ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ – ಬಿಗ್ಬಾಸ್ ಮನೆಯಲ್ಲಿ ಬಾಯಲ್ಲಿ ನೀರು ಸುರಿಸಿದ ರಘು, ರಕ್ಷಿತಾ, ಅಶ್ವಿನಿ ಗೌಡ

ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ – ಬಿಗ್ಬಾಸ್ ಮನೆಯಲ್ಲಿ ಬಾಯಲ್ಲಿ ನೀರು ಸುರಿಸಿದ ರಘು, ರಕ್ಷಿತಾ, ಅಶ್ವಿನಿ ಗೌಡ

ಬಿಗ್‌ಬಾಸ್ ಮನೆಯಲ್ಲಿ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿಗಳಿಗೆ ಮೂರು ಆಸೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದರಲ್ಲಿ ಗಿಲ್ಲಿ ನಟನ ಕೋರಿಕೆಗೆ ದೊಡ್ಮನೆ ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ. ಅಷ್ಟೇ ಯಾಕೆ ಗಿಲ್ಲಿ ಆಸೆ ಈಡೇರಿದ್ದಕ್ಕೆ ಬಾಯಲ್ಲಿ ನೀರೂರಿಸಿಕೊಂಡು ಆಸೆ ಪಡುತ್ತಾ ನಿಟ್ಟುಸಿರುಬಿಟ್ಟಿದ್ದಾರೆ. ಮಂಗಳವಾರ ಪ್ರಸಾರವಾದ ಈ ಎಪಿಸೋಡ್ ನೋಡಿ ಗಿಲ್ಲಿ ಅಭಿಮಾನಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಇದನ್ನೂ ಓದಿ:ರಕ್ಷಿತಾ ಶೆಟ್ಟಿ ಜೊತೆ ಗಿಲ್ಲಿ ಪವಿತ್ರ ಬಂಧನ – ಕಾವ್ಯಾಗೆ ಫಿನಾಲೆ ವೀಕ್‌ನಲ್ಲಿ ಶಾಕ್ ಕೊಟ್ಟ ಗಿಲ್ಲಿ

ಬಿಗ್‌ಬಾಸ್‌ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿ ಗಿಲ್ಲಿ ನಟನ ಮೂರು ಆಸೆಗಳ ಪೈಕಿ ಒಂದನ್ನು ಈಡೇರಿಸಲಾಗಿದೆ. ಅವರ ಬೇಡಿಕೆಯಂತೆ ನಲ್ಲಿ ಮೂಳೆ ಊಟವನ್ನು ಬಿಗ್‌ಬಾಸ್ ನೀಡಿದ್ದಾರೆ. ಅಷ್ಟೇ ಯಾಕೆ ಊಟದ ನಂತರ ಒಂದು ಗಂಟೆ ನಿದ್ರಿಸಲು ಅವಕಾಶ ಕೂಡಾ ಗಿಲ್ಲಿಗೆ ಸಿಕ್ಕಿದೆ. ಈ ಸಮಯದಲ್ಲಿ ಇಡೀ ಬಿಗ್‌ಬಾಸ್‌ ಮನೆ ಸಂಪೂರ್ಣ ಸೈಲೆಂಟ್ ಆಗಿತ್ತು. ಈ ಮಧ್ಯೆ ಅಶ್ವಿನಿ ಅವರ ಡೈಲಾಗ್ ನ್ನು ಗಿಲ್ಲಿ ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಗಿಲ್ಲಿ ಒಬ್ಬನಿಗೆ ಇಂಥಾ ಐಡಿಯಾ ಹೊಳೆಯುವುದು ಎಂದು ಅಶ್ವಿನಿ ಹೇಳಿದ್ದಾರೆ. ಯಾಕೆಂದರೆ, ಗಿಲ್ಲಿ ಎಲ್ಲರ ಎದುರು ನಲ್ಲಿ ಮೂಳೆ ತಿನ್ನುತ್ತಾ ಇದ್ದರೆ, ಉಳಿದವರು ನಮಗೆ ಯಾಕೆ ಇಂಥಾ ಐಡಿಯಾ ಹೊಳೆಯಲಿಲ್ಲ ಎಂಬ ವಿಚಾರ ಮಾತಾಡಿದ್ದರು.

