RCBಯ LOYAL ಪ್ಲೇಯರ್ ಕೊಹ್ಲಿ – ಧೋನಿ, ರೋಹಿತ್ ಐಕಾನಿಕ್ ಸ್ಟಾರ್ಸ್
10 ವರ್ಷ.. 1 ತಂಡದಲ್ಲಿ ಇದ್ದವರೆಷ್ಟು?

ಐಪಿಎಲ್ನಲ್ಲಿ ಹಣದ ಹೊಳೆಯೇ ಹರಿಯುತ್ತೆ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಌಂಡ್ ಮೆಗಾ ಹರಾಜಿನ ಮೂಲಕ ಕೋಟಿಗಟ್ಟಲೆ ದುಡ್ಡು ಮಾಡಿದವ್ರೂ ಇದ್ದಾರೆ. ಆದ್ರೆ ಹಣಕ್ಕಿಂತ ನಿಷ್ಠೆನೇ ಮುಖ್ಯ ಅಂತಾ 10 ವರ್ಷಗಳಿಗೂ ಹೆಚ್ಚು ಕಾಲ ಒಂದೇ ತಂಡದಲ್ಲಿ ಆಡಿದವ್ರೂ ಇದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ಗೆ ಸಿಗದ ಚಾನ್ಸ್ – ಕೊನೆಗೂ ಮೌನ ಮುರಿದ ಶುಭಮನ್ ಗಿಲ್
ಜಗತ್ತಿನ ಶ್ರೀಮಂತ ಲೀಗ್ ಆಗಿರೋ ಐಪಿಎಲ್ನಲ್ಲಿ ಕಳೆದ ಬಾರಿಯ ಮೆಗಾ ಆಕ್ಷನ್ ಮತ್ತು ಮಿನಿ ಆಕ್ಷನ್ನಲ್ಲಿ ಕೋಟಿಗಳಿಗೆ ಲೆಕ್ಕವೇ ಇಲ್ಲದಂತೆ ಬಿಡ್ಡಿಂಗ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಕೆಲ ಆಟಗಾರರು ಅಚ್ಚರಿ ಎನ್ನುವಂತೆ ದುಬಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಅದ್ರಲ್ಲೂ ಈ ಟಾಪ್ 5 ಪ್ಲೇಯರ್ಗಳು ಹರಾಜಿಗೆ ಬಂದ್ರೆ ಬಿಡ್ಡಿಂಗ್ನಲ್ಲಿ ಚರಿತ್ರೆ ಸೃಷ್ಟಿಸೋದು ಗ್ಯಾರಂಟಿ. ಹೀಗಿದ್ರೂ ಕೆಲ ಫ್ರಾಂಚೈಸಿಗಳಲ್ಲಿ ಐಕಾನಿಕ್ ಪ್ಲೇಯರ್ ಗಳಾಗಿ ಅಲ್ಲಿಯೇ ಕಂಟಿನ್ಯೂ ಆಗ್ತಿದ್ದಾರೆ. ಅದ್ರಲ್ಲಿ ನಂಬರ್ 1 ನಮ್ಮ ಆರ್ಸಿಬಿಯ ಹೀರೋ ಕಿಂಗ್ ವಿರಾಟ್ ಕೊಹ್ಲಿ.
19 ವರ್ಷಗಳಿಂದ ಆರ್ ಸಿಬಿ ಪರವೇ ಆಡ್ತಿರುವ ಕೊಹ್ಲಿ!
