ಕ್ಯಾಪ್ಟನ್ಸಿಯಲ್ಲಿ KL ಸಕ್ಸಸ್.. ಗಿಲ್? – ಶುಭ್ ಮನ್ ಗೆ ಶ್ರೇಯಸ್ ಟೆನ್ಷನ್
NZ ಸರಣಿ ಬೆನ್ನಲ್ಲೇ ಮೇಜರ್ ಸರ್ಜರಿ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ವಡೋದರಾದಲ್ಲಿ ಇವತ್ತು ಮೊದಲ ಪಂದ್ಯ ನಡೆಯಲಿದೆ. ಈ ಸರಣಿ ಗೆದ್ದು ಭಾರತ ಈ ವರ್ಷ ಶುಭಾರಂಭ ಮಾಡೋಕೆ ಎದುರು ನೋಡ್ತಿದೆ. ಭಾರತಕ್ಕೆ ಈ ಮ್ಯಾಚ್ ಎಷ್ಟು ಮುಖ್ಯನೋ ಶುಭ್ಮನ್ ಗಿಲ್ ಪಾಲಿಗೆ ಅದಕ್ಕಿಂತ ಜಾಸ್ತಿ ಇಂಪಾರ್ಟೆಂಟ್ ಆಗಲಿದೆ. ಆಟಗಾರನಾಗಿ ಅಷ್ಟೇ ಅಲ್ಲದೇ ಕ್ಯಾಪ್ಟನ್ಸಿ ಉಳಿಸಿಕೊಳ್ಳೋ ಸವಾಲು ಇದೆ.
ಇದನ್ನೂ ಓದಿ : ಟಿ20 ವಿಶ್ವಕಪ್ಗೆ ಸಿಗದ ಚಾನ್ಸ್ – ಕೊನೆಗೂ ಮೌನ ಮುರಿದ ಶುಭಮನ್ ಗಿಲ್
ಭಾರತ ಮತ್ತು ನ್ಯೂಜಿಲೆಂಡ್ ಸರಣಿ ಅಭಿಮಾನಿಗಳ ಪಾಲಿಗೆ ತುಂಬಾನೇ ಸ್ಪೆಷಲ್. ಯಾಕಂದ್ರೆ ರೋಹಿತ್ ಶರ್ಮಾ ಹಾಗೇ ವಿರಾಟ್ ಕೊಹ್ಲಿ ಕಣಕ್ಕಿಳಿಯೋದ್ರಿಂದ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲೇ ಮೈದಾನದಲ್ಲಿ ಸೇರ್ತಾರೆ. ಟಿಕೆಟ್ ಮಾರಾಟ ಶುರುವಾದ 8 ನಿಮಿಷಗಳಲ್ಲೇ ಟಿಕೆಟ್ಸ್ ಸೋಲ್ಡ್ ಔಟ್ ಆಗಿದ್ದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಅಲ್ದೇ ಸೌತ್ ಆಫ್ರಿಕಾ ಸರಣಿ, ವಿಜಯ್ ಹಜಾರೆ ಟೂರ್ನಿಯಲ್ಲಿ ರೋಕೋ ಜೋಡಿ ಸಾಲಿಡ್ ಫಾರ್ಮ್ನಲ್ಲಿದ್ದು ನ್ಯೂಜಿಲೆಂಡ್ ವಿರುದ್ಧವೂ ಇಬ್ಬರಿಂದ ಬಿಗ್ ಇನ್ನಿಂಗ್ಸ್ ಬರೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಈ ಸರಣಿ ಶುಭ್ಮನ್ ಗಿಲ್ ಪಾಲಿಗೆ ಫ್ಯೂಚರ್ ಡಿಸೈಡರ್ ಆಗುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಕ್ಯಾಪ್ಟನ್ ಆಗಿ ತಂಡದಲ್ಲಿ ಸರ್ವೈವ್ ಆಗ್ಬೇಕು ಅಂದ್ರೆ ಬ್ಯಾಟ್ನಲ್ಲೂ ಸದ್ದು ಮಾಡ್ಬೇಕು.. ರಿಸಲ್ಟ್ನಲ್ಲೂ ಭಾರತ ಗೆಲ್ಬೇಕಿದೆ. ಇಲ್ಲದೇ ಇದ್ರೆ ಗಿಲ್ ಜರ್ನಿಗೆ ದೊಡ್ಡ ಕಂಟಕ ಎದುರಾಗಲಿದೆ.
ಏಕದಿನದಲ್ಲಾದ್ರೂ ಸ್ಥಾನ ಉಳಿಸಿಕೊಳ್ತಾರಾ ಗಿಲ್?
