ಈ ವಾರ ಪ್ರಬಲ ಸ್ಪರ್ಧಿಯೇ ಎಲಿಮಿನೇಟ್! – ಕಾವ್ಯ ಸೇವ್ ಆಗಿದ್ದು ಹೇಗೆ?

ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹತ್ತಿರವಾಗ್ತಿದ್ದಂತೆ ವೀಕ್ಷಕರ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಇದೀಗ ಬಿಗ್ಬಾಸ್ ನಿಂದ ಪ್ರಬಲ ಸ್ಪರ್ಧಿಯೇ ಔಟ್ ಆಗ್ತಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಯಶ್ ʼಟಾಕ್ಸಿಕ್ʼಗೆ ಕಾನೂನು ಸಂಕಷ್ಟ! – ಟೀಸರ್ ಟೀಕೆ ಮಾಡಿದವರಿಗೆ ನಿರ್ದೇಶಕಿ ತಿರುಗೇಟು
ಫಿನಾಲೆ ಹತ್ತಿರವಾಗ್ತಿದ್ದಂತೆ ಈ ವಾರ ಯಾರು ಔಟ್ ಆಗ್ತಾರೆ? ಯಾರು ಫಿನಾಲೆಗೆ ಹೋಗಲಿದ್ದಾರೆ ಎಂಬ ಕುತೂಹಲ ಇದೆ. ಎರಡು ದಿನಗಳ ಹಿಂದಷ್ಟೇ ಕಾವ್ಯ ದೊಡ್ಮನೆಯಿಂದ ಔಟ್ ಆಗಿದ್ದರು ಎಂದು ಹೇಳಲಾಗ್ತಿತ್ತು. ಆದ್ರೀಗ ಪ್ರಬಲ ಸ್ಪರ್ಧಿ ರಾಶಿಕಾ ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.
ಅಶ್ವಿನಿ ಗೌಡ, ರಘು, ಗಿಲ್ಲಿ ನಟ, ಕಾವ್ಯ ಶೈವ, ಧನುಷ್ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರು ನಾಮಿನೇಟ್ ಆಗಿದ್ದರು. ಹೀಗಾಗಿ ಯಾರು ಹೋಗಬಹುದು ಎಂದು ಡೌಟ್ ಇತ್ತು. ಫಿನಾಲೆ ಹತ್ತಿರ ಬಂದಿದ್ದಕ್ಕೆ ಎಲ್ಲರೂ ಪ್ರಯತ್ನಪಟ್ಟು ಆಡುತ್ತಿದ್ದರು. ಈ ಮಧ್ಯೆ ಕಾವ್ಯ ಶೈವ ಫ್ಯಾಮಿಲಿಯವರು ಮಾಡಿದ ಎಡವಟ್ಟಿಗೋಸ್ಕರ ಅವರು ಎಲಿಮಿನೇಟ್ ಆಗಬೇಕಿತ್ತು ಎಂದು ಕಿಚ್ಚ ಸುದೀಪ್ ಕೂಡ ಹೇಳಿದ್ದರು. ಆದರೂ ಕಾವ್ಯ ಔಟ್ ಆಗಿರಲಿಲ್ಲ. ಈಗ ರಾಶಿಕಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗ್ತಿದೆ.
ಈ ಬಾರಿ ರಾಶಿಕಾ ಶೆಟ್ಟಿ ಅವರು ಟಾಸ್ಕ್ಗಳನ್ನು ಚೆನ್ನಾಗಿ ಆಡಿದ್ದರು. ಫಿಸಿಕಲೀ ಇವರು ಸ್ಟ್ರಾಂಗ್ ಆಗಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೆ ರಾಶಿಕಾ ಅವರ ಬಿಗ್ ಬಾಸ್ ಜರ್ನಿ ಮುಗಿದಿದೆ ಎಂಬ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ನೋಡಿರಿ

