ಚಾರ್ಮಾಡಿ ಘಾಟ್ನಲ್ಲಿ ಭೋಜನ ವಿರಾಮ ತೆಗೆದುಕೊಂಡ ಗಜರಾಜ! – ಒಂಟಿ ಸಲಗ ಕಿತಾಪತಿಗೆ ವಾಹನ ಸವಾರರು ಸುಸ್ತೋ ಸುಸ್ತು!

ಚಾರ್ಮಾಡಿ ಘಾಟ್ನಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ. ರಸ್ತೆಗೆ ಮರ ಕೆಡವಿ ಅಲ್ಲೇ ಭೋಜನ ವಿರಾಮ ತೆಗೆದುಕೊಂಡಿದೆ. ಆನೆ ಕಿತಾಪತಿಗೆ ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ನಾನ್ವೆಜ್ ಬ್ಯಾನ್!
ಚಾರ್ಮಾಡಿ ಘಾಟ್ ಘಾಟಿಯ 2 ಮತ್ತು 3ನೇ ತಿರುವಿನಲ್ಲಿ ಆನೆ ಕಾಣಿಸಿಕೊಂಡಿದ್ದು, ಆನೆ ಭೋಜನ ವಿರಾಮ ತೆಗೆದುಕೊಂಡಿದೆ. ಕಾಡಾನೆ ರಸ್ತೆಗೆ ಮರ ಕೆಡವಿ, ಅದನ್ನ ತಿನ್ನುತ್ತಾ ಸುಮಾರು ಒಂದು ಗಂಟೆಗಳ ಕಾಲ ಅಲ್ಲೇ ನಿಂತಿದೆ. ವಾಹಸ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.
ಆನೆ ರಸ್ತೆಯಲ್ಲೇ ನಿಂತಿದ್ದರಿಂದ ಚಿಕ್ಕಮಗಳೂರು ಮತ್ತು ಮಂಗಳೂರು ಕಡೆಗೆ ಸುಮಾರು 2 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಘಾಟ್ನಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದ್ದಾರೆ. ಕೆಲವರು ವಾಹನಗಳನ್ನು ವಾಪಸ್ ತಿರುಗಿಸಿಕೊಂಡು ತೆರಳಿದ್ದಾರೆ.
ಕಾಡಾನೆ ಕಾಣಿಸಿಕೊಂಡ ಹಿನ್ನೆಲೆ, ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಈ ಭಾಗದಲ್ಲಿ ಹಲವು ಬಾರಿ ಕಾಡಾನೆಗಳು ಕಾಣಿಸಿಕೊಂಡು ಆತಂಕ ಮೂಡಿಸಿದ್ದವು.

ನೋಡಿರಿ

