ಅಭಿಮಾನಿಗಳ ಮುಂದೆ ಗಿಲ್ಲಿ ನಟನ ಕ್ರೇಜ್ – ಮನಿ ಮತ್ತು ಅಭಿಮಾನಿಗೆ ವ್ಯತ್ಯಾಸ ತಿಳಿಸಿ ಮನಗೆದ್ದ ಗಿಲ್ಲಿ

ಅಭಿಮಾನಿಗಳ ಮುಂದೆ ಗಿಲ್ಲಿ ನಟನ ಕ್ರೇಜ್ –  ಮನಿ ಮತ್ತು ಅಭಿಮಾನಿಗೆ ವ್ಯತ್ಯಾಸ ತಿಳಿಸಿ ಮನಗೆದ್ದ ಗಿಲ್ಲಿ

ಬಿಗ್​ಬಾಸ್ ಮನೆಯಲ್ಲಿ ಅಭಿಮಾನಿಗಳು ಈಗಾಗಲೇ ಕಾವ್ಯ, ಧ್ರುವಂತ್, ಧನುಷ್ ಮತ್ತು ರಕ್ಷಿತಾರನ್ನು ಭೇಟಿಯಾಗಿದ್ದಾರೆ. ಆದರೆ, ಕುತೂಹಲ ಇದ್ದಿದ್ದು, ಗಿಲ್ಲಿ ನಟನ ನೋಡಿ ಅಭಿಮಾನಿಗಳ ರಿಯಾಕ್ಷನ್ ಹೇಗಿರುತ್ತೆ ಅನ್ನೋದು. ಬುಧವಾರದ ಎಪಿಸೋಡ್‌ನಲ್ಲಿ ಅಭಿಮಾನಿಗಳ ಜೊತೆ ಗಿಲ್ಲಿ ನಟನ ಪಂಚ್ ಮಾತುಗಳು ಹೇಗಿತ್ತು ಅನ್ನೋದು ಪ್ರಸಾರವಾಗಲಿದೆ.

ಇದನ್ನೂ ಓದಿ:ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ – ಬಿಗ್ಬಾಸ್ ಮನೆಯಲ್ಲಿ ಬಾಯಲ್ಲಿ ನೀರು ಸುರಿಸಿದ ರಘು, ರಕ್ಷಿತಾ, ಅಶ್ವಿನಿ ಗೌಡ

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟನನ್ನು ಅಭಿಮಾನಿಗಳು ಭೇಟಿಯಾಗಿದ್ದಾರೆ. ಅಭಿಮಾನಿಗಳ ಮುಂದೆ ಗಿಲ್ಲಿ ನಟ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಮೀಟ್ರ್ ಇದ್ರೆ ಲಡಾಯ್ಸು, ಮುಂದೆ ಬಂದ್ರೆ ಉಡಾಯ್ಸು. ಆದ್ರೆ ಜೊತೆಲಿದ್ದು ಕಡಾಯಿಸ್ಬೇಡ ಎಂದು ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ ಗಿಲ್ಲಿ. ಜೊತೆಗೆ ಮನಿಗೂ ಮತ್ತು ಅಭಿಮಾನಿಗೂ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ನಾನು ಎಮೋಷನಲ್ ಆಗ್ಬಿಟ್ಟೆ. ಮನಿ ಇವತ್ತು ಬರುತ್ತೆ, ನಾಳೆ ಹೋಗುತ್ತೆ ಆದ್ರೆ ಅಭಿಮಾನಿ ಒಮ್ಮೆ ಬಂದ್ರೆ ಯಾವತ್ತೂ ಹೋಗಲ್ಲ ಅಂತ ಸಖತ್ ಡೈಲಾಗ್ ಹೊಡೆದಿದ್ದಾರೆ ಗಿಲ್ಲಿ ನಟ.

ಟಿಪ್ ಟಾಪಾಗಿ ಸೂಟ್ ಧರಿಸಿಕೊಂಡು ಬಂದ ಗಿಲ್ಲಿನ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ತುಂಬಾ ಸಂಭ್ರಮದಿಂದ ಗಿಲ್ಲಿನ ನೋಡಿ ಖುಷಿ ಪಟ್ಟಿದ್ದಾರೆ. ಗಿಲ್ಲಿ ಕೂಡಾ ಅಭಿಮಾನಿಗಳ ಮಧ್ಯೆ ಸ್ಟೆಪ್ ಹಾಕಿ ​ ಎಂಜಾಯ್ ಮಾಡಿದ್ದಾರೆ. ಜೊತೆಗೆ ಡಮಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದು ಪಕ್ಕಾ ಅಂತಾ ಅಭಿಮಾನಿಗಳು ಹೇಳುವುದರ ಮೂಲಕ ಖುಷಿ ಪಟ್ಟಿದ್ದಾರೆ.

ಶನಿವಾರ, ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮಿಡ್ ವೀಕ್ ಎಲಿಮಿನೇಷನ್ ಎಂಬ ಅಚ್ಚರಿ ಮುನ್ಸೂಚನೆ ಕೂಡಾ ಬುಧವಾರದ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

Sulekha