ಸುದೀಪ್‌ಗೆ ರಕ್ಷಿತಾ ಕತ್ತೆನಾ? – ಗಿಲ್ಲಿಗಿಂತ ಧ್ರುವಂತೇ ಬೆಸ್ಟಾ?
ಕಿಚ್ಚನ ಚಪ್ಪಾಳೆಗೆ ಕಿಮ್ಮತ್ತಿಲ್ವಾ?

ಸುದೀಪ್‌ಗೆ ರಕ್ಷಿತಾ ಕತ್ತೆನಾ? – ಗಿಲ್ಲಿಗಿಂತ ಧ್ರುವಂತೇ ಬೆಸ್ಟಾ?ಕಿಚ್ಚನ ಚಪ್ಪಾಳೆಗೆ ಕಿಮ್ಮತ್ತಿಲ್ವಾ?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರೋಚಕ ಘಟ್ಟ ತಲುಪಿದೆ. ಫಿನಾಲೆಗೆ ಜಸ್ಟ್‌ ಒಂದು ವಾರ ಮಾತ್ರ ಬಾಕಿ ಇದೆ. ಇವೆಲ್ಲದ್ರ ನಡುವೆ ಈ ಸೀಸನ್‌ನ ಕೊನೆಯ ವೀಕೆಂಡ್‌ ಸಂಚಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಿಚ್ಚ ಸುದೀಪ್‌ ಮೇಲೆ ವೀಕ್ಷಕರು ಸಿಟ್ಟಾಗಿದ್ದಾರೆ. ಕಿಚ್ಚನ ಚಪ್ಪಾಳೆ ಹಾಗೂ ರಕ್ಷಿತಾಳನ್ನ ಕತ್ತೆ ಎಂದು ಬೈದ ವಿಚಾರಕ್ಕೆ ವೀಕ್ಷಕರು ಆಕ್ರೋಶ ಹೊರ ಹಾಕಿದ್ದಾರೆ. ಗಿಲ್ಲಿಗಿಂತ ಧ್ರುವಂತ್‌ ಹೇಗೆ ಬೆಸ್ಟ್‌ ಅನ್ನಿಸಿದ್ರು? ರಕ್ಷಿತಾಳನ್ನ ಕತ್ತೆಗೆ ಹೋಲಿಸಿದ್ದು ಸರಿನಾ ಅಂತ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ: ಮಲ್ಲಮ್ಮ ಯಾಕೋ ಮೊದಲಿನಂತಿಲ್ಲ! – ಮಲ್ಲಮ್ಮ ಮೇಲೂ ಅಸಮಧಾನ ಹೊರ ಹಾಕಿದ ಧ್ರುವಂತ್!‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಕೊನೆಯ ಹಂತಕ್ಕೆ ತಲುಪಿದೆ. ಈ ಸೀಸನ್‌ ವಿನ್ನರ್‌ ಗಿಲ್ಲಿ ಅಂತಾನೇ ವೀಕ್ಷಕರು ಹೇಳ್ತಾ ಬಂದಿದ್ದಾರೆ. ಆದ್ರೀಗ ಸದ್ಯದ ಬೆಳವಣಿಗೆ ನೋಡಿದ್ರೆ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗೋ ಸಾಧ್ಯತೆ ದಟ್ಟವಾಗಿ ಕಾಣ್ತಿದೆ. ಇದೀಗ ಕಿಚ್ಚ ಸುದೀಪ್‌ ನಡೆಗೂ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ಈ ವಾರದ ವೀಕೆಂಡ್‌ ಸಂಚಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ,

