T-20 WCನಿಂದ ತಿಲಕ್ ಔಟ್? – ಶ್ರೇಯಸ್ ವೈಲ್ಡ್ ಕಾಲ್ಡ್ ಎಂಟ್ರಿ?
ರೇಸ್ ನಲ್ಲಿ ಯಾವೆಲ್ಲಾ ಪ್ಲೇಯರ್ಸ್?

ಟಿ-20 ವಿಶ್ವಕಪ್ಗೆ ಇನ್ನೊಂದು ತಿಂಗಳು ಕೂಡ ಬಾಕಿ ಇಲ್ಲ. ಹೀಗಿರುವಾಗ್ಲೇ ತಂಡದ ಪ್ರಮುಖ ಆಟಗಾರ ತಿಲಕ್ ವರ್ಮಾ ಸರ್ಜರಿಗೆ ಒಳಗಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿ ಪಂದ್ಯದ ವೇಳೆ ರಾಜ್ಕೋಟ್ನಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸರಣಿಯನ್ನ ಮಿಸ್ ಮಾಡಿಕೊಳ್ತಾರೆ. ಬಟ್ ವಿಶ್ವಕಪ್ ಕಥೆ ಏನು ಅಂದ್ರೆ ಅಷ್ಟ್ರಲ್ಲಿ ಕಂಪ್ಲೀಟ್ ಆಗಿ ಫಿಟ್ ಆಗೋದು ಡೌಟಿದೆ.
ಇದನ್ನೂ ಓದಿ : ಸ್ಮೃತಿ Vs ಕೌರ್.. ಗೆಲ್ಲೋದ್ಯಾರು – RCB & MIನ ವೀಕ್ ನೆಸ್ ಏನು?
ಫೆಬ್ರುವರಿ 7 ರಿಂದ ಪ್ರಾರಂಭವಾಗುವ T20 ವಿಶ್ವಕಪ್ ಗಾಗಿ ಭಾರತದ ಪರ 15 ಆಟಗಾರರು ಸೆಲೆಕ್ಟ್ ಆಗಿದ್ದಾರೆ. ಌಂಡ್ ಪ್ಲೇಯಿಂಗ್ 11ನಲ್ಲಿ ಆಡಬೇಕಿದ್ದ ತಿಲಕ್ ವರ್ಮಾ ಈಗ ಟೂರ್ನಿಯಲ್ಲಿ ಭಾಗವಹಿಸ್ತಾರೋ ಇಲ್ವೋ ಅನ್ನೋದೇ ಅನುಮಾನ ಶುರುವಾಗಿದೆ. ಭಾರತದ ಪರ ಅತ್ಯಂತ ವಿಶ್ವಾಸಾರ್ಹ ಟಿ20 ಬ್ಯಾಟ್ಸ್ಮನ್ ಆಗಿರುವ ತಿಲಕ್ ದೇಶೀಯ ಕ್ರಿಕೆಟ್ನಲ್ಲಿಯೂ ಅತ್ಯುತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದರು. ಹೈದರಾಬಾದ್ ಪರ ಎರಡು ವಿಜಯ್ ಹಜಾರೆ ಟ್ರೋಫಿ ಇನಿಂಗ್ಸ್ಗಳಲ್ಲಿ 143 ರನ್ ಗಳಿಸಿದ್ದರು. ಇದ್ರಲ್ಲಿ ಒಂದು ಶತಕವೂ ಇದೆ. ಆದ್ರೀಗ ವಿಶ್ವಕಪ್ ಆಡೋದು ಅನುಮಾನ ಎನ್ನಲಾಗಿದೆ. ಹಾಗೇನಾದ್ರೂ ತಿಲಕ್ ಕಂ ಬ್ಯಾಕ್ ಮಾಡದಿದ್ರೆ ಶ್ರೇಯಸ್ ಗೆ ಅವಕಾಶ ಸಿಗೋ ಸಾಧ್ಯತೆಗಳು ಜಾಸ್ತಿ ಇದೆ.
ಟಿ-20ಐನಲ್ಲಿ ಸ್ಟ್ರಾಂಗ್ ಪ್ಲೇಯರ್ ಶ್ರೇಯಸ್ ಅಯ್ಯರ್!
