ದಿ ರಾಜಾ ಸಾಬ್ ಸಿನಿಮಾ ಭರ್ಜರಿ ಕಲೆಕ್ಷನ್ – ವಿಶ್ವಾದ್ಯಂತ 100 ಕೋಟಿ ಗಳಿಕೆ ಕಂಡ ಪ್ರಭಾಸ್ ಸಿನಿಮಾ

ಟಾಲಿವುಡ್ ರೆಬೆಲ್ ಪ್ರಭಾಸ್ ನಟನೆಯ ದಿ ರಾಜಾಸಾಬ್ ಸಿನಿಮಾ ಮೊದಲ ದಿನವೇ ಬಂಪರ್ ಗಳಿಕೆ ಕಂಡಿದೆ. ರಾಜಾಸಾಬ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಕೂಡಾ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ:ಫ್ಯಾನ್ಸ್ ಮನಗೆದ್ದ ರಾಜಾ ಸಾಬ್ – ಡೈನೋಸಾರ್ ಪ್ರಭಾಸ್ ನಟನೆಗೆ ಫುಲ್ ಮಾರ್ಕ್ಸ್
ದಿ ರಾಜಾಸಾಬ್ ಸಿನಿಮಾ ರಿಲೀಸ್ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಜನವರಿ 8 ರಂದು ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಶುಕ್ರವಾರ ಕೂಡಾ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ರಾಜಾಸಾಬ್ ಮೊದಲ ದಿನವೇ 54.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ನೋಡಿದ ಅನೇಕರು ನೆಗೆಟಿವ್ ಆಗಿ ವಿಮರ್ಶೆ ನೀಡಿದ್ದಾರೆ. ಆದರೆ, ಅಭಿಮಾನಿಗಳಿಗೂ ಸಿನಿಮಾ ತುಂಬಾ ಇಷ್ಟವಾಗಿದೆ. ಜೊತೆಗೆ ಪ್ರಭಾಸ್ ಕಾಮಿಡಿಯಂತೂ ಸೂಪರ್ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಈ ಸಿನಿಮಾ ಪ್ರೀಮಿಯರ್ ಶೋಗಳಿಂದ 9.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಲ್ಲವೂ ಸೇರಿದರೆ ಸಿನಿಮಾ ಕಲೆಕ್ಷನ್ 54 ಕೋಟಿ ರೂಪಾಯಿ ಅಷ್ಟು ಆಗಿದೆ. ಇಷ್ಟೇ ಅಲ್ಲದೇ, ವಿಶ್ವಾದ್ಯಂತ ಸಿನಿಮಾ ಗಳಿಕೆ 100.9 ಕೋಟಿ ದಾಟಿದೆ. ಮೊದಲ ದಿನವೇ ಈ ಸಿನಿಮಾ 100 ಕೋಟಿ ಗಳಿಕೆ ಕಂಡಿದ್ದು, ಚಿತ್ರತಂಡ ಕೂಡಾ ಉತ್ಸಾಹದಲ್ಲಿದೆ.

ನೋಡಿರಿ

