ಮೊಬೈಲ್ನಲ್ಲಿ ಮಾತನಾಡುತ್ತಾ ಮಗುವಿಗೆ ಕಾಲಿನಿಂದ ಒದ್ದ ತಾಯಿ – ವಿಡಿಯೋ ವೈರಲ್, ಹೆಚ್ಚಾಯ್ತು ಆಕ್ರೋಶ

ಕೈಯಲ್ಲಿ ಮೊಬೈಲ್ ಇದ್ದರೇ ಜಗತ್ತಿನಲ್ಲಿ ಏನ್ ಆಗುತ್ತೆ ಅನ್ನೋದೇ ಗೊತ್ತಿಲ್ಲ. ದೊಡ್ಡವರು ಚಿಕ್ಕವರು ಮೊಬೈಲ್ ಲೋಕದಲ್ಲಿ ಮುಳುಗಿ ಹೋಗ್ತಾರೆ. ಹೆತ್ತವರೇ ಮಕ್ಕಳನ್ನ ಮರೆತು ಬಿಡುವಷ್ಟು ಮೊಬೈಲ್ ಆವರಿಸಿಕೊಂಡಿದೆ. ಅದರಂತೆ ಮಹಿಳೆ ಯೊಬ್ಬಳು ತನ್ನ ಫೋನ್ನಲ್ಲಿ ಮಾತನಾಡುತ್ತಾ ತನ್ನದೇ ಪುಟ್ಟ ಮಗುವನ್ನು ಅತ್ಯಂತ ಕ್ರೂರವಾಗಿ ಕಾಲಿನಿಂದ ಒದೆಯುವ ದೃಶ್ಯ ವೈರಲ್ ಆಗಿದೆ. ಹಲವು ಜನ ಈ ಘಟನೆ ಕಂಡು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಾಯಿ ತನ್ನ ಚಿಕ್ಕ ಮಗುವಿನ ಮೇಲೆ ನಡೆಸಿದ ಅಮಾನವೀಯ ಕೃತ್ಯಗಳನ್ನು ಹಲವರು ಖಂಡಿಸಿದ್ದಾರೆ.
ಇದನ್ನೂ ಓದಿ: ನಿಧಿಯೂ ಅಲ್ಲ.. ಮನೆಯೂ ಇಲ್ಲ! – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್!
ಜನವರಿ 11, 2026 ರಂದು ಶೇರ್ ಮಾಡಲಾದ ಈ ಘಟನೆ ದೆಹಲಿಯಲ್ಲಿ ನಡೆದಿದೆ ಎನ್ನಲಾಗಿದೆ. ಒಬ್ಬ ಮಹಿಳೆ ಮೆಟ್ಟಿಲುಗಳ ಮೇಲೆ ನಿಂತಿರುವಾಗ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ತನ್ನ ಕಾಲಿನ ಹತ್ತಿರವೇ ಇದ್ದ ಪುಟ್ಟ ಮಗುವನ್ನು ಆಕೆ ಕಾಲಿನಿಂದ ಸರಿಯಾಗಿ ಒದೆಯುತ್ತಾಳೆ. ಮಗು ನೆಲಕ್ಕೆ ಬಿದ್ದು ನೋವಿನಿಂದ ಕಿರುಚಾಡುತ್ತಿದ್ದರೂ ಆಕೆ ಕಿಂಚಿತ್ತೂ ಕರುಣೆ ತೋರದೆ ಮೊಬೈಲ್ ನಲ್ಲೇ ಮಗ್ನವಾಗಿದ್ದಾಳೆ.ಇದ್ದಕ್ಕಿದ್ದಂತೆ ಚಿಕ್ಕ ಮಗುವನ್ನು ಒದೆಯಲು ಪ್ರಾರಂಭಿಸುತ್ತಾಳೆ. ಚಿಕ್ಕ ಮಗು ನೋವಿನಿಂದ ಅಳಲು ಪ್ರಾರಂಭಿಸುತ್ತದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನು ವೀಕ್ಷಿಸಿದ ನೆಟ್ಟಿಗರು ಮಹಿಳೆಯ ವರ್ತನೆಗೆ ಕಿಡಿಕಾರಿದ್ದಾರೆ.
ನೆಟ್ಟಿಗರೊಬ್ಬರು ಇವಳನ್ನು ತಾಯಿ ಎಂದು ಕರೆಯಲು ಅರ್ಹತೆ ಇಲ್ಲ. ಅವಳು ಕೇವಲ ದುರಹಂಕಾರಿ, ತನ್ನ ಮಕ್ಕಳನ್ನು ಚೆನ್ನಾಗಿ ನಡೆಸಿಕೊಳ್ಳದ ಈಕೆ ಹೇಗೆ ತಾಯಿಯಾಗುತ್ತಾಳೆ ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನೊಬ್ಬ ವೀಕ್ಷಕರು ಇವಳು ಖಂಡಿತಾ ತಾಯಿಯಲ್ಲ. ಸಾಕು ತಾಯಿಯೂ ಆಗಿರ ಬಹುದು ಎಂದು ಬರೆದುಕೊಂಡಿದ್ದಾರೆ. ಈ ಘಟನೆ ದೆಹಲಿಯಲ್ಲಿ ನಡೆದಿದ್ದು ಪೊಲೀಸರು ತಕ್ಷಣವೇ ಈ ಮಹಿಳೆಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

ನೋಡಿರಿ

