ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್  ಸ್ಫೋ*ಟ – ಅಕ್ರಮ ಬಾಂಗ್ಲಾ ವಲಸಿಗರಿದ್ದ ಶೆಡ್‌ ಭಸ್ಮ!

 ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್  ಸ್ಫೋ*ಟ – ಅಕ್ರಮ ಬಾಂಗ್ಲಾ ವಲಸಿಗರಿದ್ದ ಶೆಡ್‌ ಭಸ್ಮ!

 ಅಡುಗೆ ಅನಿಲ ಸಿಲಿಂಡರ್  ಸ್ಫೋಟಗೊಂಡು ಬಾಂಗ್ಲಾದೇಶದ   ಅಕ್ರಮ ವಲಸಿಗರು  ನೆಲೆಸಿದ್ದ ಶೆಡ್‌ಗಳು ಬೆಂಕಿಗಾಹುತಿಯಾದ ಘಟನೆ ಬೆಂಗಳೂರು   ಹೊರವಲಯದ ಬೇಗೂರಿನ  ಎಳೇನಹಳ್ಳಿಯಳ್ಳಿಯಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಇಂದು ಗವಿ ಗಂಗಾಧರೇಶ್ವರನಿಗೆ ಸೂರ್ಯನ ಅಭಿಷೇಕ – ಎಷ್ಟು ಗಂಟೆಗೆ?, ವಿಶೇಷತೆಯೇನು?

5 ಎಕ್ರೆ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಇವರನ್ನು ಕೆಲ ದಿನಗಳ ಹಿಂದೆ ಸ್ಥಳದಿಂದ ಖಾಲಿ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ಮತ್ತೆ ವಲಸಿಗರು ಇಲ್ಲಿಗೆ ಆಗಮಿಸಿ ಶೆಡ್‌ ಹಾಕಿದ್ದರು. ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳು ಹೊತ್ತಿ ಉರಿದಿದ್ದು ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿದೆ. ವಿಚಾರ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಸಿಬ್ಬಂದಿ ಈಗ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಕಿ ನಂದಿಸುವ ಕಾರ್ಯದ ವೇಳೆ ಘಟನಾ ಸ್ಥಳದಲ್ಲಿ ಅನೇಕ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿದ್ದು, ಅವೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗಮನಾರ್ಹ ಸಂಗತಿಯೆಂದರೆ, ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಆದರೆ ತೆರವು ಕಾರ್ಯಾಚರಣೆಯ ಬಳಿಕವೂ ಕೆಲವರು ಮತ್ತೆ ರಾತ್ರೋರಾತ್ರಿ ಬಂದು ಶೆಡ್‌ಗಳಲ್ಲಿ ನೆಲೆಸಿಕೊಂಡಿದ್ದರು ಎನ್ನಲಾಗಿದೆ.

Kishor KV