RCB & DC ಗೆ ಬಿಗ್ ಶಾಕ್ – ಸ್ಟಾರ್ ಆಟಗಾರರೇ ಟೀಂನಿಂದ ಔಟ್

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಗೆಲುವಿನ ನಂತ್ರ ಆರ್ಸಿಬಿ ತಂಡಕ್ಕೆ ಆಘಾತ ಎದುರಾಗಿದೆ. ಪೂಜಾ ವಸ್ತ್ರಾಕರ್ ಆರ್ಸಿಬಿ ತಂಡದಲ್ಲಿರುವ ಪ್ರಮುಖ ವೇಗಿ. ಇದೀಗ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಕನಿಷ್ಠ ಎರಡು ವಾರಗಳ ಕಾಲ ಅವರು ಮೈದಾನದಿಂದ ಹೊರಗುಳಿಯಲಿದ್ದಾರೆ.
ಇತ್ತ ಮೊದಲ ಪಂದ್ಯದಲ್ಲಿ ಪೂಜಾ ವಸ್ತ್ರಾಕರ್ ಅವರು ಹೊರಗುಳಿದಿದ್ದ ಕಾರಣ ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಇಂಗ್ಲೆಂಡ್ ಬೌಲರ್ ಲಿನ್ಸೆ ಸ್ಮಿತ್ ಅವರನ್ನು ಕಣಕ್ಕಿಳಿಸಿತ್ತು. ಇದಾಗ್ಯೂ ಸ್ಮಿತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಈ ಪಂದ್ಯದಲ್ಲಿ 2 ಓವರ್ಗಳನ್ನು ಎಸೆದಿದ್ದ ಲೆನ್ಸಿ 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಇದೀಗ ಪೂಜಾ ವಸ್ತ್ರಾಕರ್ ಅವರ ಅನುಪಸ್ಥಿತಿಯಲ್ಲಿ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರನ್ನೇ ಆರ್ಸಿಬಿ ಕಣಕ್ಕಿಳಿಸಲಿದೆ.
ಇದನ್ನೂ ಓದಿ:ಬಾಳು ಕೊಡ್ತೇನೆ ಎಂದು ವಿಚ್ಛೇದಿತೆಗೆ ಮಗು ಕೊಟ್ಟ! – ಮನೆ ಕಟ್ಟೋಣ ಎಂದು ಲಕ್ಷ ಲಕ್ಷ ಹಣದೊಂದಿಗೆ ಎಸ್ಕೇಪ್ ಆದ ಭೂಪ!
ಗುಜರಾತ್ ಜೈಂಟ್ಸ್ಗೂ ಶಾಕ್

ನೋಡಿರಿ

