ಟಾಕ್ಸಿಕ್ ಬ್ಯೂಟಿ ಇನ್ಸ್ಟಾಗ್ರಾಮ್ ಖಾತೆ ನಾಪತ್ತೆ! – ರೊಮ್ಯಾನ್ಸ್ ಸೀನ್ ವಿವಾದ.. ಬೀಟ್ರಿಜ್ ಅಕೌಂಟ್ ಡಿಲೀಟ್ ಆಯ್ತಾ?

ಟಾಕ್ಸಿಕ್.. ದೇಶದಾದ್ಯಂತ ಸದ್ಯ ಸ್ಯಾಂಡಲ್ವುಡ್ ಸಿನಿಮಾದ್ದೇ ಸುದ್ದಿ. ಇತ್ತೀಚೆಗೆ ರಿಲೀಸ್ ಆದ ಟಾಕ್ಸಿಕ್ ಟೀಸರ್ನ ಕಾರ್ ಸೀನ್ ಬಗ್ಗೆಯೇ ಚರ್ಚೆ ನಡಿತಾ ಇದೆ. ಬ್ರೆಸಿಲ್ ಮೂಲದ ನಟಿ ಕಮ್ ಮಾಡೆಲ್ ಬೀಟ್ರಿಜ್ ಟೌಫೆನ್ ಬಾಚ್ ಟಾಕ್ಸಿಕ್ ಟೀಸರ್ನ ಕಾರ್ ಸೀನ್ನಲ್ಲಿ ಕಾಣಿಸಿಕೊಂಡಿದ್ರು. ಆದ್ರೀಗ ಬೀಟ್ರಿಜ್ ಟೌಫೆನ್ ಬಾಚ್ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಏಕಾಏಕಿ ಡಿಲೀಟ್ ಆಗಿದೆ.
ಇದನ್ನೂ ಓದಿ: ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ – ಬಿಗ್ಬಾಸ್ ಮನೆಯಲ್ಲಿ ಬಾಯಲ್ಲಿ ನೀರು ಸುರಿಸಿದ ರಘು, ರಕ್ಷಿತಾ, ಅಶ್ವಿನಿ ಗೌಡ
ಟಾಕ್ಸಿಕ್ ಟೀಸರ್ನಲ್ಲಿ ನಟಿ ಬೀಟ್ರಿಜ್ ಟೌಫೆನ್ ಬಾಚ್ ರೊಮ್ಯಾಂಟಿಕ್ ಸೀನ್ನಲ್ಲಿ ಕಾಣಿಸಿಕೊಂಡಿದ್ರು. ಸ್ಮಶಾನದ ಒಳಗಿರುವ ಕಾರಿನಲ್ಲಿ ಚಿತ್ರೀಕರಿಸಲಾದ ಈ ದೃಶ್ಯವು ಅತ್ಯಂತ ಬೋಲ್ಡ್ ಆಗಿದೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ಸೀನ್ ವೈರಲ್ ಆದ ಬೆನ್ನಲ್ಲೇ ಯಶ್ ಜೊತೆಗೆ ಇದ್ದ ನಟಿ ಯಾರು ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿನಿ ಪ್ರಿಯರು ಹುಡುಕಾಡಿದ್ರು. ಆರಂಭದಲ್ಲಿ ಯಶ್ ಜೊತೆ ನಟಿಸಿದ್ದ ನಟಾಲಿಯಾ ಬರ್ನ್ ಎಂದು ವದಂತಿಗಳು ಹಬ್ಬಿದ್ದವು. ಆದ್ರೆ ಸಿನಿಮಾ ನಿರ್ದೇಶಕಿ ಆದರೆ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಟೀಸರ್ನಲ್ಲಿ ಇರುವುದು ಬೀಟ್ರಿಜ್ ಟೌಫೆನ್ಬಾಚ್ ಎಂದು ಖಚಿತಪಡಿಸಿದ್ದರು. ಅದಾದ ಬಳಿಕ ಬೀಟ್ರಿಜ್ ಟೌಫೆನ್ಬಾಚ್ ಇನ್ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಿದೆ.
