ಡ್ಯಾಶಿಂಗ್ ಧ್ರುವಂತ್ OUT.. ಹೊಗಳಿ ಹೊಗಳಿ ಹೊರ ಹಾಕಿದ್ರಾ?
ಅಶ್ವಿನಿ ಶಿಷ್ಯ ಎಡವಿದ್ದೆಲ್ಲಿ?

ಬಿಗ್‌ಬಾಸ್ ಕನ್ನಡ ಸೀಸನ್ 12 ರಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಎದುರಾಗ್ತಿದೆ. ಇದೀಗ ದೊಡ್ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ನಡೆದಿದೆ. ಫಿನಾಲೆಗೆ ಬರ್ತಾರೆ ಅಂದುಕೊಂಡಿದ್ದ ಸ್ಪರ್ಧಿಯೇ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಧ್ರುವಂತ್ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಇದನ್ನೂ ಓದಿ: ಟಾಕ್ಸಿಕ್ ಬ್ಯೂಟಿ ಇನ್‌ಸ್ಟಾಗ್ರಾಮ್ ಖಾತೆ ನಾಪತ್ತೆ! – ರೊಮ್ಯಾನ್ಸ್ ಸೀನ್ ವಿವಾದ.. ಬೀಟ್ರಿಜ್ ಅಕೌಂಟ್ ಡಿಲೀಟ್ ಆಯ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇದೀಗ ದೊಡ್ಮನೆಯ ಆಟದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗ್ತಿದೆ. ಇಷ್ಟು ದಿನ ಕಾವ್ಯ ಮಿಡ್‌ವೀಕ್‌ನಲ್ಲಿ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗ್ತಿತ್ತು. ಆದ್ರೀಗ ಹೊರಬಂದಿದ್ದು ಕಾವ್ಯ ಅಲ್ಲ. ಧ್ರುವಂತ್ ಅನ್ನೋದು ರಿವೀಲ್ ಆಗಿದೆ.
ಹೌದು.. ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಬರೀ ನೆಗೆಟಿವ್ ಶೇಡ್‌ನಿಂದಲೇ ಹೈಲೈಟ್ ಆಗಿದ್ರು. ಅಶ್ವಿನಿ, ಜಾಹ್ನವಿ ಗ್ರೂಪ್‌ನಲ್ಲಿ ಕಾಣಿಸಿಕೊಂಡಿದ್ದ ಧ್ರುವಂತ್ ರಕ್ಷಿತಾಳನ್ನ ಆರಂಭದಿಂದಲೂ ಟಾರ್ಗೆಟ್ ಮಾಡಿದ್ರು. ಆಕೆಯ ಬಗ್ಗೆ ತೀರಾ ಕೆಟ್ಟದಾಗಿ ಕಮೆಂಟ್ ಮಾಡಿದ್ರು. ಆದ್ರೆ ಕಳೆದ ಕೆಲ ವಾರದ ಹಿಂದೆ ಈ ಶೋ ತನ್ನ ವ್ಯಕ್ತಿತ್ವಕ್ಕೆ ಸರಿಹೊಂದಲ್ಲ. ತಾನು ಶೋನಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ರು. ಕಿಚ್ಚ ಸುದೀಪ್ ಧ್ರುವಂತ್‌ಗೆ ಕನ್ವಿನ್ಸ್ ಮಾಡಿ ಆಟ ಮುಂದುವರಿಸುವಂತೆ ಹೇಳಿದ್ರು. ಅದಾದ್ಮೇಲೆ ಧ್ರುವಂತ್ ಆಟದ ವರಸೆಯೇ ಚೇಂಜ್ ಆಯ್ತು. ತಾನೇ ಮೇಲೂ.. ತನ್ನ ಮುಂದೆ ಉಳಿದವರೆಲ್ಲ ಏನು ಅಲ್ಲ.. ತಾನೇ ಗೆಲ್ಲೋದು ಅಂತ ಧ್ರುವಂತ್ ಅಬ್ಬರಿಸಿದ್ರು. ಆದ್ರೀಗ ಧ್ರುವಂತ್ ರಾತ್ರೋ ರಾತ್ರಿ ಎಲಿಮಿನೇಟ್ ಆಗಿದ್ದಾರೆ.
ಕಳೆದ ಒಂದೆರಡು ವಾರದಿಂದ ಧ್ರುವಂತ್‌ಗೆ ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಹೈಪ್ ಕೊಡಲಾಗಿತ್ತು. ಈ ಕಿಚ್ಚನ ಸೀಸನ್ ಚಪ್ಪಾಳೆ ಧ್ರುವಂತ್‌ಗೆ ಸಿಕ್ಕಿತ್ತು. ವೀಕ್ಷಕರ ಆಕ್ರೋಶದ ಬೆನ್ನಲ್ಲೇ ಸೀಸನ್ ಚಪ್ಪಾಳೆಯನ್ನ ವಾರದ ಚಪ್ಪಾಳೆ ಅಂತ ಬದಲಾಯಿಸಲಾಯ್ತು. ಅದಾದ ಬಳಿಕವೂ ಧ್ರುವಂತ್‌ನ ಸಿಕ್ಕಾಪಟ್ಟೆ ಪಾಸಿಟಿವ್ ಆಗಿ ತೋರಿಸಲಾಯ್ತು. ಬಿಗ್‌ಬಾಸ್ ಅವರನ್ನ ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ್ರು. ಅಷ್ಟೇ ಅಲ್ಲ ನಿನ್ನೆಯ ಸಂಚಿಕೆಯಲ್ಲಿ ಧ್ರುವಂತ್ ಫ್ಯಾನ್ಸ್ ಜೊತೆ ಮಾತನಾಡುವಾಗ ನಾನು ಒನ್ ಮ್ಯಾನ್ ಆರ್ಮಿ. 22 ಜನರಿಂದ ಈಗ 6ಕ್ಕೆ ತಂದು ನಿಲ್ಲಿಸಿದ್ದೇನೆ. ಅವಕಾಶಗಳನ್ನು ಕಿತ್ತುಕೊಂಡು ಆಟವಾಡಿ ನಾನು ಏನು ಎಂಬುದನ್ನು ತೋರಿಸಿದ್ದೇನೆ ಎಂದು ಹೇಳಿದ್ದರು. ನಂತರ ಮನೆಯೊಳಗೆ ಬಂದು ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದನ್ನೆಲ್ಲಾ ನೋಡಿದ ವೀಕ್ಷಕರು, ಧ್ರುವಂತ್‌ನ ಗೆಲ್ಲೋಸೋ ಪ್ಲ್ಯಾನ್ ನಡೆದಿದ್ಯಾ? ಬೇಕಂತಲೇ ಇಷ್ಟೊಂದು ಹೈಪ್ ಕೊಡಲಾಗ್ತಿದ್ಯಾ? ಹೆಣ್ಣಿಗೆ ಅವಮಾನ ಮಾಡುವ ವ್ಯಕ್ತಿ ಗೆದ್ರೆ ನಾವು ಸಹಿಸಲ್ಲ ಅಂತ ವೀಕ್ಷಕರು ಆಕ್ರೋಶ ಹೊರ ಹಾಕಿದ್ರು. ಇನ್ನು ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ವೋಟಿಂಗ್ ಲೈನ್ ತೆರೆಯಲಾಗಿತ್ತು. ವೋಟಿಂಗ್ ಲೈನ್ ಕ್ಲೋಸ್ ಆಗ್ತಿದ್ದಂತೆ ಮಧ್ಯರಾತ್ರಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮಾಹಿತಿಗಳ ಪ್ರಕಾರ ಈಗ ದೊಡ್ಮನೆಯಿಂದ ಧ್ರುವಂತ್ ಔಟ್ ಆಗಿದ್ದಾರೆ.
ಇದೀಗ ಬಿಗ್‌ಬಾಸ್ ಧ್ರುವಂತ್‌ನ ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಹೊರ ಹಾಕಿದ್ಯಾಕೆ? ಬೇಕಂತಲೇ ಧ್ರುವಂತ್‌ಗೆ ಗೆಲ್ಲೋ ಆಸೆ ತೋರಿಸಿದ್ರಾ ಬಿಗ್‌ಬಾಸ್ ಅಂತ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಬಿಗ್‌ಬಾಸ್ ಇದು ವ್ಯಕ್ತಿತ್ವದ ಆಟ. ಇಲ್ಲಿ ಮಾತು, ಬಿಹೇವಿಯರ್, ಅಟ ಎಲ್ಲವೂ ಕೌಂಟ್ ಆಗುತ್ತೆ. ವೀಕ್ಷಕರೇ ಸ್ಪರ್ಧಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಧ್ರುವಂತ್ ಸೋಲಿಗೆ ಇದೇ ಕಾರಣವಾಯ್ತು. ಅಶ್ವಿನಿ ಶಿಷ್ಯನ ಇದೇ ಕಾರಣಕ್ಕೆ ಹೊರಬಂದಿದ್ದಾರೆ ಅಂತ ವೀಕ್ಷಕರು ಹೇಳ್ತಿದ್ದಾರೆ.
ಇನ್ನು ದೊಡ್ಮನೆಯಲ್ಲಿ ಸದ್ಯ 6 ಮಂದಿ ಇದ್ದಾರೆ. ಶನಿವಾರ ಸಂಚಿಕೆಯಲ್ಲಿ ಒಬ್ಬರು ಅಥವಾ ಇಬ್ಬರು ಮನೆಯಿಂದ ಹೊರಬರುವ ಸಾಧ್ಯತೆಗಳಿವೆ. ಇನ್ನುಳಿದ ಸ್ಪರ್ಧಿಗಳು ಫಿನಾಲೆ ದಿನವೇ ಸುದೀಪ್ ಜೊತೆ ಬಿಗ್‌ಬಾಸ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದೀಗ ಸೀಸನ್ 12ರ ಕಿರೀಟ ಯಾರಿಗೆ ಸಿಗಲಿದೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