ಲಾಯಲ್ಟಿಗೆ ಮತ್ತೊಂದು ಹೆಸ್ರೇ ವಿರಾಟ್ ಕೊಹ್ಲಿ. ಅವ್ರಿಗೆ ಇರೋ ನೇಮ್, ಫೇಮ್, ಸಾಮರ್ಥ್ಯ ಎಲ್ಲಾ ನೋಡಿದ್ರೆ ಮೆಗಾ ಆಕ್ಷನ್ಗೇನಾದ್ರೂ ಬಂದಿದ್ರೆ ದಾಖಲೆಗಳೇ ಛಿದ್ರವಾಗುವಂತೆ ಬಿಡ್ಡಿಂಗ್ ನಡೀತಿತ್ತು. ಬಟ್ ಕೊಹ್ಲಿ ಯಾವತ್ತೂ ಹಣದ ಹಿಂದೆ ಹೋದವ್ರಲ್ಲ. ನಿಷ್ಠೆಯಿಂದ ಒಂದೇ ತಂಡದ ಪರ ಆಡ್ತಿದ್ದಾರೆ. 2008ರಲ್ಲಿ ಸೀಸನ್ ಆರಂಭವಾದಾಗಿಂದ್ಲೂ ಕೊಹ್ಲಿ ಆರ್ಸಿಬಿ ಬಿಟ್ಟು ಅತ್ತಿತ್ತ ಕದಲಿಲ್ಲ. ಹಾಗೇ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಒಂದೇ ಫ್ರಾಂಚೈಸಿ ಪರ 8,000+ ರನ್ ಗಳಿಸಿದ ಏಕೈಕ ಆಟಗಾರ. ಆರ್ಸಿಬಿ ಪರ 267 ಪಂದ್ಯಗಳನ್ನ ಆಡಿದ್ದು 8,661 ರನ್ ಗಳಿಸಿದ್ದಾರೆ. ಸರಾಸರಿ: 39.55 ಇದೆ. SR: 132.86.. 8 ಸೆಂಚುರಿ ಮತ್ತು 63 ಅರ್ಧಶತಕ ಬಾರಿಸಿದ್ದಾರೆ. 118 ಕ್ಯಾಚ್ಗಳನ್ನ ಹಿಡಿದಿದ್ದಾರೆ.
ಮುಂಬೈಗೆ 5 ಕಪ್ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ!
ಐಪಿಎಲ್ನ ಒನ್ ಆಫ್ ದಿ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಮುಂಬೈ ಪರವೇ ಗುರುತಿಸಿಕೊಂಡಿದ್ದಾರೆ. 2011ರಿಂದ ಸ್ಟಿಲ್ ಈವರೆಗೂ ಮುಂಬೈನಲ್ಲೇ ಇದ್ದಾರೆ. ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೇ ನಾಯಕನಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ, ತಮ್ಮ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ 2013, 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್ ಆಗಿದೆ. 2011ರಲ್ಲಿ ಮುಂಬೈ ಸೇರಿದ ರೋಹಿತ್ 15 ವರ್ಷಗಳಿಂದ ಅದೇ ತಂಡದಲ್ಲಿ ಮುಂದುವರೆದಿದ್ದಾರೆ.
ಸಿಎಸ್ ಕೆ ಅಂದ್ರೆ ಧೋನಿ.. ಧೋನಿ ಅಂದ್ರೆ ಸಿಎಸ್ ಕೆ!
ಐಪಿಎಲ್ ನ ಮತ್ತೊಂದು ಯಶಸ್ವಿ ತಂಡ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ). 5 ಬಾರಿ ಕಪ್ ಗೆದ್ದಿದೆ ಮತ್ತು 5 ಬಾರಿ ರನ್ನರ್ ಅಪ್ ಆಗಿದೆ. ಬೇರೆ ಯಾವುದೇ ಫ್ರಾಂಚೈಸಿ ಈ ಮಟ್ಟದ ಯಶಸ್ಸನ್ನು ಸಾಧಿಸಿಲ್ಲ. ಌಂಡ್ ಪ್ಲೇಆಫ್ಗೆ ಅರ್ಹತೆ ಪಡೆಯುವುದು ಮತ್ತು ಗೆಲುವಿನ ಶೇಕಡಾವಾರು ಪ್ರಮಾಣದಲ್ಲೂ ಸಿಎಸ್ಕೆ ಅಗ್ರಸ್ಥಾನದಲ್ಲಿದೆ. 2011ರಿಂದ ಸಿಎಸ್ಕೆ ಪರ ಆಡ್ತಿರೋ ಧೋನಿ ಮಧ್ಯದಲ್ಲಿ 2 ವರ್ಷ ಸಿಎಸ್ಕೆ ಬ್ಯಾನ್ ಆಗಿದ್ರಿಂದ ಬೇರೆ ಟೀಂ ಪರ ಆಡಿದ್ರು. ನಂತ್ರ ಮತ್ತೆ ಸಿಎಸ್ ಕೆ ಕಂ ಬ್ಯಾಕ್ ಮಾಡಿದ್ದು ಈಗ್ಲೂ ಯೆಲ್ಲೋ ಜೆರ್ಸಿಯಲ್ಲೇ ಕಣಕ್ಕಿಳಿತಿದ್ದಾರೆ. ಸಿಎಸ್ಕೆ ಅಂದ್ರೆ ಧೋನಿ ಧೋನಿ ಅಂದ್ರೆ ಸಿಎಸ್ ಕೆ ಎನ್ನುವಂತಾಗಿದ್ದಾರೆ.
