ಫ್ಯಾನ್ಸ್‌ ಮುಂದೆ ದೊಡ್ಮನೆ ಮಂದಿ ಟಾಕ್ – ಗಿಲ್ಲಿಯೇ ಕಿಂಗ್‌.. ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್!‌

ಫ್ಯಾನ್ಸ್‌ ಮುಂದೆ ದೊಡ್ಮನೆ ಮಂದಿ ಟಾಕ್ – ಗಿಲ್ಲಿಯೇ ಕಿಂಗ್‌.. ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್!‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಕಪ್‌ ಗೆಲ್ಲಲು ಎಂದು ಸ್ಪರ್ಧಿಗಳು ಫುಲ್‌ ಅಲರ್ಟ್‌ ಆಗಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ದೊಡ್ಮನೆಗೆ ಸಾಮಾನ್ಯ ಜನರು ಆಗಮಿಸಿದ್ದಾರೆ. ಎಲ್ಲ ಸ್ಪರ್ಧಿಗಳು ವೋಟ್‌ ಹಾಕುವಂತೆ ಮನವಿ ಮಾಡಿದ್ದಾರೆ. ಆದ್ರೀಗ ಪ್ರೋಮೋದಲ್ಲಿ ಈ ಸ್ಪರ್ಧಿ ಮಿಸ್‌ ಆಗಿರೋದನ್ನ ನೋಡಿ ಫ್ಯಾನ್ಸ್‌ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಜೊತೆ ಸಿಎಂ, ಡಿಸಿಎಂ ಲಂಚ್‌ ಮೀಟಿಂಗ್‌! – ಸಂಪುಟ ಪುನರ್ ರಚನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

ಬಿಗ್‌ಬಾಸ್‌ ಮನೆಯಲ್ಲಿ ಸದ್ಯ 7 ಮಂದಿ ಇದ್ದಾರೆ. ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌ ನಡೆಯಲಿದೆ. ಇಂದು ಸಂಜೆ ವೋಟಿಂಗ್‌ ಲೈನ್‌ ಕ್ಲೋಸ್‌ ಆಗಲಿದೆ. ಇದೀಗ ಸ್ಪರ್ಧಿಗಳು ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ದೊಡ್ಮನೆಗೆ ಸ್ಪರ್ಧಿಗಳ ಅಭಿಮಾನಿಗಳು ಬಂದಿದ್ದು, ಅವರ ಮುಂದೆ ವೋಟ್‌ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಇವೆಲ್ಲದ್ರ ನಡುವೆ ಪ್ರೋಮೋದಲ್ಲಿ ಗಿಲ್ಲಿ ಎಲ್ಲಿ? ಗಿಲ್ಲಿ ಯಾಕೆ ಮಿಸ್ಸಿಂಗ್‌ ಎಂದು ವೀಕ್ಷಕರು ಕೇಳುತ್ತಿದ್ದಾರೆ.

ಬೆಳಗ್ಗೆ ರಿಲೀಸ್‌ ಆದ ಪ್ರೋಮೋದಲ್ಲಿ ಗಾರ್ಡನ್ ಏರಿಯಾದಲ್ಲಿ ಸುಂದರವಾದ ವೇದಿಕೆ ನಿರ್ಮಿಸಲಾಗಿದೆ. ಕೆಳಗೆ ಅಭಿಮಾನಿಗಳನ್ನ ನಿಲ್ಲಿಸಲಾಗಿದೆ. ಸ್ಪರ್ಧಿಗಳು ಇಲ್ಲಿಗೆ ಬಂದು ಅಭಿಮಾನಿಗಳೊಂದಿಗೆ ಮುಕ್ತವಾಗಿ ಮಾತನಾಡಬಹುದು. ಇಂದಿನ ಪ್ರೋಮೋದಲ್ಲಿ ಧ್ರುವಂತ್, ಧನುಷ್ ಮತ್ತು ಕಾವ್ಯಾ ಅವರು ಅಭಿಮಾನಿಗಳ ಜೊತೆಗಿನ ಮಾತುಕತೆಯನ್ನು ತೋರಿಸಲಾಗಿದೆ.

ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ, ಯಾರೇ ಆಗಿರಲಿ ಅಷ್ಟೂ ಜನರನ್ನು ನಾನು ಮಟ್ಟ ಹಾಕಿದ್ದೀನಿ ಎಂದಿದ್ದಾರೆ ಧ್ರುವಂತ್‌, ಇನ್ನು ಧನುಷ್‌ ಅವರು, ಇಷ್ಟು ಕಷ್ಟ ಪಟ್ಟಿದ್ದೀನಿ, ಅಷ್ಟು ಕಷ್ಟ ಪಟ್ಟಿದ್ದೀನಿ ಅಂತ ಹೇಳಲ್ಲ. ಒಬ್ಬರು ಬೆಳಿಬೇಕು ಅಂದರೆ ಅವರು ಅವರೇ ಕಷ್ಟ ಪಡಬೇಕು. ನಿಮಗೆಲ್ಲರಿಗೂ ನಾನು ಫ್ಯಾನ್‌ ಆದೆ, ನೀವೆಲ್ಲ ನನಗೆ ಸ್ಟಾರ್‌ ಆದ್ರಿ ಎಂದಿದ್ದಾರೆ.

ಈ ಪ್ರೋಮೋ ನೋಡಿದ ವೀಕ್ಷಕರು, ನಮಗೆ ಇದಲ್ಲ ಅದು ಬೇಕೆಂದು ಕಮೆಂಟ್ ಮಾಡುತ್ತಿದ್ದಾರೆ. ನಮಗೆ ಗಿಲ್ಲಿ ನಟ ಅವರ ಎಂಟ್ರಿ ಹೇಗಿರುತ್ತೆ ಎಂಬುದನ್ನು ನೋಡುವ ಆಸೆಯಾಗಿದೆ. ಈ ಬಾರಿ ಗಿಲ್ಲಿಯೇ ಕಿಂಗ್, ಈ ವಾರದಲ್ಲಿ ಹೆಚ್ಚಾಗಿ ಗಿಲ್ಲಿಯನ್ನು ತೋರಿಸುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಂದೆಡೆ ರಕ್ಷಿತಾ ಶೆಟ್ಟಿ ಅವರ ಆಟದ ಬಗ್ಗೆಯೂ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಸೀರಿಯಲ್ ಸಿನಿಮಾ ರಿಯಾಲಿಟಿ ಶೋಯಿಂದ ಬಂದಿಲ್ಲ. ಆದ್ರೂ ಅವರಿಗೆಲ್ಲ ಉರಿ ಬರುವ ಹಾಗೆ ನೇರವಾಗಿ ಟಕ್ಕರ್ ಕೊಟ್ಟುಕೊಂಡು ಬಂದಿರುವ ಸಾಮಾನ್ಯ ವ್ಯಕ್ತಿ ರಕ್ಷಿತಾ ಗೆಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Shwetha M