ಗಿಲ್ಲಿಯೇ ನನ್ನ ಗೆಳೆಯ ಎಂದು ಫ್ಯಾನ್ಸ್‌ ಮುಂದೆ ಒಪ್ಪಿಕೊಂಡ ರಘು! – Motu Patlu ಟ್ರೆಂಡ್!‌

ಗಿಲ್ಲಿಯೇ ನನ್ನ ಗೆಳೆಯ ಎಂದು ಫ್ಯಾನ್ಸ್‌ ಮುಂದೆ ಒಪ್ಪಿಕೊಂಡ ರಘು! – Motu Patlu ಟ್ರೆಂಡ್!‌

ಬಿಗ್‌ಬಾಸ್‌ ಮನೆಯಲ್ಲಿ ರಘು ಹಾಗೂ ಗಿಲ್ಲಿ ಮಧ್ಯೆ ಉತ್ತಮ ಬಾಂಧವ್ಯವಿದೆ. ರಘು ಹೋದಲೆಲ್ಲಾ ಗಿಲ್ಲಿ ಇದ್ದೇ ಇರ್ತಾರೆ. ಗಿಲ್ಲಿ ಎಷ್ಟು ಕಿರಿಕಿರಿ ಮಾಡಿದ್ರೂ ರಘುಗೆ ಗಿಲ್ಲಿನೇ ಇಷ್ಟ. ರಘು ಬೈದ್ರೂ ಗಿಲ್ಲಿಗೇ ಅವರೇ ಬೇಕು. ಇವರಿಬ್ಬರ ಮುದ್ದಾದ ಸ್ನೇಹ ವೀಕ್ಷಕರಿಗೂ ಸಖತ್‌ ಇಷ್ಟ. ಇದೀಗ ರಘು ಫ್ಯಾನ್ಸ್‌ ಮುಂದೆ ಬಂದಾಗ ಗಿಲ್ಲಿ, ಗಿಲ್ಲಿ ಎಂದು ಕೂಗಿದ್ದಾರೆ. ರಘು ಕೂಡ ಗಿಲ್ಲಿನೇ ನನ್ನ ಫ್ರೆಂಡ್‌ ಅಂತ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಡ್ಯಾಶಿಂಗ್ ಧ್ರುವಂತ್ OUT.. ಹೊಗಳಿ ಹೊಗಳಿ ಹೊರ ಹಾಕಿದ್ರಾ?

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ, ರಘು ಜೋಡಿ ಅಂದ್ರೆ ವೀಕ್ಷಕರಿಗೆ ಸಖತ್‌ ಇಷ್ಟ. ರಘು ಹೋದಲೆಲ್ಲಾ ಗಿಲ್ಲಿ ಇದ್ದೇ ಇರ್ತಾರೆ. ರಘುಗೂ ಗಿಲ್ಲಿನೇ ಬೇಕು. ಮೋಟು ಪಟ್ಲು ಅಂತಾನೇ ಫೇಮಸ್‌ ಆಗಿದ್ದಾರೆ ಗಿಲ್ಲಿ ಹಾಗೂ ರಘು. ಈಗಾಗಲೇ ಗಿಲ್ಲಿ ಅಂದ್ರೆ ನನಗೆ ತುಂಬಾ ಇಷ್ಟ.ನನ್ನ ಜೀವನದಲ್ಲಿ ಯಾರೊಂದಿಗೂ ಇಷ್ಟೊಂದು ಕ್ಲೋಸ್‌ ಆಗಿಲ್ಲ. ಗಿಲ್ಲಿ ಜೊತೆ ಅಮೂಲ್ಯ ಸಮಯವನ್ನ ಕಳೆದಿದ್ದೇನೆ ಅಂತ ರಘು ಕಿಚ್ಚ ಸುದೀಪ್‌ ಮುಂದೆಯೂ ಹೇಳಿಕೊಂಡಿದ್ರು. ಅಷ್ಟೇ ಅಲ್ಲ ರಘು ಮಗ ಕೂಡ ಗಿಲ್ಲಿ ಅಪ್ಪನ ಜೊತೆ ಇರೋದು ನನಗೆ ಇಷ್ಟ ಅಂತ ಹೇಳಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಗಿಲ್ಲಿ ಫ್ಯಾನ್ಸ್‌ ಕ್ರೇಜ್‌ ನೋಡಿ ರಘು ಶಾಕ್‌ ಆಗಿದ್ದಾರೆ. ಅಭಿಮಾನಿಗಳ ಮುಂದೆ ಗಿಲ್ಲಿ ನನ್ನ ಗೆಳೆಯ ಅಂತ ಹೆಮ್ಮೆಯಿಂದ ಹೇಳಿದ್ದಾರೆ ರಘು.

ಈ ವಾರ ಫಿನಾಲೆ ವೀಕ್‌ ನಡೆಯುತ್ತಿದೆ. ಯಾವುದೇ ಟಾಸ್ಕ್‌ ನೀಡಿಲ್ಲ. ಸ್ಪರ್ಧಿಗಳು ಜನರ ಮುಂದೆ ಬಂದು ವೋಟ್‌ ಕೇಳುತ್ತಿದ್ದಾರೆ. ಇದೀಗ ರಘು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರಘು ಸ್ಟೇಜ್‌ಗೆ ಬರ್ತಿದ್ದಂತೆ ವೀಕ್ಷಕರು ಗಿಲ್ಲಿ ಗಿಲ್ಲಿ ಎಂದು ಕೂಗಿದ್ದಾರೆ.  ಆಗ ರಘು, ಗಿಲ್ಲಿ ನೆಕ್ಟ್ಸ್‌ ಬರ್ತಾನೆ. ಅವನೇ ನನ್ನ ಗೆಳೆಯ ಎಂದು ಹೇಳಿದ್ದಾರೆ. ರಘು ಮಾತು ಕೇಳಿ ಗಿಲ್ಲಿ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ. ಈ ವಿಡಿಯೋ ಬಿಗ್‌ಬಾಸ್‌ ಲೈವ್‌ನಲ್ಲಿ ಪ್ರಸಾರವಾಗಿದ್ದು, ಸಖತ್‌ ವೈರಲ್‌ ಆಗಿದೆ.

Shwetha M