ಲೇಡಿ ಡಿವಿಲಿಯರ್ಸ್ ಡಿ ಕ್ಲರ್ಕ್ – ನಡಿನ್ ಆಟಕ್ಕೆ ಫ್ಯಾನ್ಸ್ ಕ್ಲೀನ್ ಬೌಲ್ಡ್
SA ಬ್ಲಡ್.. RCB ಗೇಮ್ ಚೇಂಜರ್ಸ್!

ಲೇಡಿ ಡಿವಿಲಿಯರ್ಸ್ ಡಿ ಕ್ಲರ್ಕ್ – ನಡಿನ್ ಆಟಕ್ಕೆ ಫ್ಯಾನ್ಸ್ ಕ್ಲೀನ್ ಬೌಲ್ಡ್SA ಬ್ಲಡ್.. RCB ಗೇಮ್ ಚೇಂಜರ್ಸ್!

ಸೋಶಿಯಲ್ ಮೀಡಿಯಾ ತುಂಬೆಲ್ಲಾ ಈಗ ಆರ್​ಸಿಬಿ ಗೆಲುವಿನದ್ದೇ ಟ್ರೆಂಡ್. ಆಲ್​ರೌಂಡರ್ ನಾಡಿನ್ ಡಿ ಕ್ಲರ್ಕ್ ದೇ ಪೋಸ್ಟ್​ಗಳು. ಮುಂಬೈ ವಿರುದ್ಧ ಗೆದ್ದಿರೋ ಆರ್​ಸಿಬಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಒಳ್ಳೆ ಸ್ಟಾರ್ಟ್ ಮಾಡಿದೆ. ಬಟ್ ಈ ಮ್ಯಾಚ್ ಆದ್ಮೇಲೆ ಡಿ ಕ್ಲರ್ಕ್ ಬಗ್ಗೆ ಅಭಿಮಾನಿಗಳ ಕ್ಯೂರಿಯಾಸಿಟಿ ಜಾಸ್ತಿ ಆಗ್ತಿದೆ? ಯಾರು ಈ ಪ್ಲೇಯರ್ ಅಂತಾ ತಡಕಾಡಿದವ್ರಿಗೆ ಎಬಿ ಡಿವಿಲಿಯರ್ಸ್ ನೆನಪಾಗ್ತಿದ್ದಾರೆ.

ಇದನ್ನೂ ಓದಿ  : RCB & DC ಗೆ ಬಿಗ್ ಶಾಕ್ – ಸ್ಟಾರ್ ಆಟಗಾರರೇ ಟೀಂನಿಂದ ಔಟ್

ಡಬ್ಲ್ಯೂಪಿಎಲ್​ನ ಫಸ್ಟ್ ಮ್ಯಾಚಲ್ಲಿ ಮುಂಬೈ ಕಡೆ ವಾಲಿದ್ದ ಗೆಲುವನ್ನ ಆರ್​ಸಿಬಿಗೆ ಧಕ್ಕಿಸಿಕೊಟ್ಟಿದ್ದೇ ನಡಿನ್ ಡಿ ಕ್ಲರ್ಕ್. ಅಷ್ಟಕ್ಕೂ ಕ್ಲರ್ಕ್ ದಕ್ಷಿಣ ಆಫ್ರಿಕಾ ಆಟಗಾರ್ತಿ. ಈ ಸೀಸನ್​ನಲ್ಲಿ ಎಲ್ಲಿಸ್ ಪೆರ್ರಿ ಇಲ್ಲ ಅನ್ನೋ ಕೊರಗನ್ನ ನೀಗಿಸೋ ನಿಟ್ಟಿನಲ್ಲಿ ಸಮರ್ಥವಾಗಿ ಪರ್ಫಾಮ್ ಮಾಡ್ತಿದ್ದಾರೆ. ಒಂದೇ ಮ್ಯಾಚಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ಎರಡ್ರಲ್ಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಗೆ ಬಂದು ಕೈಜಾರುತ್ತಿದ್ದ ಪಂದ್ಯವನ್ನ ಗೆದ್ದು ತೋರಿಸಿದ್ದಾರೆ. 44 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 63 ರನ್‌ ಸಿಡಿಸಿದರು. ಹಾಗೇ ಬೌಲಿಂಗ್​ನಲ್ಲಿ 4 ವಿಕೆಟ್ ಎಗರಿಸಿದ್ರು. ಕ್ಲರ್ಕ್ ಅವ್ರ ಇದೇ ಪ್ರದರ್ಶನಕ್ಕೆ ಫ್ಯಾನ್ಸ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಲ್ರೆಡಿ ಇವ್ರ ಹವಾ ಸ್ಟಾರ್ಟ್ ಆಗಿದೆ.

ಸೌತ್ ಆಫ್ರಿಕನ್ ಬ್ಲಡ್.. ಡಿವಿಲಿಯರ್ಸ್ ಗೆ ಹೋಲಿಸಿದ ಫ್ಯಾನ್ಸ್!

