ಗಿಲ್ಲಿಗಾಗಿ ರಕ್ಷಿತಾ, ರಾಶಿಕಾ ಮಧ್ಯೆ ಫೈಟ್!‌ – ರಕ್ಷುಗೆ ಕಾಮಿಡಿ ಕಿಂಗ್‌ ಮೇಲೆ  ಕ್ರಶ್‌Or ಲವ್?‌

ಗಿಲ್ಲಿಗಾಗಿ ರಕ್ಷಿತಾ, ರಾಶಿಕಾ ಮಧ್ಯೆ ಫೈಟ್!‌ – ರಕ್ಷುಗೆ ಕಾಮಿಡಿ ಕಿಂಗ್‌ ಮೇಲೆ  ಕ್ರಶ್‌Or ಲವ್?‌

ಬಿಗ್‌ಬಾಸ್‌ ಮನೆಯಲ್ಲಿ ಟ್ರಯಾಂಗಲ್‌ ಲವ್‌ ಸ್ಟೋರಿ ಶುರುವಾಗಿದ್ಯಾ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಯಾಕಂದ್ರೆ ದೊಡ್ಮನೆಯಲ್ಲಿ ಗಿಲ್ಲಿ, ಕಾವ್ಯ ಹಿಂದೆ ಸುತ್ತಾಡಿದ್ರೆ, ಗಿಲ್ಲಿ ಹಿಂದೆ ರಕ್ಷಿತಾ ಸುತ್ತಾಡುತ್ತಿದ್ದಾಳೆ. ಇದೀಗ ಗಿಲ್ಲಿಗಾಗಿ ದೊಡ್ಮನೆಯಲ್ಲಿ ದೊಡ್ಡ ಜಗಳ ನಡೆದಿದೆ.

ಇದನ್ನೂ ಓದಿ: ಸ್ಕೂಲ್‌ ಬ್ಯಾಗ್‌ ಭಾರಕ್ಕೆ ಬಾಲಕನ ಕೈ ಕಟ್!‌ –  ಮಕ್ಕಳಿಗೆ ಚೀಲವೇ ಹೊರೆಯಾಗುತ್ತಿದೆಯಾ?