2012ರಿಂದ ಕೆಕೆಆರ್ ನ ಟ್ರಂಪ್ ಕಾರ್ಡ್ ಸುನಿಲ್ ನರೈನ್!
ಇನ್ನು ಕೆಕೆಆರ್ ಪರ ಆಡ್ತಿರುವ ಸುನಿಲ್ ನರೈನ್ ಕೂಡ ಲಾಯಲ್ ಪ್ಳೇಯರ್ ಆಗಿದ್ದಾರೆ. ಮಿಸ್ಟ್ರಿ ಸ್ಪಿನ್ನರ್ ಆಗಿದ್ದು ಸ್ಫೋಟಕ ಬ್ಯಾಟಿಂಗ್ ಮೂಲಕವೂ ಸದ್ದು ಮಾಡಿದ್ದಾರೆ. ಇತ್ತೀಚಿನ ಸೀಸನ್ಗಳಲ್ಲಂತೂ ಸ್ಫೋಟಕ ಓಪನರ್ ಆಗಿ ರನ್ಸ್ ಸ್ಕೋರ್ ಮಾಡ್ತಿದ್ದಾರೆ. ಕೆಕೆಆರ್ ಪರ 189 ಪಂದ್ಯಗಳನ್ನ ಆಡಿದ್ದಾರೆ. ಹಾಗೇ 1,780 ರನ್ಸ್ ಕಲೆ ಹಾಕಿದ್ದಾರೆ. ಸ್ಟ್ರೈಕ್ರೇಟ್ 166.51 ಇದೆ. ಒಂದು ಶತಕ 7 ಅರ್ಧಶತಕ ಇವ್ರ ಬ್ಯಾಟಿಂದ ಸಿಡಿದಿವೆ. ಇನ್ನು ಬೌಲಿಂಗ್ ಅಂತಾ ನೋಡಿದ್ರೆ 192 ವಿಕೆಟ್ ಬೇಟೆಯಾಡಿದ್ದಾರೆ.
ಮುಂಬೈ ತಂಡದ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ!
2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದ ಜಸ್ಪ್ರೀತ್ ಬುಮ್ರಾ, ತಮ್ಮ ಮಾರಕ ಯಾರ್ಕರ್ಗಳು ಮತ್ತು ಅಟ್ಯಾಕಿಂಗ್ ಬೌಲಿಂಗ್ನಿಂದಲೇ ಡೇಂಜರಸ್ ಬೌಲರ್ ಆಗಿ ಬೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ನ ಸಕ್ಸಸ್ಫುಲ್ ಜರ್ನಿ ಹಿಂದೆ ಬುಮ್ರಾ ಕೊಡುಗೆಯೂ ದೊಡ್ಡದಿದೆ. ಎಂಥಾ ಪ್ರೆಶರ್ ಟೈಮಲ್ಲೂ ಬೌಲಿಂಗ್ ಮಾಡುವ ಅವರ ಸಾಮರ್ಥ್ಯ ಎಷ್ಟೋ ಯುವ ಕ್ರಿಕೆಟಗರಿಗೆ ಸ್ಪೂರ್ತಿಯಾಗಿದೆ. ಇನ್ನು ಐಪಿಎಲ್ನಲ್ಲಿ 145 ಪಂದ್ಯಗಳನ್ನ ಆಡಿದ್ದು 183 ವಿಕೆಟ್ ಪಡೆದಿದ್ದಾರೆ. 7.25 ಎಕಾನಮಿ ಇದೆ. ಸೋ ಬುಮ್ರಾ ಅಂದ್ರೆ ಮುಂಬೈ ಮುಂಬೈ ಅಂದ್ರೆ ಬುಮ್ರಾ ಅನ್ನುವಂತಾಗಿದೆ. ಹೀಗೆ ಈ ಐವರು ಆಟಗಾರರು 10 ವರ್ಷಗಳಿಗಿಂತಲೂ ಹೆಚ್ಚು ಕಾಲ ಒಂದೇ ತಂಡದ ಪರ ಆಡ್ತಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಈಗಿರುವ ಟೀಮ್ಗಳಲ್ಲೇ ಐಪಿಎಲ್ ಕೆರಿಯರ್ ಮುಗಿಸೋ ಸಾಧ್ಯತೆಗಳೂ ಇವೆ.

ನೋಡಿರಿ

