ಲಕ್ಕುಂಡಿ ನಿಧಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! – ಚಿನ್ನ ಕೊಡಿ.. ಅಪಶಕುನದ ಜಾಗ ಬೇಡ ಎಂದ ಕುಟುಂಬ!

ಲಕ್ಕುಂಡಿ ನಿಧಿ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಮನೆ ಪಾಯ ತೆಗೆಯುವಾಗ ಸಿಕ್ಕಿರೋದು ನಿಧಿ ಅಲ್ಲ, ಹಿರಿಯರ ಒಡವೆ ಎಂದು ಹೇಳಲಾಗ್ತಿದೆ. ಈ ಬೆನ್ನಲ್ಲೇ ಚಿನ್ನ ವಾಪಾಸ್ ಕೊಡುವಂತೆ ಆ ಕುಟುಂಬ ಮನವಿ ಮಾಡಿತ್ತು. ಇದೀಗ ಕಡೆಗೂ ರಿಕ್ತಿ ಕುಟುಂಬಕ್ಕೆ ಪರಿಹಾರದ ಭರವಸೆ ಸಿಕ್ಕಿದೆ. ಕುಟುಂಬಕ್ಕೆ ನಿಧಿಯ ಐದನೇ ಒಂದು ಭಾಗ ಹಾಗೂ ಮಾಲೀಕರ ಮಗನಿಗೆ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಲಾಗಿದೆ. ಈ ನಡುವೆ, ನಮಗೆ ಅಪಶಕುನದ ಜಾಗ ಎಂದು ರಿತ್ತಿ ಕುಟುಂಬ ಹೇಳಿದೆ.
ಇದನ್ನೂ ಓದಿ: ಫ್ಯಾನ್ಸ್ ಮುಂದೆ ದೊಡ್ಮನೆ ಮಂದಿ ಟಾಕ್ – ಗಿಲ್ಲಿಯೇ ಕಿಂಗ್.. ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್!
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿಧಿ ಸಿಕ್ಕ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಇದ್ರಿಂದಾಗಿ ರಿಕ್ತಿ ಕುಟುಂಬ ಬೇರೆಯವರ ಆಶ್ರಯ ಪಡೆಯುವಂತೆ ಆಗಿತ್ತು. ಇದೀಗ ನಿಧಿ ಸಿಕ್ಕ ಸ್ಥಳಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಧಿ ಕಾಯ್ದೆ ಪ್ರಕಾರ ಕುಟುಂಬಕ್ಕೆ ಸಿಗಬೇಕಾದ ಪಾಲಿನ ಬಗ್ಗೆ ಮಾಹಿತಿ ನೀಡಿದ ಪುರಾತತ್ವ ಇಲಾಖೆ ನಿರ್ದೇಶಕ ಶೈಜೇಶ್ವರ್ ಅವರು, ನಿಧಿಯ ಐದನೇ ಒಂದು ಭಾಗವನ್ನು ಕುಟುಂಬಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಿಧಿಯ ಐದನೇ ಒಂದು ಭಾಗವನ್ನು ನಗದು ರೂಪದಲ್ಲಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ರಿತ್ತಿ ಕುಟುಂಬದ ಬಾಲಕ ಪ್ರಜ್ವಲ್ ರಿತ್ತಿ ಸದ್ಯ ಎಂಟನೇ ತರಗತಿಯಲ್ಲಿ ಓದುತ್ತಿದ್ದು, ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಲಕ್ಕುಂಡಿ ಬಿ.ಹೆಚ್ ಪಾಟೀಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸಿದ್ದು ಪಾಟೀಲ ಘೋಷಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ಲಕ್ಷ್ಮೀ ದೇವಾಲಯದ ಹಿಂಭಾಗದಲ್ಲಿರುವ ರಿತ್ತಿ ಕುಟುಂಬದ ಜಾಗದಲ್ಲಿ ಚಿನ್ನದ ನಿಧಿ ಪತ್ತೆಯಾಗಿರುವುದರಿಂದ ಈ ಪ್ರದೇಶ ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಿಧಿ ಸಿಕ್ಕಿರುವ ಜಾಗವನ್ನು ತಮ್ಮ ವಶದಲ್ಲಿಡಲು ಕುಟುಂಬ ನಿರಾಕರಿಸಿದ್ದು, ಅದನ್ನು ‘ಅಪಶಕುನದ ಜಾಗ’ ಎಂದು ಪರಿಗಣಿಸಿ, ಅಲ್ಲಿ ದೇವಸ್ಥಾನ ನಿರ್ಮಿಸಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ.
ರಿತ್ತಿ ಕುಟುಂಬದ ಸದಸ್ಯರ ಹೇಳಿಕೆಯಂತೆ, ನಿಧಿ ಪತ್ತೆಯಾದ ಬಳಿಕ ಆ ಜಾಗದಲ್ಲಿ ಅನಾಹುತಗಳು ಸಂಭವಿಸುವ ಭಯ ಕಾಡುತ್ತಿದೆ. ಆ ಜಾಗದಿಂದ ದೊಡ್ಡ ಸರ್ಪ ಎದ್ದಿದೆ. ಒಂದಲ್ಲ ಒಂದು ದಿನ ಕಚ್ಚಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನ ಭವಿಷ್ಯ ನಮಗೆ ಮುಖ್ಯ. ಹೀಗಾಗಿ ಆ ಜಾಗ ನಮಗೆ ಬೇಡ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆ ಬೆಂಕಿ ದೇವರಿಗೆ ಇರಲಿ. ನಮಗೆ ಬೇರೆ ಕಡೆ ಜೀವನ ನಡೆಸಲು ದಾರಿ ಮಾಡಿಕೊಡಿ. ಆ ದಾರಿಯಲ್ಲಿ ಬೆಂಕಿ ಕಟ್ಟಿಕೊಂಡು ಮುಂದೆ ಹೋದ್ರೆ ಚರ್ಮ ಸುಡುತ್ತೆ. ಹೀಗಾಗಿ ತಾಯಿ ಮತ್ತು ಮಗನಿಗೆ ಸುರಕ್ಷಿತ ಸ್ಥಳದಲ್ಲಿ ಮನೆ ಕಟ್ಟಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನೋಡಿರಿ

