ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗು – ಖಾಸಗಿ ಅಂಗಕ್ಕೆ ಬರೆ ಎಳೆದ ತಾಯಿ

 ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗು – ಖಾಸಗಿ ಅಂಗಕ್ಕೆ ಬರೆ ಎಳೆದ ತಾಯಿ

ತಾಯಿಯೇ ದೇವರು ಅಂತಾರೆ.. ತನ್ನ ಮಗು ಏನೋ ಮಾಡಿದ್ರೂ ತಾಯಿ ಸಹಿಸಿಕೊಳ್ಳುತ್ತಾಳೆ.  ತನ್ನ ಮಗುವಿಗೆ ಸ್ವಲ್ಪ ನೋವಾದರೂ ಎಂತಹ ಕಲ್ಲು ಹೃದಯವಾದರೂ ಕರಗುತ್ತದೆ. ಕೇರಳದಲ್ಲಿ  ತಾಯಿ ಮಣ್ಣು ತಿನ್ನೋ ಕೆಲಸ ಮಾಡಿದ್ದಾಳೆ.   ಹಾಸಿಗೆಯಲ್ಲಿ ಮಗು ಮೂತ್ರ ಮಾಡಿತ್ತು ಎನ್ನುವ ಕಾರಣಕ್ಕೆ ಮಲತಾಯಿಯೊಬ್ಬಳು  ಮಗುವಿನ ಖಾಸಗಿ ಅಂಗವನ್ನು ಬಿಸಿ ಸೌಟಿನಿಂದ ಸುಟ್ಟಿದ್ದಾಳೆ.ಉತ್ತರ ಕೇರಳ  ಜಿಲ್ಲೆಯ ಕಾಂಜಿಕೋಡ್  ಬಳಿ ಈ ಘಟನೆ ನಡೆದಿದ್ದು, ಅಂಗನವಾಡಿ ಶಿಕ್ಷಕಿಗೆ  ವಿಷಯ ತಿಳಿದ ಬಳಿಕ ಆಕೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಕಾಂಜಿಕೋಡ್ ನ ಅಂಗನವಾಡಿಯೊಂದರಲ್ಲಿ ಐದು ವರ್ಷದ ಮಗು ಕುಳಿತುಕೊಳ್ಳಲು ತುಂಬಾ ಕಷ್ಟ ಪಡುತ್ತಿತ್ತು. ಇದನ್ನು ಗಮನಿಸಿದ ಅಂಗನವಾಡಿ ಶಿಕ್ಷಕಿ ಮಗುವಿನ ಬಳಿ ಏನಾಗಿದೆ ಎಂದು ಕೇಳಿದ್ದಾರೆ. ಆಗ ಮಗು ಎಲ್ಲ ವಿಷಯವನ್ನು ಹೇಳಿದೆ. ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದ ಕಾರಣಕ್ಕೆ ಮಲತಾಯಿ ಬಿಸಿ ಸ್ಟೀಲ್ ಸೌಟಿನಿಂದ ಖಾಸಗಿ ಅಂಗದ ಮೇಲೆ ಗಾಯಗೊಳಿಸಿದ್ದಾಳೆ. ಈ ಕುರಿತು ಅಂಗನವಾಡಿ ಶಿಕ್ಷಕಿ ಪೊಲೀಸರಿಗೆ ಶುಕ್ರವಾರ ಮಾಹಿತಿ ನೀಡಿದರು. ಮಗುವಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಲಾಯಿತು.

ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್  – ಈ ಸ್ಥಳಗಳಲ್ಲಿ ವಾಹನ ನಿಲ್ಲಿಸುವವರ ಜೇಬಿಗೆ ಕತ್ತರಿ

ಅಂಗನವಾಡಿ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ತಂದೆ ನೇಪಾಳದ ಪ್ರಜೆಯಾಗಿದ್ದು, ಹೊಟೇಲ್ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಆರೈಕೆಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Kishor KV