ಬಿಗ್ಬಾಸ್ ಸೂರಜ್ ಈಗ ಸೀರಿಯಲ್ ಹೀರೋ – ಪವಿತ್ರ ಬಂಧನ ಧಾರಾವಾಹಿಯಲ್ಲಿ ಸೂರಜ್ ಶೈನಿಂಗ್
ಬಿಗ್ಬಾಸ್ ಸೂರಜ್ಗೆ ತೆರೆಯಿತು ಭಾಗ್ಯದ ಬಾಗಿಲು

ಬಿಗ್ ಬಾಸ್ ಮೂಲಕ ಯುವತಿಯರ ಕ್ರಶ್ ಆಗಿದ್ದ ಚಾಕೋಲೇಟ್ ಹೀರೋ ಸೂರಜ್ ಸಿಂಗ್ ಈಗ ಕಿರುತೆರೆಯ ಹೀರೋ ಆಗಿ ಮಿಂಚಲಿದ್ದಾರೆ. ಪವಿತ್ರ ಬಂಧನ ಧಾರಾವಾಹಿಯ ಮೂಲಕ ಬಣ್ಣ ಹಚ್ಚಿದ್ದಾರೆ. ಇದೇ ಮೊದಲ ಬಾರಿಗೆ ನಾಯಕರಾಗಿ ಅದೃಷ್ಟಪರೀಕ್ಷೆಗಿಳಿದಿದ್ದಾರೆ ಸೂರಜ್.
ಇದನ್ನೂ ಓದಿ:ಸೋಲಬಹುದು.. ಸತ್ತಿಲ್ಲ – ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ಬೇಜಾರಾಗಿದ್ದು ಯಾಕೆ?
ಬಿಗ್ ಬಾಸ್ ರಿಯಾಲಿಟಿ ಶೋ ಅನೇಕ ಸ್ಪರ್ಧಿಗಳ ಬದುಕಿಗೆ ಹೊಸ ಅರ್ಥ ನೀಡಿದೆ. ಅನೇಕರಿಗೆ ಹೊಸ ಜೀವನ ನೀಡಿದೆ. ವೃತ್ತಿ ಬದುಕಿನ ದಿಕ್ಕನ್ನೇ ಬದಲಿಸಿದೆ. ಇದೀಗ ಆ ಸಾಲಿಗೆ ಸೇರಿದ್ದಾರೆ ಸೂರಜ್ ಸಿಂಗ್. ಸೂರಜ್ ಅವರಿಗೆ ಈಗ ಸೀರಿಯಲ್ ಆಫರ್ ಬಂದಿದೆ. ಅದು ಕೂಡಾ ನಾಯಕನಾಗಿದೆ. ಪವಿತ್ರ ಬಂಧನ ಎಂಬ ಧಾರಾವಾಹಿಯಲ್ಲಿ ಸೂರಜ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದಾರೆ. ಶೀಘ್ರವೇ ಧಾರಾವಾಹಿ ಪ್ರಸಾರ ಕಾಣಲಿದೆ. ಸೂರಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಹೈಲೈಟ್ ಆಗಿದ್ದರು. ಬಿಗ್ ಬಾಸ್ಗೆ ಬಂದಾಗ ಸೂರಜ್ ಅವರ ಫಾಲೋವರ್ಸ್ ಸಂಖ್ಯೆ ಕೇವಲ 18 ಸಾವಿರ ಇತ್ತು. ಈಗ ಮೂರುವರೆ ಲಕ್ಷಕ್ಕೆ ಏರಿಕೆ ಆಗಿದೆ. ಅಷ್ಟರಮಟ್ಟಿಗೆ ಜನಪ್ರಿಯತೆ ಪಡೆದಿದ್ದಾರೆ ಸೂರಜ್.
‘ಪವಿತ್ರ ಬಂಧನ ಧಾರಾವಾಹಿಯಲ್ಲಿ ಸೂರಜ್ ಅವರು ದೇವದತ್ ದೇಶ್ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಕಥೆಯ ನಾಯಕಿ. ದೇವದತ್ ಹಾಗೂ ತಿಲಕ್ ಅಣ್ಣ-ತಮ್ಮ. ಇಬ್ಬರೂ ತುಂಬಾನೇ ಕ್ಲೋಸ್. ತಿಲಕ್ ಹಾಗೂ ಕಥಾ ನಾಯಕಿ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆದರೆ, ಆಕೆ ದೇವದತ್ನ ಮದುವೆ ಆಗೋ ಪರಿಸ್ಥಿತಿ ಬರುತ್ತದೆ. ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಕಂಡರೇ ಆಗೋದಿಲ್ಲ. ಆದಾರೂ ಮದುವೆ ಆಗುತ್ತಾರೆ. ಇದು ಧಾರಾವಾಹಿಯ ಕಥೆ.
ಬಿಗ್ ಬಾಸ್ ಬಳಿಕ ಸೂರಜ್ ಸಿಂಗ್ ಅವರಿಗೆ ಸಿಕ್ಕಿರುವ ಅತಿ ದೊಡ್ಡ ಆಫರ್ ಇದಾಗಿದೆ. ಮುಖದಲ್ಲಿ ನಗು. ಯುವತಿಯರ ಮನಗೆಲ್ಲುವ ಕಣ್ಣೋಟ. ಹೀರೋ ಆಗಬೇಕಾಗಿರುವ ಫಿಸಿಕಲ್ ಫಿಟ್ನೆಸ್ ಹೊಂದಿರುವ ಸೂರಜ್ ಸಿಂಗ್ ಈ ಧಾರಾವಾಹಿಯ ಪ್ರೋಮೋದಲ್ಲಿಯೇ ಗಮನ ಸೆಳೆದಿದ್ದಾರೆ.

ನೋಡಿರಿ

