ಇಂದು ಎಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ, ಸಡಗರ – ಇವತ್ತು ಅಪ್ಪಿತಪ್ಪಿ ಈ ತಪ್ಪು ಮಾಡಬೇಡಿ

ಇಂದು ಎಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಈ ಸಲ ಕಾಕತಾಳೀಯದಂತೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೇ ಶಟ್ಟಿಲ ಏಕಾದಶಿಯೂ ಇದೆ. 23 ವರ್ಷಗಳ ಬಳಿಕ ಈ ಅಪರೂಪದ ಸಂಯೋಜನೆಯಾಗುತ್ತಿದ್ದು, ಧಾರ್ಮಿಕವಾಗಿ ಇದೊಂದು ಮಹತ್ವದ ಕಾಲಘಟ್ಟ. ಹಿಂದೆ 2003ರಲ್ಲಿ ಸಂಕ್ರಾಂತಿ ಹಬ್ಬ ಮತ್ತು ಶಟ್ಟಿಲ ಏಕಾದಶಿ ಒಟ್ಟಿಗೇ ಬಂದಿತ್ತು. ಈ ಸಲ ಮತ್ತೆ ಬಂದಿದ್ದು, ಜನರು ಸೂರ್ಯ ಮತ್ತು ವಿಷ್ಣುವಿನ ಆರಾಧನೆ ಮಾಡಬೇಕು. ಇಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಎಲ್ಲೆಡೆ ಸಂಭ್ರಮ, ಸಢಗರ ಮನೆ ಮಾಡಿದೆ.
ಇನ್ನು ಮಕರ ಸಂಕ್ರಾಂತಿ ಮತ್ತು ಶಟ್ಟಿಲ ಏಕಾದಶಿಯ ದಿನವಾದ ಇಂದು (ಜ.14ರಂದು) ತುಳಸಿ ಗಿಡಕ್ಕೆ ಸಂಬಂದಪಟ್ಟ ಇದೊಂದು ತಪ್ಪನ್ನ ಮಾಡಬಾರದು. ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನ ಅಂದು ಕೊಯ್ಯಲೇಬಾರದು. ಜ.14ರಂದು ತುಳಸಿ ಎಲೆಯನ್ನ ಕೊಯ್ಯುವುದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ..
ತುಳಸಿಗೆ ನೀರು ಹಾಕಬೇಡಿ..
ಇನ್ನೊಂದು ಮಹತ್ವದ ಸಂಗತಿಯೆಂದರೆ ಸಂಕ್ರಮಣದಂದು ಬಂದಿರುವ ಶಟ್ಟಿಲ ಏಕಾದಶಿ ಸೇರಿ ಯಾವುದೇ ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಸುರಿಯುವುದು ನಿಷಿದ್ಧ. ಏಕಾದಶಿಯಂದು ತುಳಸಿ ದೇವಿಯು ವಿಷ್ಣುವಿಗಾಗಿ ಉಪವಾಸ ಆಚರಿಸುತ್ತಾಳೆ. ಅವಳು ನೀರನ್ನೂ ಕುಡಿಯುವುದಿಲ್ಲ. ಅಂಥದ್ದರಲ್ಲಿ ನಾವು ನೀರು ಹಾಕಬಾರದು. ಏಕಾದಶಿಯಂದು ತುಳಸಿಗೆ ನೀರು ಅರ್ಪಿಸಿದರೆ ನಮ್ಮ ಪುಣ್ಯದ ಫಲ ಕಡಿಮೆಯಾಗುತ್ತದೆ. ಇನ್ನು ಭಾನುವಾರ ಮತ್ತು ಗ್ರಹಣ ಕಾಲದಲ್ಲಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬಾರದು.
ಅಶುದ್ಧ ಕೈಗಳಿಂದ ಮುಟ್ಬೇಡಿ
ಏಕಾದಶಿಯಂದು ತುಳಸಿ ಗಿಡಗಳನ್ನ ಅಶುದ್ಧವಾದ ಕೈಗಳಿಂದ ಮುಟ್ಟಬಾರದು. ಹೀಗೆ ಮಾಡಿದರೆ ಲಕ್ಷ್ಮೀ ದೇವಿಗೆ ಕೋಪ ಬರುತ್ತದೆ. ಹಾಗೇ, ಆ ದಿನ ಸಂಜೆ ಹೊತ್ತು ತುಳಸಿ ಗಿಡದ ಎದುರು ದೀಪ ಹಚ್ಚಿಡಿ. ಮಕರ ಸಂಕ್ರಾಂತಿ ಹಬ್ಬ ಮತ್ತು ಶಟ್ಟಿಲ ಏಕಾದಶಿ ಒಟ್ಟಿಗೇ ಬಂದಿರುವುದರಿಂದ ನೀವು ಪೂಜೆ-ಪ್ರಾರ್ಥನೆಗಳನ್ನ ಜಾಸ್ತಿ ಮಾಡಬೇಕು. ಈ ದಿನ ದಾನಗಳನ್ನ ಮಾಡಬೇಕು. ಉಳಿದ ದಿನ ಪೂಜೆ ಮಾಡಿದಾಗ ಸಿಗುವ ಪುಣ್ಯದ ಹತ್ತರಷ್ಟು ಹೆಚ್ಚು ಪುಣ್ಯ ಈ ದಿನದ ಪೂಜೆಯಿಂದ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಮಕರ ಸಂಕ್ರಾಂತಿ ಹಬ್ಬದ ದಿನ ನೀವು ಸೂರ್ಯನನ್ನೂ ಪೂಜಿಸಬೇಕು.

ನೋಡಿರಿ

