ಶತಕ ತಪ್ಪಿದ್ರೂ ಮ್ಯಾಚ್ ಗೆದ್ದ ಕೊಹ್ಲಿ – ಕ್ಲಾಸಿಕ್ KL.. ಕೈ ಹಿಡಿದ ರಾಣಾ!
ಈಸಿ ಚೇಸ್ ಕ್ಲೋಸ್ ಗೇಮ್ ಆಗಿದ್ದೇಕೆ?

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆಲ್ಲೋ ಮೂಲಕ ಭಾರತ 2026ರ ಜರ್ನಿಗೆ ಗ್ರಾಂಡ್ ಎಂಟ್ರಿ ಕೊಟ್ಟಿದೆ. ಬೌಲರ್ ಗಳ ಎಫರ್ಟ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಖದರ್ ಗೆ ಕಿವೀಸ್ ಪಡೆ ಸೋಲು ಕಂಡಿದೆ. ಆದ್ರೆ ಈ ಗೆಲುವು ಭಾರತಕ್ಕೆ ಈಜಿ ಯಾಗಿ ಸಿಕ್ತಾ ಅಂದ್ರೆ ಇಲ್ಲ.. ಮಿಡ್ಲ್ ಆರ್ಡರ್ ನಲ್ಲಿ ಲೆಕ್ಕಾಚಾರ ತಲೆ ಕೆಳಗಾಗಿತ್ತು. ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನ ಭಾರತ 4 ವಿಕೆಟ್ಗಳಿಂದ ಗೆದ್ದಿದೆ. ಟಾಸ್ ಗೆದ್ದು ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಂಡ ಭಾರತ ಬೌಲಿಂಗ್ನಲ್ಲಿ ಚೆನ್ನಾಗೇ ಕಂಟ್ರೋಲ್ ಮಾಡಿದ್ರು. ಌಂಡ್ ನೆಕ್ಸ್ಟ್ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿಯವ್ರ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ನಿಂದ ಟಾರ್ಗೆಟ್ ರೀಚ್ ಆಗುವಲ್ಲಿ ಯಶಸ್ವಿಯಾಯ್ತು. ಒಂದು ಹಂತದಲ್ಲಿ ವಿರಾಟ್ ವಿಕೆಟ್ ಬಿದ್ಮೇಲೆ ಸಾಕಷ್ಟು ಸ್ಟ್ರಗಲ್ಸ್ ಕಾಣಿಸ್ತಿತ್ತು. ಬಟ್ ಫೈನಲಿ ಕೆಎಲ್ ರಾಹುಲ್ ಕೂಲ್ ಌಂಡ್ ಕಾಮ್ ಆಗಿ ಮ್ಯಾಚ್ ವಿನ್ ಮಾಡ್ಸಿದ್ರು.
ಇದನ್ನೂ ಓದಿ : ಕೊಹ್ಲಿ – ಗಿಲ್ ಭರ್ಜರಿ ಜೊತೆಯಾಟ – ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳ ಜಯ
ಟಾಸ್ ಸೋತ ಕಿವೀಸ್ ಗೆ ಸಾಥ್ ಕೊಟ್ಟ ಓಪನರ್ಸ್!
2026ರ ಮೊದಲ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತ ಕಿವೀಸ್ ಪಡೆಗೆ ಓಪನರ್ಗಳಾದ ಡೆವೊನ್ ಕಾನ್ವೆ ಹಾಗೂ ಹೆನ್ರಿ ನಿಕೋಲ್ಸ್ ಒಳ್ಳೆ ಪಾಟ್ನರ್ಶಿಪ್ ನೀಡಿದ್ರು. ಮೊದಲ ವಿಕೆಟ್ಗೆ 117 ರನ್ ಕಲೆ ಹಾಕಿದ್ರು. 3ನೇ ಸ್ಲಾಟಲ್ಲಿ 12 ರನ್ ಗಳಿಸಿ ವಿಲ್ ಯಂಗ್ ಔಟಾದ್ರು. ನೆಕ್ಸ್ಟ್ ಮಿಡಲ್ ಆರ್ಡರ್ನಲ್ಲಿ ಡೆರಿಲ್ ಮಿಚೆಲ್ ಕ್ರೀಸ್ ಕಚ್ಚಿ ನಿಂತು ಬ್ಯಾಟ್ ಬೀಸಿದ್ರು. 71 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ಗಳೊಂದಿಗೆ 84 ರನ್ ಗಳಿಸಿದ್ರು. ಅಂತಿಮವಾಗಿ ನ್ಯೂಜಿಲೆಂಡ್ ಪಡೆ 8 ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿತು. ಭಾರತದ ಪರ ಮೊಹಮ್ಮದ್ ಸಿರಾಜ್, ಹರ್ಷೀತ್ ರಾಣಾ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಮತ್ತು ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಆಸರೆಯಾದ ಕಿಂಗ್ ಕೊಹ್ಲಿ!
