾರ ನಡೆಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ಗಿಲ್ಲಿ ಗೆಲ್ಲಬೇಕು ಅಂತ ಬೇಡಿಕೊಳ್ಳುತ್ತಿದ್ದಾರೆ.. ಮಂಡ್ಯದ ರಾಜಕೀಯ ನಾಯಕರು ಈಗ ಗಿಲ್ಲಿ ನಟನ ಪರವಾಗಿ ಅಖಾಡಕ್ಕಿಳಿದಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಗಿಲ್ಲಿ ನಟನಿಗೆ ವೋಟ್ ಮಾಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ. ಮಾಜಿ ಸಚಿವ ಡಿ ಸಿ ತಮ್ಮಣ್ಣ ಕೂಡ ಗಿಲ್ಲಿ ನಟನ ಪರವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅನೇಕರ ಮಧ್ಯೆ ಗಮನ ಸೆಳೆದಿರುವ ಹೆಸರು ‘ಗಿಲ್ಲಿನಟ’. ಇವರು ನಮ್ಮ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದಡದಪುರ ಗ್ರಾಮದ ರೈತ ಕುಟುಂಬದ ಅಪ್ಪಟ ಗ್ರಾಮೀಣ ಪ್ರತಿಭೆ” ಎಂದು ಹೊಗಳಿದ್ದಾರೆ.
ಕೇವಲ ಇಲ್ಲಿ ಮಾತ್ರ ಗಿಲ್ಲಿ ಕ್ರೇಜ್ ಇಲ್ಲ, ಫಾರಿನ್ನಲ್ಲೂ ಗಿಲ್ಲಿಗೆ ಸಪೋರ್ಟ್ ಮಾಡುತ್ತಿದ್ದಾರೆ.. ಗಿಲ್ಲಿ ಅಭಿಮಾನಿಯೊಬ್ಬರು ಬುರ್ಜ್ ಖಲೀಫಾ ಮುಂದೆ ಗಿಲ್ಲಿ ಫೋಟೋವನ್ನ ಹಿಡಿದು ಸಪೋರ್ಟ್ ಮಾಡಿದ್ದಾರೆ..ನಿಜ ಹೇಳಬೇಕು ಅಂದ್ರೆ ಗಿಲ್ಲಿಗೆ ತುಂಬಾ ಅಂದ್ರೆ ತುಂಬಾ ಸಪೋರ್ಟ್ ಸಿಗುತ್ತಿದೆ. ಗಿಲ್ಲಿ ಇದೆನ್ನಲ್ಲಾ ದುಡ್ಡು ಕೊಟ್ಟು ಸಂಪಾನೆ ಮಾಡಿದ್ದು ಅಲ್ಲ, ತನ್ನ ಟ್ಯಾಲೆಂಟ್ನಿಂದಲೇ ಸಂಪಾನೆ ಮಾಡಿದ್ದಾರೆ. ನಿಜವಾದ ಸಕ್ಸಸ್ ಅಂದ್ರೆ. ಗಿಲ್ಲಿಯ ಟ್ಯಾಟೋವನ್ನ 3 ಜನ ಹಾಕಿಸಿಕೊಂಡಿದ್ದಾರೆ. ಅದ್ರಲ್ಲಿ ಒಬ್ಬರನ್ನ ಬಿಗ್ ಬಾಸ್ ಮನೆಯೊಳಗೆ ಕರೆಸಿದ್ರು. ತನ್ನ ಟ್ಯಾಟೋ ನೋಡಿ ಗಿಲ್ಲಿನೇ ಶಾಕ್ ಆದ್ರು. ಒಂದು ವೇಳೆ ಗಿಲ್ಲಿ ಗೆದ್ದಿಲ್ಲ ಅಂದ್ರೆ ಏನಾಗುತ್ತೆ ಅನ್ನೋದು ಊಹಿಸಿಕೊಳ್ಳುವುದು ಕಷ್ಟ. ಟಿವಿ ಒಡೆದು ಹೋಗಬಹುದು.. ಮೊಬೈಲ್ಗಳು ಪುಡಿಯಾಗಬಹುದು.. ಪ್ರತಿಭಟನೆಗಳು ಕೂಡ ನಡೆಯಬಹುದು.

ನೋಡಿರಿ