ಭಾರತದ ಟಿ-20ಐ ಟೀಂ ಸ್ಟ್ರಾಂಗ್ ಆಗಿದ್ರೂ ಅಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವ್ರ ಫಾರ್ಮ್ ಕಳಪೆಯಾಗಿದೆ. ಇತ್ತ ಏಕದಿನ ಮಾದರಿಯಲ್ಲೂ ಕ್ಯಾಪ್ಟನ್ ಶುಭ್ಮನ್ ಗಿಲ್ ಮಂಕಾಗಿದ್ದಾರೆ. ಆಸ್ಟ್ರೇಲಿಯಾ ಸರಣಿ ಮೂಲಕ ಏಕದಿನ ನಾಯಕತ್ವ ವಹಿಸಿಕೊಂಡ ಗಿಲ್ 3 ಇನ್ನಿಂಗ್ಸ್ಗಳಲ್ಲಿ 42 ರನ್ಗಳನ್ನಷ್ಟೇ ಕಲೆ ಹಾಕಿದ್ರು. ಆ ನಂತ್ರ ಸೌತ್ ಆಫ್ರಿಕಾ ಸಿರೀಸ್ನಲ್ಲಿ ಇಂಜುರಿ ಕಾರಣಕ್ಕೆ ತಂಡದಿಂದ ಹೊರಗುಳಿದಿದ್ರು. ಈಗ ಮತ್ತೆ ನ್ಯೂಜಿಲೆಂಡ್ ವಿರುದ್ಧ ನಾಯಕನಾಗಿ ಅಖಾಡಕ್ಕಿಳಿಯಲಿದ್ದಾರೆ. ಮೂರು ಪಂದ್ಯಗಳ ಈ ಸರಣಿ ಗಿಲ್ ಪಾಲಿಗೆ ಯಾಕೆ ಮುಖ್ಯ.. ಗಿಲ್ ಮುಂದಿರುವಂಥ ಸವಾಲುಗಳು ಏನು ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ..
ಮಾಡು ಇಲ್ಲವೇ ಮಡಿಯಲ್ಲಿ ಗಿಲ್!
ಟಿ-20ಐ ತಂಡದಿಂದ ಹೊರಬಿದ್ದಿರುವ ಶುಭ್ ಮನ್ ಗಿಲ್
ಏಕದಿನ ತಂಡದ ಕ್ಯಾಪ್ಟನ್ ಆಗಿ ಪ್ರೂವ್ ಮಾಡಬೇಕಾದ ಒತ್ತಡ
ಕೆಎಲ್ ರಾಹುಲ್ ನಾಯಕನಾಗಿ ಕಳೆದ ಸಿರೀಸ್ ನಲ್ಲಿ ಗೆಲುವು
ವೈಸ್ ಕ್ಯಾಪ್ಟನ್ ಶ್ರೇಯಸ್ ಓವರ್ ಟೇಕ್ ಮಾಡುವ ಸಾಧ್ಯತೆ
ವೈಟ್ ಬಾಲ್ ಫಾರ್ಮೆಟ್ ನಲ್ಲಿ ಫಾರ್ಮ್ ಇಲ್ಲ ಎನ್ನುವ ಟೀಕೆ
ವಿಜಯ್ ಹಜಾರೆಯಲ್ಲೂ ಸಿಕ್ಕ ಅವಕಾಶದಲ್ಲಿ ಬಿಗ್ ಸ್ಕೋರ್ ಬರಲಿಲ್ಲ
ಹೀಗೆ ಈ ಎಲ್ಲಾ ವಿಚಾರಗಳನ್ನ ನೋಡಿದಾಗ ಶುಭ್ಮನ್ ಗಿಲ್ ತುಂಬಾನೇ ಒತ್ತಡದಲ್ಲಿದ್ದಾರೆ. ಕಳೆದೊಂದು ವರ್ಷದಿಂದ ಎಕ್ಸ್ಪೆಶಲಿ ವೈಟ್ ಬಾಲ್ ಸಿರೀಸ್ನಲ್ಲಿ ಸಾಕಷ್ಟು ಸ್ಟ್ರಗಲ್ಸ್ ಎದುರಿಸಿದ್ದಾರೆ. ಹೀಗಿದ್ರೂ ಬಿಸಿಸಿಐ ಇಂದಲ್ಲ ನಾಳೆ ಕಂ ಬ್ಯಾಕ್ ಮಾಡ್ತಾರೆ ಅಂತಾ ಚಾನ್ಸ್ ಕೊಡ್ತಾನೇ ಬರ್ತಿದ್ದಾರೆ. ಬಹುಶಃ ಬೇರೆ ಯಾವ ಪ್ಲೇಯರ್ ಆದ್ರೂ ಅವ್ರ ಸ್ಥಾನದಲ್ಲಿ ಇದ್ದಿದ್ರೆ ಅವಕಾಶ ಕೊಡ್ತಿದ್ರೋ ಇಲ್ವೋ ಗೊತ್ತಿಲ್ಲ. ಸೋ ಈ ವರ್ಷ ತಾನು ಬೆಸ್ಟ್ ಪ್ಲೇಯರ್ ಅನ್ನೋದನ್ನ ಗಿಲ್ ಸಾಬೀತು ಪಡಿಸಬೇಕು. ಹಾಗೇ ಕ್ಯಾಪ್ಟನ್ಸಿಯನ್ನೂ ಉಳಿಸಿಕೊಳ್ಳಬೇಕು. ಈ ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತ್ರಷ್ಟೇ ಗಿಲ್ ಸರ್ವೈವ್ ಆಗ್ತಾರೆ. ಇಲ್ಲದೇ ಇದ್ರೆ ಮತ್ತಷ್ಟು ಟೀಕೆಗಳನ್ನ ಎದುರಿಸಬೇಕಾಗುತ್ತೆ ಅಷ್ಟೇ.

ನೋಡಿರಿ

