HITಮ್ಯಾನ್-KING ಗ್ರೇಟ್ ಫಾರ್ಮ್ – NZ ಸರಣಿಗೆ ಶ್ರೇಯಸ್ ಫಿಟ್ & ಫೈನ್
ಭಾನುವಾರದ ಬೇಟೆಗೆ ಹೇಗಿದೆ ಪ್ಲೇಯಿಂಗ್ 11?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೆ ಇನ್ನೊಂದೇ ದಿನ ಬಾಕಿ. 2026ರಲ್ಲಿ ಟೀಂ ಇಂಡಿಯಾದ ಜರ್ನಿ ಇಲ್ಲಿಂದ ಸ್ಟಾರ್ಟ್ ಆಗುತ್ತೆ. ಭಾನುವಾರ ವಡೋದರಾದಲ್ಲಿ ಹೈವೋಲ್ಟೇಜ್ ಪಂದ್ಯ ಫಿಕ್ಸ್ ಆಗಿದೆ. ಈ ಸರಣಿಯ ಹೈಲೆಟ್ ಅಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. 2027ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರೋ ಈ ಜೋಡೆತ್ತು ಪ್ರಸ್ತುತ ಗ್ರೇಟ್ ಫಾರ್ಮ್ನಲ್ಲಿದ್ದಾರೆ. ಅಲ್ದೇ ಶ್ರೇಯಸ್ ಅಯ್ಯರ್ ಕೂಡ ಫಿಟ್ & ಫೈನ್ ಆಗಿದ್ದಾರೆ.
ಇದನ್ನೂ ಓದಿ : ಇಂದಿನಿಂದ WPL ಆರಂಭ – RCB Vs MI ಫೈಟ್‌ನಲ್ಲಿ ಗೆಲ್ಲೋದ್ಯಾರು?
ಟೀಂ ಇಂಡಿಯಾದ ಏಕದಿನ ಪಂದ್ಯಗಳು ಅಂದ್ರೆ ಅದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿರುತ್ತೆ. ಯಾಕಂದ್ರೆ ಅಲ್ಲಿ ರೋಹಿತ್ ಮತ್ತು ಕೊಹ್ಲಿ ಆಡ್ತಾರೆ ಅನ್ನೋದು. ಈಗ ನ್ಯೂಜಿಲೆಂಡ್ ಸರಣಿ ಕೂಡ ರೋಕೊ ಪಾಲಿಗೆ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಇಬ್ಬರು ಆಟಗಾರರು ಗ್ರೇಟ್ ಫಾರ್ಮ್ನಲ್ಲಿದ್ದಾರೆ. ಏಕದಿನ ಮಾದರಿಯಲ್ಲಿ ನಂಬರ್ 1, ನಂಬರ್ 2 ರ್ಯಾಂಕಿಂಗ್ ಬ್ಯಾಟರ್ಗಳಾಗಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ರು. ನ್ಯೂಜಿಲೆಂಡ್ ಸರಣಿಯಲ್ಲೂ ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚಿದಷ್ಟೂ ಏಕದಿನ ವಿಶ್ವಕಪ್‌ಗೆ ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ತಾ ಹೋಗ್ತಾರೆ. ಈವನ್ ಬಿಸಿಸಿಐಗೂ ಕೂಡ ಇವ್ರಿಬ್ಬನ್ನ ಕೈಬಿಡೋಕೆ ಯಾವುದೇ ರೀಸನ್ಸ್ ಆಗ್ಲಿ ನೆಪ ಆಗ್ಲಿ ಇರೋದಿಲ್ಲ. ಹೀಗೆ ರೋಕೊ ಜಬರ್ದಸ್ತ್ ಆಗಿ ಮೈದಾನಕ್ಕಿಳಿಯೋಕೆ ರೆಡಿಯಾಗಿದ್ರೆ ಅತ್ತ ಶ್ರೇಯಸ್ ಅಯ್ಯರ್ ಕೂಡ ಗ್ರೇಟ್ ಕಂ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ.
ಪ್ಲೇಯಿಂಗ್ 11ನಲ್ಲಿ ಸ್ಥಾನ ಭದ್ರಪಡಿಸಿಕೊಂಡ ಶ್ರೇಯಸ್ ಅಯ್ಯರ್!
ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವಾಗ ಇಂಜುರಿಗೆ ಒಳಗಾಗಿದ್ದ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೂಲಕ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ. ಆದ್ರೂ ಕಂಪ್ಲೀಟ್ ಆಗಿ ರಿಕವರಿ ಆಗಿದ್ದಾರೋ ಇಲ್ವೋ ಪ್ಲೇಯಿಂಗ್ 11ನಲ್ಲಿ ಆಡಿಸ್ಬೇಕಾ ಬೇಡ್ವಾ ಅನ್ನೋ ಬಗ್ಗೆ ಗೊಂದಲಗಳಿದ್ವು. ಆದ್ರೆ ಶ್ರೇಯಸ್ ಕಂಪ್ಲೀಟ್ ಆಗಿ ಫಿಟ್ ಌಂಡ್ ಫೈನ್ ಆಗಿಯೇ ಕಂ ಬ್ಯಾಕ್ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳಲ್ಲಿ 82 ರನ್ಸ್ ಕಲೆ ಹಾಕಿದ್ರು. ಆ ನಂತ್ರ ಪಂಜಾಬ್ ವಿರುದ್ಧ 34 ಎಸೆತಗಳಲ್ಲಿ 45 ರನ್ ಸಿಡಿಸಿದ್ದಾರೆ. ಹೀಗಾಗಿ ಬಿಸಿಸಿಐ ಮ್ಯಾನೇಜ್ಮೆಂಟ್ ಮತ್ತು ಮೆಡಿಕಲ್ ಎಕ್ಸ್ಪರ್ಟ್ಸ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ
ಶುಭ್ ಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ರವೀಂದ್ರ ಜಡೇಜಾ
ನಿತೀಶ್ ಕುಮಾರ್ ರೆಡ್ಡಿ
ಹರ್ಷಿತ್ ರಾಣಾ
ಕುಲ್ದೀಪ್ ಯಾದವ್
ಮೊಹಮ್ಮದ್ ಸಿರಾಜ್
ಅರ್ಶದೀಪ್ ಸಿಂಗ್

ನೋಡಿರಿ

