ಮತ್ತೆ ನರಿ ಬುದ್ದಿ ತೋರಿಸಿದ ಪಾಕ್! – ಗಡಿಯಲ್ಲಿ ಡ್ರೋನ್ ಹಾರಿಸಿದ ಶತ್ರು ರಾಷ್ಟ್ರ!

ಪಾಪಿ ಪಾಕಿಸ್ತಾನ ಪದೇ ಪದೆ ತನ್ನ ನರಿಬುದ್ದಿ ತೋರಿಸುತ್ತಲೇ ಇದೆ. ಇದೀಗ ಪಾಕಿಸ್ತಾನ ಮತ್ತೆ ಭಾರತದ ಗಡಿಯಲ್ಲಿ ಕಿತಾಪತಿ ಶುರುಮಾಡಿದೆ. ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯ ಬಳಿ ಭಾನುವಾರ ರಾತ್ರಿ ಪಾಕಿಸ್ತಾನಿ ಡ್ರೋನ್ಗಳು ಕಂಡುಬಂದಿದ್ದು, ಭಾರತೀಯ ಸೇನೆ ಗುಂಡು ಹಾರಿಸಿ ಅವುಗಳನ್ನು ಕೆಡವಿದೆ.
ಇದನ್ನೂ ಓದಿ: ಈ ದ್ವೀಪಕ್ಕೆ ಪುರುಷರಿಗೆ ನೋ ಎಂಟ್ರಿ! – ಸೂಪರ್ಶೀ ದ್ವೀಪ ಎಲ್ಲಿದೆ ಗೊತ್ತಾ?
ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್ಗಳನ್ನು ಹೊಡೆದುರುಳಿಸಿತ್ತು. ಅದರ ನಂತರ ಡ್ರೋನ್ ಹಾರಾಟ ಕಡಿಮೆಯಾಗಿತ್ತು. ಆದ್ರೆ ನಿನ್ನೆ ಮತ್ತೆ ಪಾಕಿಸ್ತಾಣ ತನ್ನ ನರಿಬುದ್ದಿ ತೋರಿಸಿದೆ. ನೌಶೇರಾ ಸೆಕ್ಷರ್ ಗಡಿ ನಿಯಂತ್ರಣ ರೇಖೆಯ ಬಳಿ ಆಪರೇಷನ್ ಸಿಂಧೂರದ ಸಮಯದಲ್ಲಿ ಯಾವ ರೀತಿ ಡ್ರೋನ್ಗಳು ಹಾರಾಟ ನಡೆಸಿದ್ದವೋ ಅದೇ ರೀತಿ ಡ್ರೋನ್ಗಳು ಕಂಡುಬಂದಿದೆ. ಕೂಡಲೇ ಭಾರತೀಯ ಸೇನೆ ಗುಂಡು ಹಾರಿಸಿ ಅವುಗಳನ್ನು ಕೆಡವಿದೆ. ನಿನ್ನೆ ಒಂದೇ ದಿನದಲ್ಲಿ ಕನಿಷ್ಠ ಐದು ಪಾಕಿಸ್ತಾನಿ ಡ್ರೋನ್ ಆಕ್ರಮಣಗಳು ವರದಿಯಾಗಿವೆ.
ಡ್ರೋನ್ಗಳು ಬಂದೂಕುಗಳು ಅಥವಾ ಮಾದಕವಸ್ತುಗಳನ್ನು ಬೀಳಿಸಿವೆಯೇ ಎಂದು ಪರಿಶೀಲಿಸಲು ಸೇನೆಯು ಪ್ರದೇಶವನ್ನು ಶೋಧಿಸುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಿಕ್ಕಿನಿಂದ ಬಂದ ಡ್ರೋನ್ ಒಂದು ಸಾಂಬಾ ಸೆಕ್ಟರ್ನಲ್ಲಿ ಶಸ್ತ್ರಾಸ್ತ್ರಗಳ ಸರಕನ್ನು ಬೀಳಿಸಿದೆ ಎಂದು ಸೇನೆ ತಿಳಿಸಿದೆ.
ಭಾರತದ ಸೈನ್ಯದ ಮೆಷಿನ್ ಗನ್ಗಳು ಈ ಡ್ರೋನ್ಗಳನ್ನು ಹೊಡೆದುರುಳಿಸಿವೆ. ಸಂಜೆ 6.35 ಕ್ಕೆ ರಾಜೌರಿ ಜಿಲ್ಲೆಯಲ್ಲಿ ಮತ್ತೊಂದು ಡ್ರೋನ್ ಕಾಣಿಸಿಕೊಂಡಿದೆ. ಸಾಂಬಾದ ರಾಮಗಢ ಸೆಕ್ಟರ್ನಲ್ಲಿರುವ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಸಂಜೆ 7.15 ರ ಸುಮಾರಿಗೆ ಡ್ರೋನ್ನಂತಹ ವಸ್ತುವೊಂದು ಕೆಲವು ನಿಮಿಷಗಳ ಕಾಲ ಸುಳಿದಾಡಿತ್ತು.

ನೋಡಿರಿ

