ಹರ್ಮನ್ಪ್ರೀತ್ ಕೌರ್ ಅರ್ಧಶತಕ ಬಲ – ಗುಜರಾತ್ ವಿರುದ್ಧ ಗೆದ್ದ ಮುಂಬೈ

WPLನಲ್ಲಿ ಹರ್ಮನ್ಪ್ರೀತ್ ಕೌರ್ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ ಗುಜರಾತ್ ಜಯಂಟ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿತು. ಆ ಮೂಲಕ ಈ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆಯುವ ಮೂಲಕ ಮುಂಬೈ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬೌಲಿಂಗ್ ವೈಫಲ್ಯ ಹಾಗೂ ಕೆಲ ಕ್ಯಾಚ್ಗಳ ಕೈಚೆಲ್ಲಿದ ಪರಿಣಾಮ ಆಶ್ಲೆ ಗಾರ್ಡ್ನರ್ ನಾಯಕತ್ವದ ಗುಜರಾತ್ ತಂಡ, ಸೀಸನ್ನ ಮೊದಲ ಸೋಲು ಅನುಭವಿಸಿತು.
ಇದನ್ನೂ ಓದಿ: ಕರ್ನಾಟಕಕ್ಕೆ ದೇವದತ್ತ ಪಡಿಕ್ಕಲ್ – 721 ರನ್ಸ್.. ಸತತ 4ನೇ ಸಲ ಸೆಮೀಸ್
ನಿನ್ನೆ ( ಮಂಗಳವಾರ) ಡಿ ವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಗುಜರಾತ್ ಜಯಂಟ್ಸ್ ನೀಡಿದ್ದ 193 ರನ್ಗಳ ಗುರಿಯನ್ನುಬೆನ್ನಟ್ಟಿದ MI ಹರ್ಮನ್ಪ್ರೀತ್ ಕೌರ್ ಹಾಗೂ ಅಮನ್ಜೋತ್ ಕೌರ್ ಅವರ ಬ್ಯಾಟಿಂಗ್ ಬಲದಿಂದ, 19.2 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಗುರಿಯನ್ನು ಹಿಂಬಾಲಿಸಿದ್ದ ಮುಂಬೈಗೆ ಉತ್ತರ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಆಟಗಾರ್ತಿಯರಾದ ಜಿ ಕಮಲಿನಿ (13) ಹಾಗೂ ಹೇಯ್ಲೆ ಮ್ಯಾಥ್ಯೂಸ್ (22) ಅವರು ಬಹುಬೇಗ ವಿಕೆಟ್ ಒಪ್ಪಿಸಿದ್ದರು.
ಮುಂಬೈ ಇಂಡಿಯನ್ಸ್ ನಾಯಕಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅವರು ಗುಜರಾತ್ ಟೈಟನ್ಸ್ ತಂಡದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅವರು, 43 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 71 ರನ್ಗಳನು ಗಳಿಸಿದರು ಹಾಗೂ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಇವರು ಅಮನ್ಜೋತ್ ಕೌರ್ (40) ಅವರ ಜೊತೆಗೆ 72 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಇದಾದ ಬಳಿಕ ನಿಕೋಲಾ ಕೇರಿ (38* ರನ್) ಅವರ ಜೊತೆ 84 ರನ್ಗಳ ದೊಡ್ಡ ಜೊತೆಯಾಟವನ್ನು ಆಡಿದರು.

ನೋಡಿರಿ