ತಿಲಕ್ ವರ್ಮಾ ಬದಲಿಗೆ ಹಲವು ಯುವ ಆಟಗಾರರ ಹೆಸರು ರೇಸ್ನಲ್ಲಿದೆ. ಬಟ್ ಶ್ರೇಯಸ್ ಅಯ್ಯರ್ ಅವರನ್ನು ಮುಂಚೂಣಿಯಲ್ಲಿ ಪರಿಗಣಿಸಲಾಗ್ತಿದೆ. ಶ್ರೇಯಸ್ ಪ್ರಸ್ತುತ ಟೀಮ್ ಇಂಡಿಯಾ ಪರ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡ್ತಿದ್ದಾರೆ. ಹೀಗಿದ್ರೂ ಟಿ20 ಸ್ವರೂಪದಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 2025 ರ ಫೈನಲ್ ತಲುಪುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಶ್ರೇಯಸ್ 17 ಪಂದ್ಯಗಳಲ್ಲಿ 175.07 ಸ್ಟ್ರೈಕ್ ರೇಟ್ ಮತ್ತು 50.33 ರ ಸರಾಸರಿಯಲ್ಲಿ 604 ರನ್ ಗಳಿಸಿದ್ರು. ಇದರಲ್ಲಿ ಆರು ಅರ್ಧಶತಕಗಳು ಸೇರಿವೆ. ಇನ್ನು ಟೀಮ್ ಇಂಡಿಯಾ ಪರ 51 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಲ್ಲೂ ಉತ್ತಮ ಪ್ರದರ್ಶನ ಬಂದಿದೆ. ಹೀಗಿದ್ರೂ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಯಾರ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
ಸೋ ಶ್ರೇಯಸ್ ಅಯ್ಯರ್ ಸೆಲೆಕ್ಷನ್ ಲಿಸ್ಟ್ನಲ್ಲಿ ಮುಂಚೂಣಿಯಲ್ಲಿದ್ರು ವಿಜಯ್ ಹಜಾರೆಯಲ್ಲಿ ಅದ್ಭುತ ಪ್ರದರ್ಶನ ನಿಡ್ತಿರೋ ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ರುತುರಾಜ್ ಗಾಯಕ್ವಾಡ್ ಕೂಡ ರೇಸ್ನಲ್ಲಿದ್ದಾರೆ. ಸೋ ಯಾರನ್ನ ಫೈನಲ್ ಮಾಡ್ತಾರೆ ಅನ್ನೋದನ್ನ ನೋಡ್ಬೇಕಾಗುತ್ತೆ. ಅದೂ ಅಲ್ದೇ ತಂಡದಲ್ಲೇ ಈಗಾಗ್ಲೇ ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಇಬ್ರೂ ಇದ್ದಾರೆ. ಟಿ-20 ಫಾರ್ಮೆಟ್ನಲ್ಲಿ ಈ ಇಬ್ಬರೂ ಕೂಡ ಚೆನ್ನಾಗಿ ಆಡಬಹುದು. 2024ರಲ್ಲಿ ಟಿ-20 ವಿಶ್ವಕಪ್ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ ಪ್ಲೇಯಿಂಗ್ 11ನಲ್ಲಿ ಆಡಿರಲಿಲ್ಲ. ಬಟ್ ಆ ನಂತ್ರ ಚುಟುಕು ಮಾದರಿಯಲ್ಲಿ ಸದ್ದು ಮಾಡಿದರು. ಌಂಡ್ ಇಶಾನ್ ಕಿಶನ್ ಕೂಡ ಸ್ಫೋಟಕ ಬ್ಯಾಟಿಂಗ್ ನಿಂದಲೇ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಇವ್ರಿಬ್ಬರಲ್ಲಿ ಒಬ್ಬರು ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸೋ ಸಾಧ್ಯತೆ ಇದೆ. ಒಟ್ನಲ್ಲಿ ತಿಲಕ್ ವರ್ಮಾ ಟೀಂ ಇಂಡಿಯಾದ ಕೀ ಪ್ಲೇಯರ್. ಪ್ರೆಶರ್ ಟೈಮ್ಗಳಲ್ಲಿ ಸಿಂಗಲ್ಲಾಗಿ ನಿಂತು ಪಂದ್ಯಗಳನ್ನ ಆಡಿಸಿ ಗೆಲ್ಲಿಸಿಕೊಟ್ಟಿದ್ದಾರೆ.

ನೋಡಿರಿ

