ಇಂದು ಗವಿ ಗಂಗಾಧರೇಶ್ವರನಿಗೆ ಸೂರ್ಯನ ಅಭಿಷೇಕ – ಎಷ್ಟು ಗಂಟೆಗೆ?, ವಿಶೇಷತೆಯೇನು?

ನಾಡಿನೆಲ್ಲಡೆ ಮಕರ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಅದರಂತೆ ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಈ ದಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಸೂರ್ಯದೇವನ ರಶ್ಮಿಯು ದೇಗುಲದ ಒಳಗಿರುವ ಶಿವಲಿಂಗವನ್ನು ಸಂಜೆ 5 ಗಂಟೆ 2 ನಿಮಿಷಕ್ಕೆ ಸ್ಪರ್ಶಿಸಲಿದೆ.
ಇದನ್ನು ‘ಸೂರ್ಯನ ಅಭಿಷೇಕ’ ಎಂದೇ ಕರೆಯಲಾಗುತ್ತದೆ. ಈ ಕಿರಣಗಳು ನಂದಿಯ ಕೊಂಬುಗಳ ಮಧ್ಯದಿಂದ ಹೋಗಿ ಗರ್ಭಗುಡಿಯೊಳಗಿರುವ ಶಿವಲಿಂಗವನ್ನು ತಲುಪುವ ಮೂಲಕ ದೇವಸ್ಥಾನವನ್ನು ಬೆಳಗಿಸುತ್ತದೆ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಈ ಪವಾಡವನ್ನು 5 ರಿಂದ 10 ನಿಮಿಷಗಳ ಕಾಲ ನಡೆಯುತ್ತದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್? – ಮಾರ್ಗಸೂಚಿಯಲ್ಲಿ ಏನೇನಿದೆ?
ಭಕ್ತಾಧಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಇರಲಿದೆ. ಇಂದು ರಾತ್ರಿ 10-11 ಗಂಟೆವರೆಗೂ ದೇವಾಲಯದ ಬಾಗಿಲು ತೆರಯಲಿದೆ ಎಂದರು
ದೇವಸ್ಥಾನದ ವಿಶೇಷ
ದೇವಾಲಯದ ಪ್ರಾಂಗಣದಲ್ಲಿ ಬೃಹತ್ ಏಕಶಿಲೆಯಿಂದ ಕೆತ್ತಲಾದ ಸೂರ್ಯಪಾನ, ಚಂದ್ರಪಾನ, ಡಮರುಗ ಮತ್ತು ತ್ರಿಶೂಲದ ಸ್ತಂಭಗಳಿವೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಶಿವಲಿಂಗಗಳು ಉತ್ತರಾಭಿಮುಖವಾಗಿರುತ್ತವೆ. ಆದರೆ ಇಲ್ಲಿನ ಶಿವಲಿಂಗ ‘ದಕ್ಷಿಣಾಭಿಮುಖ’ವಾಗಿ ನೆಲೆಸಿರುವುದು ಅತ್ಯಂತ ವಿಶಿಷ್ಟವಾಗಿದೆ. ಇಲ್ಲಿ ಪಾರ್ವತಿ ದೇವಿಯು ಶಿವನ ಎಡಭಾಗದ ಬದಲಿಗೆ ಬಲಭಾಗದಲ್ಲಿ ನೆಲೆಸಿದ್ದು, ಮತ್ತೊಂದು ಅಪರೂಪವಾಗಿದೆ. ಇನ್ನು ಈ ಆಲಯದಲ್ಲಿ ಅಗ್ನಿಮೂರ್ತಿ ವಿಗ್ರಹವಿದ್ದು, ಎರಡು ತಲೆಗಳು, ಏಳು ಕೈಗಳು ಮತ್ತು ಮೂರು ಕಾಲುಗಳನ್ನು ಹೊಂದಿದೆ.

ನೋಡಿರಿ

