ಈ ವಾರದ ಕಿಚ್ಚನ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ್‌ಗೆ! – ಬಿಗ್‌ಬಾಸ್ ವಿರುದ್ದ ರಜತ್ ಅಸಮಾಧಾನ!

ಬಿಗ್‌ಬಾಸ್ ಕನ್ನಡ ಸೀಸನ್ 12 ರಲ್ಲಿ ವೀಕ್ಷಕರ ಲೆಕ್ಕಾಚಾರ ಉಲ್ಟಾ ಹೊಡಿತಾ ಇದೆ. ಈ ಸೀಸನ್ ನಲ್ಲಿ ಗಿಲ್ಲಿ ಗೆಲ್ಲೋದು ಡೌಟ್. ಬೇರೆಯವರೇ ಗೆಲ್ತಾರೆ ಅನ್ನೋ ಮಾತು ಕೇಳಿಬಂದಿದೆ. ಇದೀಗ ಕೊನೆಯ ಕಿಚ್ಚನ ಚಪ್ಪಾಳೆಯನ್ನ ಸುದೀಪ್ ಅನೌನ್ಸ್ ಮಾಡಿದ್ದು, ವೀಕ್ಷಕರೇ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಬಾಳು ಕೊಡ್ತೇನೆ ಎಂದು ವಿಚ್ಛೇದಿತೆಗೆ ಮಗು ಕೊಟ್ಟ! – ಮನೆ ಕಟ್ಟೋಣ ಎಂದು ಲಕ್ಷ ಲಕ್ಷ ಹಣದೊಂದಿಗೆ ಎಸ್ಕೇಪ್ ಆದ ಭೂಪ!
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ, ಮನೆಯಲ್ಲಿ ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ ಕಿಚ್ಚನ ಚಪ್ಪಾಳೆಯನ್ನು ಘೋಷಿಸಿದ್ದಾರೆ. ಮನೆಯೊಳಗಿನ ಬಹುಸಂಖ್ಯಾತ ಗುಂಪಿನ ವಿರುದ್ಧ ಏಕಾಂಗಿಯಾಗಿ ಹೋರಾಡಿ ತಮ್ಮ ಅಸ್ತಿತ್ವ ಉಳಿಸಿಕೊಂಡ ಅಶ್ವಿನಿ ಗೌಡ ಮತ್ತು ಧ್ರುವಂತ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ಕಳೆದ ವಾರ ಗಿಲ್ಲಿ ನಟ, ಕಾವ್ಯಾ ಶೈವ, ಮ್ಯೂಟೆಂಟ್ ರಘು, ರಾಶಿಕಾ, ಧನುಷ್ ಗೌಡ ಮತ್ತು ರಕ್ಷಿತಾ ಶೆಟ್ಟಿ ಸೇರಿ ಆರು ಜನರ ಒಂದು ಬಲಿಷ್ಠ ಗುಂಪಾಗಿದ್ದರು. ಇದಕ್ಕೆ ಕಾರಣ ಹೇಳಿದ ಗಿಲ್ಲಿ ನಟ, ಅವರನ್ನು ಕಂಡರೆ ಮನೆಯವರಿಗೆ ಯಾರಿಗೂ ಇಷ್ಟವಾಗುತ್ತಿರಲಿಲ್ಲ ಎಂದು ಸಮಜಾಯಿಷಿ ಕೊಡಲು ಮುಂದಾಗುತ್ತಾನೆ. ಆದರೆ, ಅದನ್ನು ಕಿಚ್ಚ ಸುದೀಪ್ ಒಪ್ಪಿಕೊಳ್ಳುವುದಿಲ್ಲ. ಮನೆಯಲ್ಲಿ ಆರು ಜನರ ಗುಂಪು ಪ್ರತಿ ಬಾರಿಯೂ ತಮ್ಮನ್ನು ಕೆಳಗಿಟ್ಟು ಮಾತನಾಡುತ್ತಿದ್ದರು ಮತ್ತು ಹೀಯಾಳಿಸುತ್ತಿದ್ದರು ಎಂಬ ಗಂಭೀರ ಆರೋಪವನ್ನು ಅಶ್ವಿನಿ ಗೌಡ ಕಿಚ್ಚನ ಮುಂದೆ ವ್ಯಕ್ತಪಡಿಸಿದರು. ಅವರ ಗುಂಪಿನಲ್ಲಿ ಸೇರಿ ಅವಮಾನಿಸಿಕೊಳ್ಳುವುದಕ್ಕಿಂತ ದೂರ ಉಳಿದು ನನ್ನ ವ್ಯಕ್ತಿತ್ವ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು ಎಂದು ಅವರು ತಿಳಿಸಿದರು.