301 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಭಾರತಕ್ಕೆ ಆರಂಭಕ್ಕೇ ಶಾಕ್ ಎದುರಾಯ್ತು. ರೋಹಿತ್ ಶರ್ಮಾ (26) ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಆ ನಂತ್ರ ಕೊಹ್ಲಿ ಮತ್ತು ಗಿಲ್ ನಡುವೆ 100 ರನ್ಗಳ ಜೊತೆಯಾಟ ಬಂತು. ಬಟ್ ಗಿಲ್ 56 ರನ್ ಗಳಿಸಿ ಔಟಾದ್ರು. ಆದ್ರೆ ತುಂಬಾನೇ ಕಾಮ್ ಆಗಿ ಬ್ಯಾಟ್ ಬೀಸ್ತಿದ್ದ ಕೊಹ್ಲಿ ಶತಕದಂಚಿನಲ್ಲಿ ಔಟಾದ್ರು. 93 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಜಸ್ಟ್ 7 ರನ್ಗಳಿಂದ ಶತಕ ವಂಚಿತರಾದ್ರು. ವಿರಾಟ್ ಔಟ್ ಆದಾಗ ಇಡೀ ಕ್ರೀಡಾಂಗಣವೇ ಸೈಲೆಂಟ್ ಆಗಿತ್ತು. ಇನ್ನು ಶ್ರೇಯಸ್ ಅಯ್ಯರ್ 49 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಇನ್ನು ಜಡೇಜಾ 4 ರನ್ಗಳಿಗೆ ಔಟಾದ್ರು. ಬಟ್ ಕೆಎಲ್ ರಾಹುಲ್ ಮತ್ತು ರಾಣಾ ಚೆನ್ನಾಗಿ ಹ್ಯಾಂಡಲ್ ಮಾಡ್ತಿದ್ರು. ರಾಣಾ 29 ರನ್ ಗಳಿಗೆ ಔಟಾದ್ರೆ ಅತ್ತ ವಾಷಿಂಗ್ಟನ್ ಸುಂದರ್ ರನ್ ಓಡೋಕೆ ಕಷ್ಟ ಪಡ್ತಿದ್ರು. ಬೌಲಿಂಗ್ ಟೈಮಲ್ಲಿ ಕಾಲು ಸ್ಲಿಪ್ ಆಗಿ ನೋವಿನಲ್ಲಿದ್ರು. ಹೀಗಿದ್ರೂ ಸುಂದರ್ ಮತ್ತು ರಾಹುಲ್ ಸಿಂಗಲ್ಸ್ ಮೂಲಕವೇ ಸುಮಾರ್ ರನ್ಸ್ ಕಲೆ ಹಾಕ್ತಾರೆ. ಅಂತಿಮವಾಗಿ ಕೆಎಲ್ ರಾಹುಲ್ ಫೋರ್ ಸಿಕ್ಸ್ ಬಾರಿಸಿ ಮ್ಯಾಚ್ ಫಿನಿಶ್ ಮಾಡ್ತಾರೆ. ಇನ್ನೂ ಒಂದು ಓವರ್ ಬಾಕಿ ಇದ್ದಂತೆಯೇ ಭಾರತ ಪಂದ್ಯವನ್ನ ಗೆದ್ದುಕೊಳ್ತು,. ಬಟ್ ಕಿವೀಸ್ ಪರ ಕೈಲ್ ಜೇಮಿಸನ್ 41 ರನ್ ನೀಡಿ 4 ವಿಕೆಟ್ ಬೇಟೆಯಾಡಿದ್ರು.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 28,000 ರನ್ಸ್ ಪೂರೈಸಿದ ಕಿಂಗ್!
