ಟಾಕ್ಸಿಕ್‌ ಟೀಸರ್‌ಗೆ ಮತ್ತೆ ಕಂಟಕ – ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲು

ಟಾಕ್ಸಿಕ್‌ ಟೀಸರ್‌ಗೆ ಮತ್ತೆ ಕಂಟಕ – ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲು

ಯಶ್ ಬರ್ತ್‌ಡೇ ರಿಲೀಸ್ ಟಾಕ್ಸಿಕ್ ಟೀಸರ್ ಹಲ್‌ಚಲ್ ಎಬ್ಬಿಸಿತ್ತು. ಹಸಿ ಬಸಿ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗ್ತಿದೆ. ಈಗ ಈ ಟೀಸರ್‌ಗೆ ಮತ್ತೊಂದು ವಿಘ್ನ ಎದುರಾಗಿದೆ. ಟೀಸರ್ ನಲ್ಲಿ ಅಶ್ಲೀಲ ದೃಶ್ಯಗಳಿವೆ ಹಾಗೂ ಮಕ್ಕಳು, ಮಹಿಳೆಯುರು ನೋಡುವಂತಿಲ್ಲ ಅನ್ನೋ ಆರೋಪ ಮೇಲೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಇಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ದೂರು ನೀಡಿದೆ.

ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಅಪಮಾನವಾಗುತ್ತಿರುವ ಕಾರಣ, ಟಾಕ್ಸಿಕ್‌ ಟೀಸರ್ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಟಾಕ್ಸಿಕ್ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯಗಳನ್ನ ತೆಗೆದುಹಾಕುವಂತೆ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು  ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಂಗಳೂರಿನಲ್ಲಿರುವ ರಾಜ್ಯ ಮಹಿಳಾ ಅಯೋಗದ ಕಚೇರಿಗೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಸದಸ್ಯರು ಹೋಗಿ ದೂರು ಸಲ್ಲಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇರದ ಕಾರಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ ಆರ್ ಅವರಿಗೆ ದೂರನ್ನು ನೀಡಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್‌ಶಾಕ್!‌ – ಮತ್ತೆ ಮೆಟ್ರೋದ ಏರಿಕೆ?

ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯದರ್ಶಿ ಉಷಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಯಶ್ ಅವರು ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ನಾನು ಮಾಡುವ ಸಿನಿಮಾಗಳನ್ನು ಇಡೀ ಫ್ಯಾಮಿಲಿ ಒಟ್ಟಿಗೆ ನೋಡಬೇಕು. ಅಂತ ಕಂಫರ್ಟ್ ಇರ್ಬೇಕು ಅಂತಾರೆ. ಇದೇನಾ ಅದು? ಎಲ್ಲಿ ಇದೆ ಕಂಫರ್ಟ್? ಟೀಸರ್‌ನಲ್ಲಿರೋ ದೃಶ್ಯಗಳನ್ನ ತೆಗೆದು ಹಾಕಬೇಕು. ಕನ್ನಡ ಸಿನಿಮಾವನ್ನು ಹಾಲಿವುಡ್ ರೇಂಜ್‌ಗೆ ತೆಗೆದುಕೊಂಡು ಹೋಗಬೇಕು ಎಂದರೆ, ನಮ್ಮ ಸಂಸ್ಕೃತಿ ಇರುವ ಸಿನಿಮಾಗಳನ್ನು ಮಾಡಲಿ. ಅದು ಬಿಟ್ಟು ಈ ರೀತಿಯ ಸಿನಿಮಾಗಳು ಅಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.‌

ಇನ್ನೂ ದೂರಿನಲ್ಲಿ ಏನಿದೆ ಅನ್ನೋದ್ದನ್ನ ನೋಡೋದಾದ್ರೆ.  

ಈ ಚಿತ್ರದ ಟೀಸರ್‌ನಲ್ಲಿರುವ ಅಶ್ಲೀಲ ಮತ್ತು ಪ್ರೌಢ ದೃಶ್ಯಗಳು ಹೆಂಗಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಅತ್ಯಂತ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ಅವಮಾನವಾಗಿದೆ. ಸಮಾಜದ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಇದು ಬೀರುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿ, ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಉಲ್ಲೇಖ ಮಾಡಲಾಗಿದೆ.

Kishor KV