ರಾತ್ರಿ ಲೈಟ್ ON ಮಾಡಿ ಮಲಗುತ್ತೀರಾ? – Heart ಸಮಸ್ಯೆ ಬರುತ್ತೆ.. ಹುಷಾರ್!

ಪ್ರತಿದಿನ ಆರೋಗ್ಯವಂತ ವ್ಯಕ್ತಿಗೆ ಸುಮಾರು 6 ರಿಂದ7 ಗಂಟೆಗಳ ದೀರ್ಘವಾದ ನಿದ್ರೆ ಅವಶ್ಯಕ. ಕೆಲವರಿಗೆ ಲೈಟ್ ಆನ್ ಇದ್ರೆ ನಿದ್ದೆ ಬರಲ್ಲ. ಇನ್ನೂ ಕೆಲವರು ಕತ್ತಲೆ ಅಂದ್ರೆ ಭಯ ಅಂತ ಲೈಟ್ ಆನ್ ಮಾಡಿ ನಿದ್ದೆ ಮಾಡ್ತಾರೆ. ಹೀಗೆ ರಾತ್ರಿ ಪೂರ್ತಿ ಲೈಟ್ ಆನ್ ಮಲಗೋದು ಡೇಂಜರ್ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದ್ರಿಂದಾಗಿ ನಿಮ್ಮ ಆರೋಗ್ಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಯಶ್ ʼಟಾಕ್ಸಿಕ್ʼಗೆ ಕಾನೂನು ಸಂಕಷ್ಟ! – ಟೀಸರ್ ಟೀಕೆ ಮಾಡಿದವರಿಗೆ ನಿರ್ದೇಶಕಿ ತಿರುಗೇಟು
ತಜ್ಞರ ಪ್ರಕಾರ ನಮ್ಮ ದೇಹವು ಕತ್ತಲೆಯಾದಾಗ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನ ಉತ್ಪಾದನೆ ಮಾಡುತ್ತೆ. ಈ ಹಾರ್ಮೋನ್ ನಮಗೆ ಆಳವಾದ, ವಿಶ್ರಾಂತಿ ಮತ್ತು ಆರೋಗ್ಯಕರ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೆ ನೀವು ಮಲಗುವಾಗ ಲೈಟ್ ಆನ್ ಮಾಡಿ ಮಲಗಿದ್ರೆ ಮೆಲಟೋನಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದ್ರಿಂದಾಗಿ ನಿದ್ರೆ ಮೇಲೆ ಎಫೆಕ್ಟ್ ಬೀಳುವುದಲ್ಲದೇ, ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.
ನಿದ್ದೆ ಸರಿಯಾಗಿ ಆಗಿಲ್ಲ ಅಂದ್ರೆ ಹೃದಯದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿದ್ದೆ ಬಂದಿಲ್ಲ ಅಂದ್ರೆ, ದೇಹದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಹೃದಯ ಬಡಿತವನ್ನು ವೇಗಗೊಳಿಸುತ್ತದೆ ಮತ್ತು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಹೀಗಾಗಿ ಹಾರ್ಟ್ ಪ್ರಾಬ್ಲಂ ಕೂಡ ಶುರುವಾಗುವ ಸಾಧ್ಯತೆ ಇದೆ.
ಇನ್ನು ರಾತ್ರಿಯಲ್ಲಿ ಲೈಟ್ ಆನ್ ಮಾಡಿ ಮಲಗುವುದು ದೇಹದ ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಅಲ್ಲದೇ ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಲೈಟ್ ಆಫ್ ಮಾಡಿಯೇ ನಿದ್ದೆ ಮಾಡಿ. ಕತ್ತಲಿನ ಭಯ ಇದ್ರೆ ಡಿಮ್ ಲೈಟ್ ಅನ್ನ ಉರಿಸಿ. ಕಣ್ಣಿಗೆ ನೇರ ಬೆಳಕು ಬೀಳುವುದನ್ನ ತಪ್ಪಿಸಿ. ಹೀಗೆ ಮಾಡಿದ್ರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ.

ನೋಡಿರಿ