ಇನ್ನು ಈ ಮ್ಯಾಚಲ್ಲಿ ಶತಕ ಮಿಸ್ ಮಾಡಿಕೊಂಡ್ರೂ ಕಿಂಗ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಕಿವೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ 93 ರನ್ ಸಿಡಿಸಿದರು. ಈ ಮೂಲಕ ಒಟ್ಟಾರೆ 28,068 ಅಂತಾರಾಷ್ಟ್ರೀಯ ರನ್ ಗಳಿಸಿದಂತಾಗಿದೆ. 557 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಮಾತ್ರವಲ್ಲದೆ ಕೊಹ್ಲಿ 44 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 77ನೇ ಅರ್ಧಶತಕವನ್ನು ಪೂರೈಸಿದರು. ಇನ್ನು ಕುಮಾರ ಸಂಗಕ್ಕರ 594 ಪಂದ್ಯಗಳಲ್ಲಿ 28016 ರನ್ ಗಳಿಸಿದ್ದು, 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಚಿನ್ ತೆಂಡುಲ್ಕರ್ 664 ಪಂದ್ಯಗಳಲ್ಲಿ ಒಟ್ಟು 34357 ರನ್ ಗಳಿಸಿದ್ದು ಟಾಪ್ 1ನಲ್ಲಿದ್ದಾರೆ.
ರೋಹಿತ್ ಔಟ್ ಆಗಿದ್ದಕ್ಕೆ ಸಂಭ್ರಮಿಸಿದ್ದು ಇಷ್ಟವಿಲ್ಲ ಎಂದ ಕೊಹ್ಲಿ!
ಇನ್ನು ಪಂದ್ಯದ ಬಳಿಕ ಮಾತಾಡಿದ ವಿರಾಟ್ ಕೊಹ್ಲಿ ವಿಚಾರವೊಂದನ್ನ ಪ್ರಸ್ತಾಪ ಮಾಡ್ತಾರೆ. ಅಭಿಮಾನಿಗಳ ವರ್ತನೆಗೆ ಅಸಮಾಧಾನ ಹೊರ ಹಾಕಿದ್ದಾರೆ. 26 ರನ್ ಗಳಿಸಿ ಔಟಾಗಿ ರೋಹಿತ್ ಶರ್ಮಾ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ರೆ ಅತ್ತ ಅಭಿಮಾನಿಗಳ ಹರ್ಷೋದ್ಘಾರ ಜೋರಾಗಿತ್ತು. ಅವ್ರ ಖುಷಿಗೆ ಕಾರಣ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬರ್ತಾರೆ ಅನ್ನೋದು. ಆದ್ರೆ ಫ್ಯಾನ್ಸ್ ಈ ವರ್ತನೆಗೆ ಅಸಮಧಾನ ತೋರಿದ್ದಾರೆ. ಭಾರತ ತಂಡದ ಮೊದಲ ವಿಕೆಟ್ ಬಿದ್ದಾಗ ಎಲ್ಲರೂ ಸಂಭ್ರಮಿಸುತ್ತಿದ್ದರು. ಔಟಾಗಿ ಹೋಗುವ ಬ್ಯಾಟರ್ ಇಂತಹದ್ದೆಲ್ಲಾ ನೋಡಲು ಬಯಸುವುದಿಲ್ಲ. ಪ್ರಾಂಕ್ ಆಗಿ ಹೇಳ್ಬೇಕು ಅಂದ್ರೆ ನನಗೂ ಇಂತಹ ಸಂಭ್ರಮ ಇಷ್ಟವಾಗುವುದಿಲ್ಲ. ಐಪಿಎಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ ವಿಚಾರದಲ್ಲೂ ಇದೇ ರೀತಿ ಆಗಿರುವುದನ್ನು ನಾನು ನೋಡಿದ್ದೀನಿ. ಈ ರೀತಿಯ ಸಂಭ್ರಮ ಔಟಾಗಿ ಹೋಗುವ ಬ್ಯಾಟರ್ಗೆ ಉತ್ತಮ ಭಾವನೆ ಮೂಡಿಸುವುದಿಲ್ಲ ಎಂದಿದ್ದಾರೆ. ಹಾಗೇ ತಮಗೆ ಬರುವ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನ ಗುರುಗಾಂವ್ನಲ್ಲಿರುವ ತನ್ನ ತಾಯಿಗೆ ಕಳಿಸಿಕೊಡೋದಾಗಿ ಹಾಗೇ ಅವ್ರು ಅವ್ರುಗಳನ್ನ ಸಂಗ್ರಹಿಸಿ ಇಡೋದಾಗಿ ಹೇಳಿದ್ದಾರೆ.

ನೋಡಿರಿ