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ-ಕಾವ್ಯ ಜೋಡಿ ಸಖತ್‌ ಹೈಲೈಟ್.‌ ಕಾವ್ಯ, ಗಿಲ್ಲಿಯನ್ನು ಅವಾಯ್ಡ್‌ ಮಾಡಿದ್ರೂ, ಗಿಲ್ಲಿ ಕಾವ್ಯಳನ್ನ ಯಾವತ್ತೂ ಬಿಟ್ಟುಕೊಡಲ್ಲ. ಆದ್ರೀಗ ರಕ್ಷಿತಾ ಗಿಲ್ಲಿ ಮೇಲೆ ಓವರ್‌ ಪೊಸೆಸಿವ್‌ ಆಗಿದ್ದಾಳೆ. ಗಿಲ್ಲಿಯನ್ನ ಯಾರ ಜೊತೆಯೂ ಕ್ಲೋಸ್‌ ಆಗೋದಿಕ್ಕೆ ಬಿಡ್ತಿಲ್ಲ. ಗಿಲ್ಲಿ ನಟ ಸೋಫಾ ಮೇಲೆ ಕೂತಿದ್ದರು. ಆ ವೇಳೆ ಅಲ್ಲಿಯೇ ಇದ್ದ ಬೀನ್‌ ಬ್ಯಾಗ್‌ನ್ನು ರಕ್ಷಿತಾ ಶೆಟ್ಟಿ ಅವರು ತಗೊಂಡು, ದೂರ ಇಟ್ಟಿದ್ದಾರೆ. ಆಗ ಗಿಲ್ಲಿ ಕೂಡ ಪ್ರಶ್ನೆ ಮಾಡಿದ್ದರು. ಇದೇ ವಿಚಾರಕ್ಕೆ ದೊಡ್ಮನೆಯಲ್ಲಿ ಜಗಳ ನಡೆದಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಯಾರು ಕಳಪೆ? ಯಾರು ಉತ್ತಮ? ಎಂಬ ಟಾಸ್ಕ್‌ ನಡೆದಿದೆ. ಇದು ಬಿಗ್‌ ಬಾಸ್‌ ಶೋನ ಕೊನೆಯ ವಾರದ ಕಳಪೆ, ಉತ್ತಮ ಆಗಿರಲಿದೆ. ಈಗ ರಾಶಿಕಾ ಶೆಟ್ಟಿ ಅವರು ರಕ್ಷಿತಾಗೆ ಕಳಪೆ ಕೊಟ್ಟಿದ್ದಾರೆ. ಬಳಿಕ ಗಿಲ್ಲಿ ನಟನ ಜೊತೆ ಮಾತನಾಡಬೇಕು, ಇಬ್ಬರೇ ಕೂರಬೇಕು, ಪ್ರೈವೆಸಿ ಬೇಕು ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಕಾವ್ಯ, ಗಿಲ್ಲಿ ಜೊತೆಗಿರಲಿ, ರಘು-ರಾಶಿಕಾ ಪಕ್ಕದಲ್ಲಿ ಕೂತರೂ ರಕ್ಷಿತಾಗೆ ಇಷ್ಟ ಆಗೋದಿಲ್ಲ ಎಂದಿದ್ದಾರೆ. ಇದಕ್ಕೆ ರಾಶಿಕಾ ಮಾತು ಕೇಳಿ ರಕ್ಷಿತಾ ಅವರು ನಕ್ಕಿದ್ದಾರೆ. ಇನ್ನು ಗಿಲ್ಲಿ ನಟ, ರಘು ಕೂಡ ನಕ್ಕಿದ್ದಾರೆ. ಧ್ರುವಂತ್‌ಗೂ ನಗು ಬಂದಿದೆ. ರಕ್ಷಿತಾ ಎಷ್ಟು ಪೊಸೆಸ್ಸಿವ್‌ ಎನ್ನೋದು ಎಲ್ಲರಿಗೂ ಗೊತ್ತಿದೆ. ಈಗ ರಕ್ಷಿತಾ ಬಾಯ್‌ಫ್ರೆಂಡ್‌ ಕಥೆ ಮುಗೀತು ಎಂದು ರಘು ಅವರು ಹೇಳಿದ್ದರು.

ಇದೇನು ನಿಮ್ಮ ಮನೆಯಾ? ನಿನಗೆ ಸತ್ಯ ಹೇಳಿದ್ರೆ ತಡೆದುಕೊಳ್ಳೋಕೆ ಆಗಲ್ಲ, ನಿನಗೆ ಗಿಲ್ಲಿ ಬೇಕು, ನಿಜ ಹೇಳಿದ ತಕ್ಷಣ ನಗು ಬರುತ್ತದೆ, ನಿನ್ನ ತಲೆಯಲ್ಲಿ ಅದೇ ನಡೆಯುತ್ತಿರುತ್ತದೆ ಎಂದು ರಾಶಿಕಾ ಅವರು ಹೇಳಿದ್ದಾರೆ.

ಇನ್ನು ರಾಶಿಕಾ ಮಾತಿಗೆ ರಕ್ಷಿತಾ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ನಮ್ಮಿಬ್ಬರ ವಿಚಾರ, ನೀವು ಯಾಕೆ ಮಾತಾಡ್ತೀರಿ ಎಂದು ರಕ್ಷಿತಾ ಅವರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಒಬ್ಬರ ಪಕ್ಕ ಇನ್ನೊಬ್ಬರು ಕೂರೋದು ಇಲ್ಲಿ ಕಳಪೆಯ ವಿಷಯವಾಗಿದೆ.

Shwetha M