ಬಿಗ್‌ಬಾಸ್‌ನಲ್ಲಿ ಮಿಡ್‌ವೀಕ್‌ ಎಲಿಮಿನೇಷನ್!‌ – ಈ ವಾರ ಎರಡು ಬಾರಿ ವೋಟಿಂಗ್‌!

ಬಿಗ್‌ಬಾಸ್‌ನಲ್ಲಿ ಮಿಡ್‌ವೀಕ್‌ ಎಲಿಮಿನೇಷನ್!‌ – ಈ ವಾರ ಎರಡು ಬಾರಿ ವೋಟಿಂಗ್‌!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಎಲ್ಲಾ ಸ್ಪರ್ಧಿಗಳ ಕಣ್ಣು ಟ್ರೋಫಿ ಮೇಲಿದೆ. ಯಾರು ವಿನ್‌ ಆಗ್ತಾರೆ ಅನ್ನೋ ಕುತೂಹಲ ಮೂಡಿದೆ. ಇದೀಗ ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ಫಿನಾಲೆಗೆ ತಲುಪಿಸಲು ಶೋ ಕಡೆಯ ಚಾನ್ಸ್‌ ನೀಡಿದೆ. ಮಂಗಳವಾರ ತನಕ ವೋಟ್‌ ಮಾಡಲು ಅವಕಾಶ ನೀಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್‌ಶಾಕ್!‌ – ಮತ್ತೆ ಮೆಟ್ರೋದ ಏರಿಕೆ?

ಬಿಗ್‌ ಬಾಸ್‌ ಮನೆಯಲ್ಲಿ ಈಗ 7 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇವರಲ್ಲಿ ಆರು ಮಂದಿ ಮಾತ್ರ ದೊಡ್ಮನೆಯಲ್ಲಿ ಉಳಿಯುತ್ತಾರೆ. ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌ ನಡೆಯಲಿದ್ದು, ಯಾರು ಎಲಿಮಿನೇಟ್‌ ಆಗಲಿದ್ದಾರೆ? ಯಾರು ಫಿನಾಲೆಗೆ ಹೋಗಲಿದ್ದಾರೆ ಅನ್ನೋ ಕುತೂಹಲ ಶುರುವಾಗಿದೆ.  ಇದೀಗ ಈ ವಾರ ಎರಡು ಬಾರಿ ವೋಟಿಂಗ್‌ ಲೈನ್‌ ತೆರೆಯಲಿದೆ.

ಹೌದು, ಬಿಗ್‌ಬಾಸ್‌ ಮನೆಯಲ್ಲಿ ಧನುಷ್‌, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಮತ್ತು ಧ್ರುವಂತ್‌ ಉಳಿದುಕೊಂಡಿದ್ದಾರೆ. ಇವರಲ್ಲೀಗ ಧನುಷ್‌ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ ಆರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಈ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ಇರಲಿದೆ. ಬುಧವಾರದೊಳಗೆ ಒಬ್ಬ ಸ್ಪರ್ಧಿ ಮನೆಯಿಂದ ಎಲಿಮಿನೇಟ್‌ ಆಗಲಿದ್ದಾರೆ. ಆ ಎಲಿಮಿನೇಷನ್‌ಗೆಂದು ಈ ಆರು ಮಂದಿಯನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ. ಇವರಲ್ಲೀಗ ಮಿಡ್‌ ವೀಕ್‌ ಎಲಿಮೇಷನ್‌ ಆಗೋದ್ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ‌ಮಿಡ್‌ವೀಕ್‌ ಎಲಿಮಿನೇಷನ್‌ ನಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ಮಂಗಳವಾರದ ಸಂಜೆವರೆಗೂ ವೋಟ್‌ ಮಾಡಲು ಅವಕಾಶ ನೀಡಲಾಗಿದೆ. ಈ ವೋಟಿಂಗ್‌ನಲ್ಲಿ ಕಡಿಮೆ ವೋಟ್‌ ಗಳಿಸಿದ ಸ್ಪರ್ಧಿಯನ್ನ ಎಲಿಮಿನೇಟ್‌ ಮಾಡಲಾಗುತ್ತದೆ.

ಇನ್ನು ಇದು ಫಿನಾಲೆ ವಾರ ಆಗಿರುವುದರಿಂದ ಎರಡು ಸಲ ವೋಟಿಂಗ್‌ ಲೈನ್ಸ್‌ ತೆರೆದುಕೊಳ್ಳಲಿದೆ. ಮೊದಲು ಮಿಡ್‌ ವೀಕ್‌ ಎಲಿಮಿನೇಷನ್‌ಗೆಂದು ಒಂದು ವೋಟಿಂಗ್‌ ಇರಲಿದೆ. ಅದು ಮಂಗಳವಾರ ಸಂಜೆವರೆಗೂ ನಡೆಯಲಿದೆ. ಮಿಡ್‌ ವೀಕ್‌ ಎಲಿಮಿನೇಷನ್‌ ಆದಮೇಲೆ ಉಳಿಯುವ ಆರು ಮಂದಿ ಫಿನಾಲೆಗೆ ಎಂಟ್ರಿ ಆಗಲಿದ್ದು, ಆನಂತರ ವಿನ್ನರ್‌ ಯಾರಾಗಬೇಕೆಂದು ವೋಟಿಂಗ್‌ ನಡೆಯಲಿದೆ. ಭಾನುವಾರ (ಜ.18) ರಾತ್ರಿ ವಿನ್ನರ್‌ ಯಾರು ಎಂಬುದು ಗೊತ್ತಾಗಲಿದೆ. ಸದ್ಯ ಗಿಲ್ಲಿ ನಟ ಅವರ ಬಗ್ಗೆ ದೊಡ್ಡಮಟ್ಟದ ಕ್ರೇಜ್‌ ಶುರುವಾಗಿದೆ. ಈಗಾಗಲೇ ಗಿಲ್ಲಿಗೆ ವೋಟ್‌ ಮಾಡಿ ಎಂದು ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಕ್ಯಾಂಪೇನ್‌ ಮಾಡುತ್ತಿದ್ದಾರೆ.

Shwetha M