ಯಶ್ ಫ್ಯಾನ್ಸ್ ಬೀಟ್ರಿಜ್ ಅವರ ಅಕೌಂಟ್ ಅನ್ನು ಹುಡುಕಾಡಿದ್ದಾರೆ. ಆದ್ರೆ ಬೀಟ್ರೀಜ್ ಪ್ರೊಫೈಲ್ ಲಿಂಕ್ ನಿಷ್ಕ್ರಿಯಗೊಂಡಿರುವುದು ಕಂಡುಬಂದಿದೆ. ಕೆಲವು ಅಭಿಮಾನಿಗಳ ಖಾತೆಗಳು ಮಾತ್ರ ಸದ್ಯ ಲಭ್ಯವಿವೆ. ಆದರೆ ಅಂದು ಗೀತು ಮೋಹನ್ದಾಸ್ ಟ್ಯಾಗ್ ಮಾಡಿದ್ದ ಖಾತೆ ಈಗ ಕಾಣಿಸುತ್ತಿಲ್ಲ. ಇದೀಗ ಟಾಕ್ಸಿಕ್ ಟೀಸರ್ನ ಈ ದೃಶ್ಯದ ಸುತ್ತ ವಿವಾದ ಉಂಟಾಗಿದ್ದಕ್ಕೆ ಬೀಟ್ರಿಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ರಾ? ಅಥವಾ ಬೇರೆಯದೇ ಕಾರಣಗಳಿಗೆ ಅಕೌಂಟ್ನ ಡಿಆಕ್ಟಿವೇಟ್ ಮಾಡಿದ್ದಾರಾ ಅನ್ನೋದು ಗೊತ್ತಾಗಿಲ್ಲ.
ಅಂದ್ಹಾಗೆ, ಬೀಟ್ರಿಜ್ ಟೌಫೆನ್ಬಾಚ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದ್ದದ್ದು ಬರೀ ಸಾವಿರ ಫಾಲೋವರ್ಸ್. ಅಲ್ಲದೇ, ಅವರು ತಮ್ಮ ಖಾತೆಯನ್ನು ಪ್ರೈವೆಟ್ ಇಟ್ಟುಕೊಂಡಿದ್ದರು. ಸುಲಭವಾಗಿ ಯಾರು ಅವರ ಖಾತೆಯನ್ನು ಫಾಲೋ ಮಾಡಲು ಸಾಧ್ಯವಿರಲಿಲ್ಲ. ಯಶ್ ಜೊತೆ ನಟಿಸಿರುವುದು ನಟಾಲಿಯಾ ಬರ್ನ್ ಎಂದು ಗೊತ್ತಾದ ಕೆಲವೇ ಗಂಟೆಗಳಲ್ಲಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 50 ಸಾವಿರ ಜಾಸ್ತಿ ಆಗಿತ್ತು. ಆನಂತರ ಅದು ನಟಾಲಿಯಾ ಅಲ್ಲ, ಬೀಟ್ರಿಜ್ ಟೌಫೆನ್ಬಾಚ್ ಎಂದು ಗೊತ್ತಾದಾಗ, ಬಹುಶಃ ಅವರಿಗೂ ಕೂಡ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ರಿಕ್ವೆಸ್ಟ್ಗಳು ಜಾಸ್ತಿ ಆಗಿರಬೇಕು. ಇದರಿಂದ ಏನಾದರೂ ಅವರಿಗೆ ಕಿರಿಕಿರಿ ಆಯ್ತಾ? ಆ ಕಾರಣಕ್ಕೆ ಅಕೌಂಟ್ನ ಡಿಲೀಟ್ ಅಥವಾ ಇನ್ಆಕ್ಟೀವ್ ಮಾಡಿದ್ರಾ ಎಂಬ ಮಾತುಗಳು ಕೇಳಿಬಂದಿವೆ.

ನೋಡಿರಿ