ಹೌದು, ಹಿಂದಿನ ವಾರ ಟಾಪ್‌ 6 ಕಂಟೆಂಡೆರ್‌ ಟಿಕೆಟ್‌ ಪಡೆಯಲು ಅನೇಕ ಟಾಸ್ಕ್‌ಗಳು ನಡೆದವು. ಇಡೀ ವಾರ ಹಲವು ಬಗೆಯ ಟಾಸ್ಕ್‌ಗಳು ನಡೆದು ಅಂತಿಮವಾಗಿ ಅಶ್ವಿನಿ ಗೌಡ, ಧ್ರುವಂತ್‌, ರಘು, ಕಾವ್ಯಾ, ಧನುಷ್‌ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಆಡಿದರು. ಅದರಲ್ಲಿ ಧನುಷ್‌ ಗೆದ್ದು ಟಿಕೆಟ್‌ ಪಡೆದಿದ್ದಾರೆ. ಆದರೆ ಇಡೀ ವಾರ ಅಶ್ವಿನಿ ಗೌಡ ಆಟ ಚೆನ್ನಾಗಿತ್ತು ಅಂತಾ ಹೇಳಿ ಕಿಚ್ಚ ಸುದೀಪ್‌ ಕಿಚ್ಚನ ಚಪ್ಪಾಳೆಯನ್ನ ಅಶ್ವಿನಿಗೆ ನೀಡಿದ್ದಾರೆ. ಮತ್ತೊಂದ್ಕಡೆ ಈ ವಾರ ಅಶ್ವಿನಿಯಿಂದ ದೊಡ್ಮನೆ ಮಂದಿ ಕೊಂಚ ಅಂತರ ಕಾಯ್ದುಕೊಂಡಿದ್ರು. ಈ ಟೈಮ್‌ನಲ್ಲಿ ಅಶ್ವಿನಿ ಪರ ಧ್ರುವಂತ್‌ ನಿಂತಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಹಾಗೂ ಧ್ರುವಂತ್‌ ಒಂದು ಟೀಮ್‌ ಆದ್ರೆ, ಉಳಿದವರು ಒಂದು ಟೀಮ್‌ ಆಗಿದ್ರು. ಈ ವಿಚಾರವನ್ನ ಇಟ್ಟುಕೊಂಡು ಈ ಸೀಸನ್‌ನ ಕಿಚ್ಚನ ಚಪ್ಪಾಳೆಯನ್ನ ಧ್ರುವಂತ್‌ ಗೆ ನೀಡಿದ್ದಾರೆ. ಸುದೀಪ್‌ ಇಡೀ ಸೀಸನ್‌ನಲ್ಲಿ ನೀವು ಚೆನ್ನಾಗಿ ಮನರಂಜನೆ ನೀಡಿದ್ದೀರಾ ಅಂತ ಹೇಳಿ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ. ಇದೀಗ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಶ್ವಿನಿ ಗೌಡ ವ್ಯಕ್ತಿತ್ವ ಎಂಥದ್ದು ಎಂಬುದನ್ನ ಇಡೀ ಸೀಸನ್‌ನಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಅಶ್ವಿನಿ ಟಾಸ್ಕ್‌ನಲ್ಲಿ ಮೋಸ ಮಾಡಿಕೊಂಡೇ ಬಂದಿದ್ರು. ಬೇರೆ ಸ್ಪರ್ಧಿಗಳ ಬಗ್ಗೆ ನಡವಳಿಕೆ ಬಗ್ಗೆ ಕೆಟ್ಟದಾಗಿ ಮಾಡಿ ಕಮೆಂಟ್‌ ಮಾಡಿದ್ರು. ಅಂಥದ್ದರಲ್ಲಿ ಅವರಷ್ಟು ನಾಟಕ ಮಾಡಿದ್ದು ಸುದೀಪ್‌ಗೆ ಗೊತ್ತಾಗ್ಲಿಲ್ಲವಾ ಎಂದು ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಧ್ರುವಂತ್‌ ವಿಚಾರಕ್ಕೆ ಬಂದ್ರೆ, ಧ್ರುವಂತ್‌ ವರ್ತನೆ ಮನೆ ಮಂದಿಗೆ ಮಾತ್ರವಲ್ಲ ವೀಕ್ಷಕರಿಗೂ ಕಿರಿಕಿರಿ ಅನ್ನಿಸುತ್ತಿತ್ತು. ರಕ್ಷಿತಾಗೆ ಸಾಕಷ್ಟು ಅವಮಾನ ಮಾಡಿದ್ರು. ಇನ್ನೊಬ್ಬರ ನಡವಳಿಕೆ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ, ಹೆಣ್ಣಿಗೆ ಅವಮಾನ ಮಾಡುವವರಿಗೆ ಈ ಸೀಸನ್‌ ನ ಕಿಚ್ಚನ ಚಪ್ಪಾಳೆ ಕೊಟ್ಟಿದ್ದು ಸರಿಯಲ್ಲ. ಕಿಚ್ಚನ ಚಪ್ಪಾಳೆ ಸ್ಪರ್ಧಿಗಳಿಗೆ ಸ್ಪೂರ್ತಿ ನೀಡುತ್ತೆ. ಅದಕ್ಕೆ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರೂ ಗೌರವ ನೀಡುತ್ತಾರೆ. ಧ್ರುವಂತ್‌, ಅಶ್ವಿನಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿದ್ದು ಸರಿಯಲ್ಲ. ಇಡೀ ಸೀಸನ್‌ನಲ್ಲಿ ಮನರಂಜನೆ ನೀಡಿದ್ದು ಗಿಲ್ಲಿ. ಆದ್ರೆ ಧ್ರುವಂತ್‌ಗೆ ಬೇಡ ಇತ್ತು ಎಂದು ಕಮೆಂಟ್‌ ಮಾಡಿದ್ದಾರೆ.

ಇನ್ನು ರಕ್ಷಿತಾ ಅವರು ಗಿಲ್ಲಿ ಮತ್ತು ರಘು ಬಗ್ಗೆ ಪೊಸೆಸಿವ್‌ ಆಗಿದ್ದಾರೆ. ತಾನು ಮತ್ತು ಗಿಲ್ಲಿ ಇಬ್ಬರೇ ಕುಳಿತುಕೊಳ್ಳಬೇಕು ಎಂದು ಬೀನ್‌ ಬ್ಯಾಗ್‌ಗಳನ್ನ ಪಕ್ಕಕ್ಕೆ ಇಡುತ್ತಾರೆ. ಕಳೆದ ವಾರ ನಾಮಿನೇಷನ್‌ ವೇಳೆ ಇದೇ ವಿಚಾರಕ್ಕೆ ರಾಶಿಕಾ ಹಾಗೂ ರಕ್ಷಿತಾ ನಡುವೆ ಜಗಳ ಆಗಿತ್ತು. ಈ ವಿಚಾರಕ್ಕೂ ಸುದೀಪ್‌ ಸಿಟ್ಟಾಗಿದ್ರು. ತಕ್ಷಣ ಚಿಕ್ಕಪ್ಪನ ಕಥೆಯ ಮೂಲಕ ಹುಲಿ- ಕತ್ತೆಯ ಕಥೆ ಹೇಳುತ್ತಾರೆ. ಸುದೀಪ್ ಈ ಕಥೆ ಹೇಳುವಾಗ ಕತ್ತೆ ಜೊತೆ ವಾದ ಮಾಡಬಾರದು ಎಂದು ಹೇಳಿದ್ದಾರೆ. ಇದೀಗ ಕತ್ತೆ ಎಂದು ಯಾರಿಗೆ ಹೇಳಿದ್ದು ಎಂದು ಇಡೀ ಕರ್ನಾಟಕ ಜನರಿಗೆ ಅರ್ಥ ಆಗಿದೆ. ಇಲ್ಲದಿದ್ದರೆ ಆ ಚಿಕ್ಕಪ್ಪನ ಕಥೆಯನ್ನು ಆ ಸಂದರ್ಭದಲ್ಲಿ ಹೇಳುವ ಅಗತ್ಯ ಇರಲಿಲ್ಲ. ಆ ಹುಡುಗಿಗೆ ಎಷ್ಟು ಅವಮಾನ ಎಂದು ವೀಕ್ಷಕರು ಕಮೆಂಟ್‌ ಮಾಡಿದ್ದಾರೆ.

Shwetha M