ಬಿಗ್‌ಬಾಸ್‌ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ತಲಾ ಮೂರು ಆಸೆಯನ್ನು ತಿಳಿಸುವಂತೆ ಸೂಚಿಸಲಾಗಿತ್ತು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ಬಿಗ್‌ಬಾಸ್‌ ಮುಂದೆ ಇಟ್ಟಿದ್ದಾರೆ. ಗಿಲ್ಲಿ ನಟ ಬಹಳ ಸ್ಪೆಷಲ್‌ ಆಗಿ ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಆಸೆಯನ್ನು ತಿಳಿಸಿದರು. ಅದರಂತೆ, ನನಗೆ ‘ನಲ್ಲಿ ಮೂಳೆ’ ಅಂದ್ರೆ ತುಂಬಾ ಇಷ್ಟ, ಅದನ್ನ ಹೊಟ್ಟೆ ತುಂಬಾ ತಿನ್ನಬೇಕು. ತಿಂದ ಬಳಿಕ ಒಂದು ಗಂಟೆ ಮಲಗಲು ಅವಕಾಶ ಕೊಡಬೇಕು. ಮಲಗಿದಾಗ ನಾಯಿ ಬೊಗಳುವ ಸೌಂಡ್ ಬರಬಾರದು ಎಂದು ಬೇಡಿಕೆ ಇಟ್ಟಿದ್ದರು. ಆ ಬಳಿಕ ಬಿಗ್‌ಬಾಸ್‌ ಮನೆಯಲ್ಲಿರುವ ಆನೆಯ ಮೇಲೆ ಒಮ್ಮೆ ಕುಳಿತುಕೊಳ್ಳಬೇಕು ಹಾಗೂ ಬಿಗ್‌ಬಾಸ್‌ ಮನೆಯ ಟಿವಿಯಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಮೂರು ಆಸೆಗಳ ಪೈಕಿ ಒಂದನ್ನು ಬಿಗ್‌ಬಾಸ್‌ ಈಡೇರಿಸುವುದಾಗಿ ತಿಳಿಸಿದ್ದರು. ಅದರಂತೆ ಗಿಲ್ಲಿ ನಟನಿಗೆ ತಟ್ಟೆ ತುಂಬಾ ನಲ್ಲಿ ಮೂಳೆ ಕೊಡಲಾಗಿತ್ತು. ಎಲ್ಲರೆದುರೇ ಗಿಲ್ಲಿ ನಲ್ಲಿ ಮೂಳೆಯನ್ನು ಚಪ್ಪರಿಸಿಕೊಂಡು ತಿಂದರು. ದೊಡ್ಡದಾಗಿ ತೇಗು ತೆಗೆದು ಎಲ್ಲರ ಹೊಟ್ಟೆಯುರಿಸಿದರು. ಅದರಲ್ಲೂ ರಘು ಒಂದಾದರು ಕೊಡೋ ಅಂತಾ ಪರಿ ಪರಿಯಾಗಿ ಕೇಳಿದರು. ಅಶ್ವಿನಿ ಕೂಡಾ ಆಸೆಯಲ್ಲೇ ಗಿಲ್ಲಿಯನ್ನು ನೋಡಿದರು. ಪಾಪ.. ರಕ್ಷಿತಾ ಗಿಲ್ಲಿ ತಿನ್ನುತ್ತಿರುವುದನ್ನ ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ನೋಡುತ್ತಾ ಇದ್ದರು. ಆದರೂ ಗಿಲ್ಲಿ ಯಾರಿಗೂ ಕೇರೇ ಮಾಡಲಿಲ್ಲ. ತನ್ನ ಆಸೆ, ತನ್ನ ನಲ್ಲಿ ಮೂಳೆ ಅನ್ನೋ ರೀತಿಯಲ್ಲಿ ತಿಂದು ತೇಗಿದರು. ನಂತರ ನೆಮ್ಮದಿಯಲ್ಲಿ ನಿದ್ದೆಗೆ ಜಾರಿದರು.

ಗಿಲ್ಲಿ ನಟನ ಸ್ಟೈಲ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಜೊತೆಗೆ ಗಿಲ್ಲಿಯ ಈ ವರ್ತನೆಯೂ ಕೂಡಾ ಮಜವಾಗಿತ್ತು. ಇದೇ ಮಜಾ ಅಭಿಮಾನಿಗಳಿಗೂ ಬೇಕಿರುವುದು. ಕೇವಲ ವ್ಯಕ್ತಿತ್ವ ಅಂತಾ ತನ್ನ ಮನೆಯವರನ್ನು ಕರೆಸೋದು, ಸ್ನೇಹಿತರನ್ನು ಕರೆಸೋದು, ತಮ್ಮದೇ ಸುತ್ತ ತಿರುಗುವುದು ಗಿಲ್ಲಿಯ ಆಟವಲ್ಲ. ಗಿಲ್ಲಿ ಯಾವತ್ತೂ ಕೂಡಾ ವೀಕ್ಷಕರನ್ನು ಖುಷಿ ಪಡಿಸುತ್ತಾರೆ. ಇದೇ ಇವರ ಗೆಲುವಿಗೆ ಕಾರಣವಾದರೂ ಅಚ್ಚರಿಯೇನಿಲ್ಲ,

Sulekha