ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್‌ಶಾಕ್!‌ – ಮತ್ತೆ ಮೆಟ್ರೋದ ಏರಿಕೆ?

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್‌ಶಾಕ್!‌ – ಮತ್ತೆ ಮೆಟ್ರೋದ ಏರಿಕೆ?

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಇದೀಗ ಮತ್ತೆ ಮೆಟ್ರೋ ಟಿಕೆಟ್‌ ದರ ಹೆಚ್ಚಳ ಮಾಡಲು ಬಿಎಂ ಆರ್‌ಸಿಎಲ್‌ ಚಿಂತನೆ ನಡೆದಿದೆ. ಮುಂದಿನ ತಿಂಗಳಿನಿಂದಲೇ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಧಿಯೂ ಅಲ್ಲ.. ಮನೆಯೂ ಇಲ್ಲ! – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್!

ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತ ಸಿಲಿಕಾನ್‌ ಸಿಟಿ ಮಂದಿ ನಮ್ಮ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಆದ್ರೀಗ ಬಿಎಂಆರ್‌ಸಿಎಲ್‌ ಪ್ರಯಾಣಿಕರಿಗೆ ಶಾಕ್‌ ನೀಡಿದೆ. ಮತ್ತೆ ನಮ್ಮ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆಯಿದೆ. ಫೆಬ್ರವರಿಯಿಂದ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲು ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌ ಮುಂದಾಗಿದೆ.

ಬಿಎಂಆರ್‌ಸಿಎಲ್‌ ಕಳೆದ ವರ್ಷ 71% ದರವನ್ನು ಏರಿಕೆ ಮಾಡಿತ್ತು.  2025 ರಲ್ಲಿ 71% ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ದೇಶದ ಅತ್ಯಂತ ದುಬಾರಿ ಸೇವೆ ನೀಡುವ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಇದ್ರಿಂದಾಗಿ ಪ್ರಯಾಣಿಕರು ಬಿಎಂಆರ್‌ಸಿಎಂ ವಿರುದ್ಧ ಅಸಮಧಾನ ಹೊರ ಹಾಕಿದ್ರು. ಇದೀಗ ಮತ್ತೆ ಬಿಎಂಆರ್‌ಸಿಎಲ್‌ 5% ದರ ಏರಿಕೆಗೆ ಸಿದ್ಧತೆ ನಡೆಸಿದೆ. ಶುಲ್ಕ ನಿಗದಿ ಸಮಿತಿ (FFC) ಪ್ರತಿ ವರ್ಷ ಟಿಕೆಟ್ ಶುಲ್ಕದಲ್ಲಿ 5% ರಷ್ಟು ಹೆಚ್ಚಳವನ್ನು ಸೂಚಿಸಿದ ಕಾರಣ ಏರಿಕೆಯಾಗಲಿದೆ.

ಮೆಟ್ರೋ ರೈಲು ನಿರ್ವಹಣೆ ಕಾಯ್ದೆ 2002 ರ 33 ರ ಅಡಿಯಲ್ಲಿ ಕಾನೂನುಬದ್ಧವಾಗಿ ಬದ್ಧವಾಗಿರುವ FFC ಯ ಶಿಫಾರಸುಗಳ ಆಧಾರದ ಮೇಲೆ ಪ್ರತಿ ವರ್ಷ ದರ ಏರಿಕೆ ಮಾಡಲು ಅವಕಾಶವಿದೆ.

Shwetha M