TARGETನಲ್ಲೇ ಸೋತ ಭಾರತ – ರನ್ಸ್, ವಿಕೆಟ್ಸ್ ಇಲ್ಲ.. ಕ್ಯಾಚ್ ಹಿಡೀಲಿಲ್ಲ!
3ನೇ ಮ್ಯಾಚ್ ಈಗ DO Or DIE

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡ್ಕೊಬೇಕು ಅನ್ಕೊಂಡಿದ್ದ ಭಾರತಕ್ಕೆ ಕಿವೀಸ್ ಪಡೆ ಶಾಕ್ ಕೊಟ್ಟಿದೆ. ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸರಣಿ ಸಮಬಲ ಮಾಡ್ಕೊಂಡಿದೆ. ಭಾನುವಾರ ನಡೆಯಲಿರೋ 3ನೇ ಪಂದ್ಯವೇ ಸಿರೀಸ್ ಡಿಸೈಡರ್ ಆಗಲಿದೆ.
ಇದನ್ನೂ ಓದಿ : ನ್ಯೂಜಿಲೆಂಡ್ ವಿರುದ್ಧ ಎಡವಿದ ಗಿಲ್ ಪಡೆ – ಟೀಂ IND ಕೈ ಹಿಡಿಯಲಿಲ್ಲ ಕೆಎಲ್ ಶತಕ
ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಫೀಲ್ಡಿಂಗ್ ಚೂಸ್ ಮಾಡಿಕೊಳ್ತಾರೆ. ಌಂಡ್ ಭಾರತ ಫಸ್ಟ್ ಬ್ಯಾಟಿಂಗ್ಗೆ ಬರಬೇಕಾಗುತ್ತೆ. ಶುಭ್ಮನ್ ಗಿಲ್ ಅವ್ರ ಅರ್ಧಶತಕ, ಕೆಎಲ್ ರಾಹುಲ್ ಅವ್ರ ಸೆಂಚುರಿ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 284 ರನ್ಗಳನ್ನ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 3 ವಿಕೆಟ್ ಕಳ್ಕೊಂಡು ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಒನ್ ಸೈಡೆಡ್ ಆಗಿ ಮ್ಯಾಚ್ ವಿನ್ ಆಯ್ತು. ಹಾಗೇ ಸರಣಿಯಲ್ಲಿ ಸಮಬಲ ಸಾಧಿಸಿದೆ. ಭಾನುವಾರ ನಡೆಯಲಿರೋ ಕೊನೇ ಮ್ಯಾಚ್ ಇಬ್ಬರ ಪಾಲಿಗೂ ಈಗ ಡು ಆರ್ ಡೈ ಎನ್ನುವಂತಾಗಿದೆ.
ಭಾರತದ ಸೋಲಿಗೆ ಕಾರಣಗಳು!
- ಟಾಸ್ ಸೋಲು, ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ನಲ್ಲಿ ಲೋ ಸ್ಕೋರ್
- ಶುಭ್ ಮನ್ ಗಿಲ್ ಮತ್ತು ರೋಹಿತ್ ನಿಧಾನಗತಿಯ ಆರಂಭ
- 15ನೇ ಓವರ್ ನಿಂದ ಹಿಡಿದು 40 ಓವರ್ ವರೆಗೆ ಕೇವಲ 112 ರನ್ಸ್
- ಡ್ಯಾರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಅದ್ಭುತ ಜೊತೆಯಾಟ
- ಮಿಡಲ್ ಓವರ್ ಗಳಲ್ಲಿ ಭಾರತದ ಸ್ಪಿನ್ನರ್ಸ್ ಕಳಪೆ ಬೌಲಿಂಗ್
ಹೀಗೆ ಭಾರತದ ಸೋಲಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕಡೆಯಿಂದಲೂ ಮಿಸ್ಟೇಕ್ಸ್ ಇದೆ. ಹೀಗಾಗಿ ಮೂರನೇ ಪಂದ್ಯವನ್ನ ಈಗ ಗೆಲ್ಲಲೇಬೇಕಾದ ಪ್ರೆಶರ್ನಲ್ಲಿ ಸಿಲುಕಿದ್ದಾರೆ. ಭಾನುವಾರ ನಡೆಯಲಿರೋ ಪಂದ್ಯದಲ್ಲಿ ಗೆದ್ದವ್ರು ಸರಣಿ ಕೈವಶ ಮಾಡಿಕೊಳ್ತಾರೆ.

ನೋಡಿರಿ