ಆರ್​ಸಿಬಿ ಮೆನ್ಸ್ ತಂಡಕ್ಕೆ ಎ ಬಿ ಡಿವಿಲಿಯರ್ಸ್ ಆಪತ್ಬಾಂಧವ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಌಂಡ್ ಈಗ್ಲೂ ಕೂಡ ಮೈದಾನಕ್ಕೆ ಬಂದು ಸಪೋರ್ಟ್ ಮಾಡ್ತಾರೆ. ಡಿವಿಲಿಯರ್ಸ್ ಮತ್ತು ಡಿ ಕ್ಲರ್ಕ್ ಇಬ್ರೂ ಕೂಡ ಸೌತ್ ಆಫ್ರಿಕಾದ ಆಟಗಾರರೇ. ಹೀಗಾಗಿ ಆಫ್ರಿಕನ್ ಬ್ಲಡ್ ಆರ್ ಸಿಬಿ ಪಾಲಿನ ಆಪತ್ವಾಂಧವರು ಅಂತಾ ಪೊಸ್ಟ್​ಗಳನ್ನ ಹಾಕ್ತಿದ್ದಾರೆ. ಹಾಗೇ ಎಬಿ ಡಿವಿಲಿಯರ್ಸ್ ಇನ್ ಐಪಿಎಲ್​.. ನಡಿನ್ ಡಿ ಕ್ಲರ್ಕ್ ಫಾರ್ ಡಬ್ಲ್ಯೂಪಿಎಲ್ ಅಂತಾ ಬರೆದುಕೊಂಡಿದ್ದಾರೆ. ಆದಿತ್ಯಾ ಅನ್ನೋರು ಡಿ ಕ್ಲರ್ಸ್ ಸ್ಟ್ಯಾಚ್ಯೂ ನಿರ್ಮಿಸಿ ಅಂದ್ರೆ ಟಿ-20 ಬೆಸ್ಟ್ ಆಲ್​ರೌಂಡರ್ ಅಂತಾ ಅಪ್ರಿಶಿಯೇಟ್ ಮಾಡಿದ್ದಾರೆ. ಹಾಗೇ ಡಿವಿಲಿಯರ್ಸ್ ಮತ್ತು ಡಿ ಕ್ಲರ್ಕ್ ಇಬ್ರಲ್ಲೂ ಡಿ ಇದ್ದು ಇಬ್ರೂ ಡಿಸ್ಟ್ರಕ್ಷನ್ ಮಾಡ್ತಾರೆ ಅಂದಿದ್ದಾರೆ. ಹೀಗೆ ಡಿ ಕ್ಲರ್ಕ್ ಪರ ಸಾಲು ಸಾಲು ಪೋಸ್ಟ್​ಗಳನ್ನ ಮಾಡೋ ಮೂಲಕ ಅವ್ರ ಆಟಕ್ಕೆ ಅಪ್ರಿಶಿಯೇಟ್ ಮಾಡ್ತಿದ್ದಾರೆ.

ವುಮೆನ್ಸ್ ವಿಶ್ವಕಪ್ ನಲ್ಲೂ ಮಿಂಚಿದ್ದ ಡಿ ಕ್ಲರ್ಕ್!

ಸೌತ್ ಆಫ್ರಿಕಾ ತಂಡದ ಸ್ಟಾರ್ ಆಲ್​ರೌಂಡರ್ ಆಗಿರೋ ಡಿ ಕ್ಲರ್ಕ್ ಕಳೆದ ವರ್ಷ ನಡೆದ ವುಮೆನ್ಸ್ ವಿಶ್ವಕಪ್​ನಲ್ಲೂ ಅಬ್ಬರಿಸಿದ್ರು. ಅಕ್ಟೋಬರ್‌ 9 ರಂದು ಮಹಿಳಾ ವಿಶ್ವಕಪ್‌ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ರು. ಮೊದಲ ಬ್ಯಾಟ್ ಮಾಡಿದ್ದ ಭಾರತ 251 ರನ್‌ ಗಳಿಸಿತ್ತು. ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ 81 ರನ್‌ಗಳಿಗೆ 5 ವಿಕೆಟ್ ಕಳೆದಿಕೊಂಡಿತ್ತು. ಈ ವೇಳೆ ಡಿ ಕ್ಲರ್ಕ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ 54 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅಜೇಯ 84 ರನ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇನ್ನು ಡಿ ಕ್ಲರ್ಕ್ ಈಗಾಗಲೇ ದಕ್ಷಿಣ ಆಫ್ರಿಕಾ ಪರ ಮೂರು ಫಾರ್ಮೆಟ್‌ಗಳಲ್ಲಿ ಪದಾರ್ಪಣೆ ಮಾಡಿದ್ದಾರೆ. ಇವರು 70 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 667 ರನ್‌ ಸಿಡಿಸಿದ್ದಾರೆ. ಹಾಗೇ 52 ವಿಕೆಟ್‌ ಸಹ ಕಬಳಿಸಿದ್ದಾರೆ. ಈಗ ಆರ್​ಸಿಬಿಯಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಮುಂದಿನ ದಿನಗಳಲ್ಲೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಗೇಮ್ ಚೇಂಜರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

Shantha Kumari