ಬಾಸ್‌ ಮನೆಗೆ ವಿಶೇಷ ಅತಿಥಿ ಎಂಟ್ರಿ! – ರಾಣಿ ಕತೆ ಕೇಳಿ ಭಾವುಕರಾದ ಅಶ್ವಿನಿ ಗೌಡ!  

ಬಾಸ್‌ ಮನೆಗೆ ವಿಶೇಷ ಅತಿಥಿ ಎಂಟ್ರಿ! – ರಾಣಿ ಕತೆ ಕೇಳಿ ಭಾವುಕರಾದ ಅಶ್ವಿನಿ ಗೌಡ!  

ಬಿಗ್‌ಬಾಸ್‌ ಮನೆಯಲ್ಲಿ ಸದ್ಯ 6 ಮಂದಿ ಸ್ಪರ್ಧಿಗಳು ಇದ್ದಾರೆ. ಶನಿವಾರ ಫಿನಾಲೆ ನಡೆಯಲಿದೆ. ನಿನ್ನೆ ಸ್ಪರ್ಧಿಗಳು ಫ್ಯಾನ್ಸ್‌ ನ ಮೀಟ್‌ ಮಾಡಿ ವೋಟ್‌ ಹಾಕುವಂತೆ ಮನವಿ ಮಾಡಿದ್ರು. ಬಳಿಕ ಕಿಚ್ಚ ಸುದೀಪ್‌ ಕಳುಹಿಸಿದ ಊಟವನ್ನ ತಿಂದಿದ್ರು. ಇಂದು ದೊಡ್ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.

ಇದನ್ನೂ ಓದಿ: ಲಕ್ಷ ಲಕ್ಷ ಪಂಗನಾಮ! – ತಂಗಿ ವಿರುದ್ಧವೇ ಕೇಸ್‌ ಕೊಟ್ಟ ನಟಿ ಕಾರುಣ್ಯ ರಾಮ್!

ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ಮನೆಯವರೆಲ್ಲರೂ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಸ್ಪರ್ಧಿಗಳು ಹೊಸ ಡ್ರೆಸ್‌ ಧರಿಸಿ ಚೆನ್ನಾಗಿ ರೆಡಿ ಆಗಿದ್ದಾರೆ. ಬಳಿಕ ಬಿಗ್‌ಬಾಸ್‌ ವೀಕ್ಷಕರಿಗೆ ವಿಶ್‌ ಮಾಡಿದ್ದಾರೆ. ಆದ್ರೆ ವೀಕ್ಷಕರು ಇಬ್ಬರು ಸ್ಪರ್ಧಿಗಳನ್ನ ಬಿಟ್ಟು ವಿಶ್‌ ಮಾಡಿದ್ದು ಯಾಕೆ ಅಂತ ಪ್ರಶ್ನೆ ಮಾಡ್ತಿದ್ದಾರೆ.

ಬೆಳಗ್ಗೆ ರಿಲೀಸ್‌ ಆದ ಪ್ರೋಮೋದಲ್ಲಿ ಕಾವ್ಯ, ಗಿಲ್ಲಿ, ರಘು ಧನುಷ್‌ ಒಟ್ಟಾಗಿ ವೀಕ್ಷಕರಿಗೆ ವಿಶ್‌ ಮಾಡಿದ್ದಾರೆ. ಈ ವೇಳೆ ಅಶ್ವಿನಿ ಹಾಗೂ ರಕ್ಷಿತಾ ಅಲ್ಲಿ ಇರಲಿಲ್ಲ. ಇದೀಗ ವೀಕ್ಷಕರು ಇದನ್ನ ಪ್ರಶ್ನೆ ಮಾಡ್ತಿದ್ದಾರೆ. ಅವರಿಬ್ಬರು ಎಲ್ಲಿ. ಫಿನಾಲೆ ನಲ್ಲೂ ಗುಂಪುಗಾರಿಕೆ ಮಾಡ್ತಿದ್ದಾರಾ? ಅಶ್ವಿನಿ, ರಕ್ಷಿತಾ ಒಂಟಿ ಆದ್ರಾ ಅಂತ ಪ್ರಶ್ನೆ ಮಾಡ್ತಿದ್ದಾರೆ.

ಇನ್ನು ಬಿಗ್‌ಬಾಸ್‌ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಬಿಗ್‌ ಬಾಸ್‌ ಮನೆಗೆ ರಾಣಿ ಮತ್ತವಳ ತಾಯಿ ವಿಶೇಷ ಅತಿಥಿಗಳಾಗಿ ಬಂದಿದ್ದಾರೆ. ಕೃಷ್ಣ ಸುಂದರಿ ಹಾಗೂ ಮುದ್ದು ಮಣಿಗಳು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಐಶ್ವರ್ಯಾ ಅವರ ಹೊಸ ಧಾರಾವಾಹಿ ಇದು. ರಾಣಿ ಹೆಸರಿನ ಈ ಧಾರಾವಾಹಿಯಲ್ಲಿ ಧನ್ವಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಜೈಲಿನ ಕೈದಿಯೊಬ್ಬಳಿಗೆ ಹುಟ್ಟಿದ ಮಗುವಿನ ಕಥೆ ಇದು. ಇದೀಗ ಸೀರಿಯಲ್‌ ಕತೆ ಕೇಳಿ ಅಶ್ವಿನಿ ಗೌಡ ಭಾವುಕರಾಗಿದ್ದಾರೆ.

ಬಿಗ್‌ಬಾಸ್‌ ಮನೆಗೆ ಸೀರಿಯಲ್‌ನ ಪ್ರಮುಖ ಪಾತ್ರದಾರಿಗಳು ಬಂದಿದ್ದಾರೆ. ಈ ವೇಳೆ ಪುಟ್ಟ ಕಲಾವಿದೆ ಕಂಡು ಅಶ್ವಿನಿ ಗೌಡ ಅವರು ಭಾವುಕರಾದರು. ಬಿಗ್‌ ಬಾಸ್‌ ತಂಡ ಅಮ್ಮ ಮಗಳಿಗೆ ವಿಶ್‌ ಮಾಡಿದ್ದಾರೆ.

Shwetha M