ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿಗೆ ಯತ್ನ – ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ :ಬಿಜೆಪಿ

ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿಗೆ ಯತ್ನ –  ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ :ಬಿಜೆಪಿ

ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.  ಬಳ್ಳಾರಿ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ, ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಹಾಗೂ ಅಕ್ರಮ ವಲಸಿಗರಿಗೆ ನಿಯಮಬಾಹಿರ ಪುನರ್ವಸತಿಗೆ ಬ್ರೇಕ್ ಹಾಕುವಂತೆ ರಾಜ್ಯಪಾಲರಿಗೆ ಮನವಿ ಮತ್ತು ದೂರು ಸಲ್ಲಿಕೆ ಮಾಡಿದರು.‌ . ನಿಯೋಗದಲ್ಲಿ ಛಲವಾದಿ ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ, ಎಸ್.ಆರ್. ವಿಶ್ವನಾಥ್, ಎನ್.ರವಿಕುಮಾರ್ ಸೇರಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ಮಿಡ್‌ವೀಕ್‌ ಎಲಿಮಿನೇಷನ್!‌ – ಈ ವಾರ ಎರಡು ಬಾರಿ ವೋಟಿಂಗ್‌!

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಆಡಳಿತ ಕುಸಿದಿದೆ, ಗೂಂಡಾ ರಾಜ್ಯ, ಜಂಗಲ್ ರಾಜ್ ಆಗಿದೆ. ರಾಜ್ಯವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಅಂತ ಮನವಿ ಮಾಡಿದ್ದೇವೆ. ದ್ವೇಷ ಭಾಷಣ ಮಸೂದೆ ಬಗ್ಗೆ ಸರ್ಕಾರ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಕೈಸನ್ನೆ, ಕಣ್ಣು ಮಿಟುಕಿಸಿದ್ರೂ, ಮಾತಾಡಿದ್ರೂ ಕೇಸ್ ಹಾಕುವ ಮಸೂದೆ ಇದು. ಈ‌ ಮಸೂದೆಗೆ ಸಹಿ ಹಾಕಬೇಡಿ ಅಂತ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ: 

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿ, ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಬಳ್ಳಾರಿಯಲ್ಲಿ ಇದೇ ತಿಂಗಳ 17 ಕ್ಕೆ ಬೃಹತ್ ಸಮಾವೇಶ ಮಾಡುತ್ತೇವೆ. ಕೇಸ್ ಹಳ್ಳ ಹಿಡಿಸಲು ಸರ್ಕಾರ ಹೊರಟಿದೆ. ಈ ಸರ್ಕಾರದಿಂದ ನ್ಯಾಯ ಸಿಗಲ್ಲ‌. ಈ ಪ್ರಕರಣ ಸಿಬಿಐಗೆ ಕೊಡಿ ಅಂತ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕೋಗಿಲು ಲೇಔಟ್ ವಿಚಾರ ನಮ್ಮ ಸತ್ಯಶೋಧನೆ ಸಮಿತಿ ವರದಿ ಕೊಟ್ಟಿದೆ. ಹಿಂದೆ ಕೇರಳದ ಸಮಸ್ಯೆಗೆ ರಾಜ್ಯ ಸ್ಪಂದಿಸಿದೆ. ಬಾಂಗ್ಲಾದವರ ಪರ ಕೇರಳ ಸಿಎಂ ದನಿ ಎತ್ತಿದ್ದಾರೆ. ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇರಳದ ಕೈಗೊಂಬೆ ಆಗಿದೆ. ಕೇರಳದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಲಾಗಿದೆ. ಮಾತೃಭಾಷೆಗೆ ಅವಕಾಶ ಕೊಡದೇ ದಮನಕಾರಿ ನೀತಿ ಅನುಸರಿಸಿದೆ. ಇಲ್ಲಿನ ಸಿಎಂ ಒಂದು ಪತ್ರವಷ್ಟೇ ಬರೆದು ಸುಮ್ಮನಾಗಿದ್ದಾರೆ. ಸಿದ್ದರಾಮಯ್ಯಗೆ ಧಮ್ ಇಲ್ವಾ?. ಬುಲ್ಡೋಜರ್ ಸರ್ಕಾರ ಅಂದ್ರಲ್ಲ ಅವರು ನೀವೂ ಹಾಗೇ ಹೇಳಿ, ಧೈರ್ಯ ಇಲ್ವಾ ಎಂದು ಪ್ರಶ್ನಿಸಿದರು.

Kishor KV