ಇದಕ್ಕೆ ಧ್ರುವಂತ್ ಕೂಡ ಧ್ವನಿಗೂಡಿಸಿ, ನನ್ನ ಆಟವೇನು ಎಂಬುದು ನನಗೆ ಗೊತ್ತು, ಈ ಮನೆಗೆ ನನ್ನಿಂದ ಏನು ಕೊಡಬೇಕೋ ಅದನ್ನು ಕೊಡುತ್ತಿದ್ದೇನೆ. ಅವರ ಹಂಗು ನಮಗೆ ಬೇಕಿಲ್ಲ ಎಂದು ತಮ್ಮ ಗಟ್ಟಿತನವನ್ನು ಪ್ರದರ್ಶಿಸಿದರು.
ಇಡೀ ವಾರದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್ ಅವರು ಈ ಇಬ್ಬರ ಹೋರಾಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ನನಗೆ ಈ ವಾರ ಕಂಡಿದ್ದು ಒಬ್ಬ ವ್ಯಕ್ತಿಯ ಹಠ ಮತ್ತು ಗುರಿ. ಎಲ್ಲಿ ಅವಮಾನಗಳಾಗುತ್ತವೆಯೋ ಅಲ್ಲಿಯೇ ಹೋರಾಡಿ, ಯಾವ ಬಾಯಿಗಳು ನಿಮ್ಮನ್ನು ತೆಗಳಿದ್ದವೋ ಅದೇ ಬಾಯಿಗಳಿಂದ ಹೊಗಳಿಸಿಕೊಳ್ಳುವುದೇ ನಿಜವಾದ ಗೆಲುವು ಎಂದು ನುಡಿದರು.
ಈ ಸೀಸನ್‌ನ ಕೊನೆಯ ಕಿಚ್ಚನ ಚಪ್ಪಾಳೆಯನ್ನು ನಾನು ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ನೀಡುತ್ತಿದ್ದೇನೆ ಎನ್ನುತ್ತಾ ಸುದೀಪ್ ಚಪ್ಪಾಳೆ ತಟ್ಟಿದಾಗ ಇಡೀ ವೇದಿಕೆ ಸಂಭ್ರಮದಿಂದ ಮಿಂಚಿತು. ಈ ಬೆಳವಣಿಗೆಯು ಅಶ್ವಿನಿ ಮತ್ತು ಧ್ರುವಂತ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು, ಫಿನಾಲೆ ರೇಸ್‌ನಲ್ಲಿ ಇವರು ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ.
ಆದ್ರೀಗ ಕಿಚ್ಚನ ಚಪ್ಪಾಳೆ ವಿರುದ್ಧ ಮಾಜಿ ಸ್ಪರ್ಧಿ ರಜತ್ ಅಸಮಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಜತ್, ಅರ್ಥವೇ ಆಗುತ್ತಿಲ್ಲ ಲೆಕ್ಕಾಚಾರ ಗಿಲ್ಲಿ ಯಾಕೆ ಮೌನವಾದ ಕೊನೆಯ ಕ್ಷಣದಲ್ಲಿ ಯಾಕೆ ಅವನಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲ ವ್ಯಕ್ತಿತ್ವದಲ್ಲಿ ಅಶ್ವಿನಿ ಧ್ರುವ ಅವರಿಗೆ ಕಿಚ್ಚನ ಚಪ್ಪಾಳೆ ಚಿಂತೆ ಇಲ್ಲ ಆದರೆ ಮತ್ತೊಬ್ಬ ಅರುಣ್ ಸಾಗರ್ ಮಾಡುವ ಕುತಂತ್ರಗಳು ನಡೆಯುತ್ತಾ ಇದೆ ಎಂದು ತಿಳಿದು ಬಂದಿದೆ ಆದರೆ ಒಂದು ಸತ್ಯ ಗಿಲ್ಲಿ ಒಬ್ಬ ಅದ್ಭುತ ಕಲಾವಿದ.ನಿಜವಾದ ವಿನ್ನರ್ ಗಿಲ್ಲಿ ಮಾತ್ರ ಗೆದ್ದು ಬಾ ಗೆಳೆಯ ಎಂದು ಬರೆದುಕೊಂಡಿದ್ದಾರೆ.

ನೋಡಿರಿ

