ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಗಿಫ್ಟ್! – ಹಳದಿ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಗಿಫ್ಟ್! – ಹಳದಿ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಲಕ್ಷಾಂತರ ಪ್ರಯಾಣಿಕರ ಜೀವನಾಡಿಯಾಗಿದೆ. ಪ್ರತಿದಿನ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡುತ್ತಿರುವ ಪ್ರಯಾಣಿಕರಿಗೆ ಮೆಟ್ರೋ ರೈಲು ವರದಾನವಾಗಿದೆ. ಇದೀಗ ಈ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಇದೆ. ಇದೀಗ ಈ ಮಾರ್ಗದಲ್ಲಿ ಮತ್ತೊಂದು ರೈಲು ಸಂಚಾರ ಆರಂಭಿಸಿದೆ.

ಇದನ್ನೂ ಓದಿ: ಜನವರಿ 27ರಿಂದ ಮೂರು ದಿನ ವಿಶೇಷ ಅಧಿವೇಶನ – ಕೇಂದ್ರದ ವಿರುದ್ಧ ತಿರುಗಿ ಬೀಳುವುದ್ದಕ್ಕೆ ತಯಾರಿ

ಹಳದಿ ಮಾರ್ಗದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ನೀಡಿದೆ. ಇಂದಿನಿಂದ ಹೊಸ ರೈಲು ಯೆಲ್ಲೋ ಲೈನ್ ನಲ್ಲಿ ಸಂಚಾರ ಆರಂಭಿಸಿದೆ. ಹಳದಿ ಮೆಟ್ರೋ ಲೈನ್ ನಲ್ಲಿ ಈಗಾಗಲೇ 6 ರೈಲುಗಳು ಸಂಚಾರ ನಡೆಸುತ್ತಿವೆ. ಇದೀಗ 7ನೇ ರೈಲು ಸಂಚಾರ ಪ್ರಾರಂಭಿಸಿದೆ. ಇದರಿಂದ ರೈಲುಗಳ ಸಂಚಾರದ ಅಂತರ ಕಡಿಮೆಯಾಗಲಿದೆ.

ಈ ಹಿಂದೆ ಒಂದು ಹಳದಿ ಮೆಟ್ರೋ ಟ್ರೈನ್ ಬಂದು ಹೋದ ಬಳಿಕ ಮತ್ತೊಂದು ಟ್ರೈನ್ ಬರಲು 13 ನಿಮಿಷಗಳ ಅಂತರ ಇತ್ತು. ಇನ್ಮುಂದೆ ಈ ಅಂತರ ಕೇವಲ 10 ನಿಮಿಷವಾಗಲಿದೆ. ಹತ್ತು ನಿಮಿಷಕ್ಕೊಂದು ಹಳದಿ ಮೆಟ್ರೋ ರೈಲು ಸಂಚಾರ ಮಾಡಲಿದೆ. ಸೋಮವಾರದಿಂದ ಶನಿವಾರದವರೆಗೂ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ. ಈ‌ ಹಿಂದೆ ಭಾನುವಾರ 15‌ ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡುತ್ತಿತ್ತು. ಈಗ ಏಳನೇ ರೈಲು ಎಂಟ್ರಿಯಿಂದ ಭಾನುವಾರ 14 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿದೆ. ಮೊದಲ ಹಾಗೂ ಕೊನೆಯ ರೈಲು ಸಂಚಾರದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಹೊಸ ರೈಲುಗಳ ಸೇರ್ಪಡೆಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರತಿನಿತ್ಯ ಮೆಟ್ರೋನ ಎಲ್ಲಾ ಮಾರ್ಗಗಳಲ್ಲಿ ಜನದಟ್ಟಣೆ ಹೆಚ್ಚುತ್ತಲೇ ಇದೆ. ಎಲ್ಲಾ ರೈಲುಗಳು ಪ್ರಯಾಣಿಕರಿಂದ ತುಂಬುತ್ತಲೇ ಇದೆ. ಹೀಗಾಗಿ ಹೊಸ ಹೊಸ ಮೆಟ್ರೋಗಳ ಸೇರ್ಪಡೆ ಅತ್ಯಗತ್ಯವಾಗಿರುವುದನ್ನು ಮನಗಂಡ ಬಿಎಂ ಆರ್ ಸಿಎಲ್, ಜನರಿಗೆ ಉತ್ತಮ ಸೇವೆ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವ ಫಲವಾಗಿ ಹೊಸ ರೈಲು ಸೇರ್ಪಡೆಯಾಗಿವೆ. ಹಳದಿ ಮಾರ್ಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಪ್ರಯಾಣ ಮಾಡುತ್ತಿದ್ದು, ಹೆಚ್ಚುವರಿ ರೈಲಿನಿಂದ ಅವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M