ನಿಧಿಯೂ ಅಲ್ಲ.. ಮನೆಯೂ ಇಲ್ಲ! – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್!

ಮನೆಯ ಪಾಯ ತೆಗೆಯುವಾಗ ಪತ್ತೆಯಾದ ನಿಧಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಇದೀಗ ಪ್ರಾಮಾಣಿಕತೆ ಮೆರೆದ ಬಡ ಕುಟುಂಬಕ್ಕೆ ಚಿನ್ನವೂ ಇಲ್ಲ. ವಾಸ ಮಾಡಲು ಸೂರು ಸೂರು ಇಲ್ಲ ಎಂಬಂತಾಗಿದೆ.
ಇದನ್ನೂ ಓದಿ: ಪತ್ನಿ ಹೆರಿಗೆಗಾಗಿ ಬರುವಾಗ ಸೈನಿಕನ ದುರಂತ ಅಂತ್ಯ! – ಮಗು ಜೊತೆ ಸ್ಟ್ರೆಚರ್ನಲ್ಲೇ ಬಂದು ಪತ್ನಿ ಅಂತಿಮನಮನ
ಏನಿದು ಘಟನೆ?
ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಗಂಗಮ್ಮ ರಿತ್ತಿ ಎಂಬುವವರು ಮನೆಯ ಪಾಯ ತೆಗೆಯುವಾಗ ಹಳೆ ಕಾಲದ ಚಿನ್ನಾಭರಣಗಳು ಪತ್ತೆಯಾಗಿದೆ. ಚಿನ್ನ ಸಿಗುತ್ತಿದ್ದಂತೆ ಗಂಗಮ್ಮ ಅವರು ನಿಧಿಯನ್ನ ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದರು. ಆದ್ರೀಗ ಈ ಚಿನ್ನ ಮೇಲ್ನೋಟಕ್ಕೆ ನಿಧಿ ಅನ್ನ ಆ ಕುಟುಂಬದ ಪೂರ್ವಜರದ್ದು ಅನ್ನೋದು ಗೊತ್ತಾಗಿದೆ. ಇದೀಗ ಈ ಕುಟುಂಬ ಚಿನ್ನಾಭರಣಗಳು ನಮ್ಮ ಪೂರ್ವಜರದ್ದು, ವಾಪಸ್ ನೀಡಿ ಎಂದು ಕೇಳಿದ್ದಾರೆ.
ನಿಧಿ ಸಿಕ್ಕಿದ್ದು ಹೇಗೆ?
ಗಂಗಮ್ಮ ಅವರದ್ದು ಮೂಲತಃ ಬಡಕುಟುಂಬ. ಹಳೇ ಮನೆ ಕೆಡವಿ ಹೊಸ ನಿರ್ಮಾಣ ಮಾಡಲು ಮುಂದಾಗಿದ್ದರು. ಮನೆ ಪಾಯ ತೆಗೆಯುವಾಗ ಸಣ್ಣ ಮಡಿಕೆಯಲ್ಲಿ ಹಳೆಕಾಲದ ಚಿನ್ನಾಭರಣ ಪತ್ತೆಯಾಗಿದೆ. ಇದರಲ್ಲಿ ಸುಮಾರು 470 ಗ್ರಾಂ ಚಿನ್ನಾಭರಣ ಇತ್ತು ಎನ್ನಲಾಗ್ತಿದೆ. ಚಿನ್ನ ಸಿಗುತ್ತಿದ್ದಂತೆ ಅದನ್ನ ರಿತ್ತಿ ಕುಟುಂಬ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದೆ. ಆದ್ರೀಗ ಈ ನಿಧಿಯಿಂದಾಗಿ ಕುಟುಂಬ ಸಂಕಷ್ಟ ಸಿಲುಕಿದೆ. ಇದ್ದ ಮನೆಯನ್ನೂ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.
ಹೌದು, ಚಿನ್ನವನ್ನು ಹಸ್ತಾಂತರ ಮಾಡುತ್ತಿದ್ದಂತೆ ಅಧಿಕಾರಿಗಳು ನಿಧಿ ಸಿಕ್ಕಿದ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಇದ್ರಿಂದಾಗಿ ಗಂಗಮ್ಮ ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದೆ. ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನು ಮಾಡಬೇಕು ಎಂಬ ಚಿಂತೆ ಕುಟುಂಬದ್ದಾಗಿದೆ.
ಇದು ನಿಧಿ ಅಲ್ಲ.. ಪೂರ್ವಜರ ಚಿನ್ನ!
ಮತ್ತೊಂದ್ಕಡೆ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ರಮೇಶ ಮೂಲಿಮನಿ ಹಾಗೂ ಅವರ ತಂಡ ನಿಧಿ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಇದು ನಿಧಿಅಲ್ಲ, ಬಂಗಾರ ಮನೆಯಲ್ಲಿ ಸಿಕ್ಕಿದೆ ಎಂಬುದು ಮೆಲ್ನೊಟಕ್ಕೆ ಕಂಡು ಬರುತ್ತಿದೆ. ಆಭರಣಗಳನ್ನು ನೋಡಿದ್ರೆ ಸಾಕಷ್ಟು ಡ್ಯಾಮೇಜ್ ಆಗಿದ್ದು, ಮೇಲ್ನೋಟಕ್ಕೆ ಇದು ಅವರ ಕುಟುಂಬಕ್ಕೆ ಸೇರಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ಪರಿಶೀಲನೆ ನಂತರ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.
ಇನ್ನು ಸಿಕ್ಕಿರುವ ಸುಮಾರು 60 ರಿಂದ 70 ಲಕ್ಷ ಮೌಲ್ಯದ ಚಿನ್ನಾಭರಣಗಳು,ಇದು ನಿಧಿ ಅಲ್ಲ ಅಂತಾ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಂತೆ ಕುಟುಂಬಸ್ಥರು ಚಿನ್ನವನ್ನ ವಾಪಾಸ್ ಕೇಳುತ್ತಿದ್ದಾರೆ. ಇದು ನಮ್ಮ ಪೂರ್ವಜರ ಚಿನ್ನ ಅಂತಾ ಹೇಳುತ್ತಿದ್ದಾರೆ. ಇದು ನಿಧಿ ಅಲ್ಲ ಅಂದ್ರೆ, ಆ ಚಿನ್ನವನ್ನು ನಮಗೆ ವಾಪಾಸ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನೋಡಿರಿ

