ಸಸ್ಯಕಾಶಿಯಲ್ಲಿ ತೇಜಸ್ವಿ ವಿಸ್ಮಯ ಲೋಕ – ಲಾಲ್‌ಬಾಗ್‌ ನಲ್ಲಿ ಹಾರುವ ಓತಿ ನೋಡಿದಿರಾ?
ಫ್ಲವರ್ ಶೋನಲ್ಲಿ ಮಲೆನಾಡಿನ ಪ್ರಕೃತಿ ಚಿತ್ರಣದ ಅನಾವರಣ

ಸಸ್ಯಕಾಶಿಯಲ್ಲಿ ತೇಜಸ್ವಿ ವಿಸ್ಮಯ ಲೋಕ – ಲಾಲ್‌ಬಾಗ್‌ ನಲ್ಲಿ ಹಾರುವ ಓತಿ ನೋಡಿದಿರಾ?ಫ್ಲವರ್ ಶೋನಲ್ಲಿ ಮಲೆನಾಡಿನ ಪ್ರಕೃತಿ ಚಿತ್ರಣದ ಅನಾವರಣ

ಲಾಲ್‌ಬಾಗ್‌ನಲ್ಲಿ 219ನೇ ಫ್ಲವರ್ ಶೋಗೆ ಚಾಲನೆ ಿಸಿಕ್ಕಿದೆೆ. ಜನವರಿ 26ರವರೆಗೆ ಈ ಫ್ಲವರ್ ಶೋ ನಡೆಯಲಿದೆ. ಈ ಬಾರಿಯಂತೂ ಹೂದೋಟದಲ್ಲಿ ವಿಸ್ಮಯಲೋಕವೇ ಅನಾವರಣಗೊಂಡಿದೆ. ಕನ್ನಡದ ಹೆಮ್ಮೆಯ ಲೇಖಕ ಪೂರ್ಣಚಂದ್ರ ತೇಜಸ್ವಿ ಜೀವನದ ಅನಾವರಣವೇ ಈ ಬಾರಿಯ ಫ್ಲವರ್ ಶೋ ವಿಶೇಷ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಗಿಫ್ಟ್! – ಹಳದಿ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭ

ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯುತ್ತಿದೆ. ಈ ಬಾರಿಯ ಹೂಗಳ ಹಬ್ಬ ವಿಶೇಷತೆಗೆ ಸಾಕ್ಷಿಯಾಗಿದೆ. ಪ್ರತಿಯೊಂದು ಹೂವುಗಳು ಕೂಡಾ ಮಲೆನಾಡಿನ ಪ್ರಕೃತಿಯನ್ನು ಕಣ್ಣ ಮುಂದೆ ತಂದು ನಿಲ್ಲಿಸಿದಂತಿದೆ. ತೇಜಸ್ವಿ ಬದುಕಿನ ಕಥೆ ಸಾರುತ್ತಿದೆ ಈ ಬಾರಿಯ ಫ್ಲವರ್ ಶೋ. ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಹಾಗೂ ಪ್ರಕೃತಿ ಜೊತೆಗಿನ ಅವರ ನಂಟಿನ ಬಗ್ಗೆ ವಿಶೇಷ ಚಿತ್ರಣ ಸಿಟಿ ಮಂದಿಗೆ ಸಿಗುತ್ತಿದೆ. ಪೂರ್ಣಚಂದ್ರ ತೇಜಸ್ವಿಯವರ ಜೀವನ ಅನೇಕರಿಗೆ ಸ್ಪೂರ್ತಿ. ಮೂಡಿಗೆರೆಯ ಪ್ರಕೃತಿ ನಡುವೆ ಜೀವಿಸಿ ಅನೇಕ ಪ್ರಾಣಿ- ಪಕ್ಷಿ, ಕೀಟಗಳ ಪರಿಚಯವನ್ನ ತಮ್ಮ ಕೃತಿಗಳ ಮೂಲಕ ಸಾಹಿತ್ಯಾಸಕ್ತರಿಗೆ ಮಾಡಿಕೊಟ್ಟಿದ್ದಾರೆ ತೇಜಸ್ವಿ.

ಗಾಜಿನ ಮನೆಯೊಳಗೆ ಎಂಟ್ರಿಯಾಗುವ ಪ್ರವೇಶದ್ವಾರದಲ್ಲೇ ಆನೆ ಮತ್ತು ಹಾರುವ ಓತಿಯನ್ನ ನಿರ್ಮಾಣ ಮಾಡಲಾಗಿದೆ. ಜೊತೆಗೆ ತೇಜಸ್ವಿಯವರ ಚಿತ್ರಣ ಕೂಡಾ ಹೂವಗಳಲ್ಲಿ ಅರಳಿರುವ ರೀತಿಯೂ ವಿಶೇಷವಾಗಿದೆ. ಈ ವಿಶೇಷ ಪರಿಕಲ್ಪನೆಗೆ ಪೂರ್ಣಚಂದ್ರ ತೇಜಸ್ವಿಯವರ ಎರಡನೇ ಪುತ್ರಿ ಕೆಪಿ ಈಶಾನ್ಯೆ ಕೂಡಾ ಖುಷಿಪಟ್ಟಿದ್ದಾರೆ. ತೇಜಸ್ವಿ ಪರಿಕಲ್ಪನೆಯಡಿ ಫಲ ಪುಷ್ಪ ಪ್ರದರ್ಶನ ಬಗ್ಗೆ ಮೊದಲಿಂದಲೂ ಆಗಿತ್ತು. ಯೋಜನೆ ರೂಪಿಸಿದ್ದು ಅನುಷ್ಠಾನ ಆಗಿದೆ. ಇಲ್ಲಿರುವ ಪುಷ್ಪಗಳು ತೇಜಸ್ವಿ ಜೀವನ ಬಗ್ಗೆ ಹೇಳ್ತಾ ಇದೆ. ತೇಜಸ್ವಿ ಇತಿಹಾಸ, ಅವರೇನು ಮಾಡಿದ್ದಾರೆ. ಅದೆಲ್ಲವವನ್ನ ಫಲಪುಷ್ಪದಲ್ಲಿ ವಿವರಿಸಿದ್ದಾರೆ. ಅವರು ಒಬ್ಬ ಪ್ರಖ್ಯಾತ ವ್ಯಕ್ತಿ ಅಂತ ಗೊತ್ತಿರುತ್ತೆ, ಅವರ ಜೀವನ ಇಷ್ಟೊಂದು ಆಸಕ್ತಿದಾಯಕವಾಗಿತ್ತಾ ಅಂತ ಅನಿಸದೇ ಇರಲ್ಲ. ತೇಜಸ್ವಿ ಅವರ ಪ್ರತಿಮೆ ತುಂಬಾ ಸುಂದರವಾಗಿ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂಪಾಯಿ ನಿಗದಿ ಪಡಿಸಲಾಗಿದೆ. ರಜೆ ದಿನಗಳಲ್ಲಿ ಈ ದರ ವಯಸ್ಕರಿಗೆ 100 ರೂಪಾಯಿ ಇದರಲಿದೆ. ಮಕ್ಕಳಿಗೆ 30 ರೂಪಾಯಿ ದರ ನಿಗದಿ ಮಾಡಲಾಗಿದ್ದು, ಆರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತಕ್ಕೆ ಅವಕಾಶ ನೀಡಲಾಗಿದೆ. ಹಾಗೆ ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದೆ‌. ಜನವರಿ 26ರ ವರೆಗೆ ಫ್ಲವರ್​​ ಶೋ ನಡೆಯಲಿದೆ.

Sulekha