ಕರ್ಣನ ಮುಂದೆಯೇ ನಿಧಿಗೆ ಆಕ್ಸಿಡೆಂಟ್! – ನಿತ್ಯಾ ಮದುವೆ ಕ್ಯಾನ್ಸಲ್?

ಕರ್ಣನಿಗೆ ನಿಧಿ ಸಿಕ್ಕಿದ್ರೆ, ನಿತ್ಯಾಗೆ ತೇಜಸ್ ಸಿಕ್ಕಾಗಿದೆ. ಇದೀಗ ಎರಡು ಜೋಡಿ ಒಂದಾಗ್ತಿದ್ದಂತೆ ನಾಲ್ಕು ಜನ ಕೂಡ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದಾರೆ. ತೇಜಸ್ ಹಾಗೂ ನಿತ್ಯಾ ಒಂದ್ಕಡೆ ಪ್ರೀತಿಯಲ್ಲಿದ್ರೆ ಇನ್ನೊಂದು ಕಡೆ ಕರ್ಣ ಸರ್ ಜೊತೆ ನಿಧಿ ರೋಮ್ಯಾನ್ಸ್ ಶುರುವಾಗಿದೆ. ಇವೆಲ್ಲದ್ರ ಮಧ್ಯೆ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಇದೀಗ ನಿಧಿ ಪಾತ್ರ ಮುಗಿದು ಹೋಯ್ತಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.
ಇದನ್ನೂ ಓದಿ: ಸ್ಕೂಲ್ ಬ್ಯಾಗ್ ಭಾರಕ್ಕೆ ಬಾಲಕನ ಕೈ ಕಟ್! – ಮಕ್ಕಳಿಗೆ ಚೀಲವೇ ಹೊರೆಯಾಗುತ್ತಿದೆಯಾ?
ಮದುವೆ ದಿನ ಕಿಡ್ನ್ಯಾಪ್ ಆಗಿದ್ದ ತೇಜಸ್ ಈಗ ತಪ್ಪಿಸಿಕೊಂಡು ಬಂದಿದ್ದಾನೆ. ಇದೀಗ ಎಲ್ಲಾ ಸತ್ಯ ಆಚೆ ಬಂದಿದೆ. ಕರ್ಣ ಈಗ ಯಾರಿಗೂ ಹೇಳದೆ ನಿತ್ಯಾ, ತೇಜಸ್ ಮದುವೆ ನಡೆಸಲು ತಯಾರಿ ನಡೆಸಿದ್ದಾನೆ. ಆದ್ರೀಗ ಇವರನ್ನು ಬಲಿ ತೆಗೆಯಲು ನಯನತಾರಾ ರೆಡಿ ಆಗಿದ್ದಾಳೆ. ಇದೀಗ ಕಾರಿನಲ್ಲಿದ್ದ ನಿಧಿ ಸಾಯುತ್ತಾಳಾ ಎಂಬ ಪ್ರಶ್ನೆ ಮೂಡಿದೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ನಿಧಿ ಹಾಗೂ ಕರ್ಣ ಕಾರಿನಲ್ಲಿ ಹೋಗುತ್ತಿರುತ್ತಾರೆ. ಅಷ್ಟೊತ್ತಿಗೆ ಕರ್ಣ ಕಾರು ನಿಲ್ಲಿಸಿ ಫಲೂದಾ ತರಲು ಹೋಗಿದ್ದಾನೆ. ಇತ್ತ ನಯನತಾರ ಕೊಲೆಗೆ ಸಂಚು ರೂಪಿಸಿದ್ದಾಳೆ. ರೌಡಿಗಳಿಗೆ ಕರೆ ಮಾಡಿ ತಾನು ಹೇಳಿದಂತೆ ನಡೆಯಬೇಕು ಎಂದಿದ್ದಾಳೆ. ಕರ್ಣ ಕಾರಿನಿಂದ ಇಳಿಯುತ್ತಿದ್ದಂತೆ ರೌಡಿಗಳು ಕಾರಿನ ಮೇಲೆ ಲಾರಿ ಹತ್ತಿಸಿದ್ದಾರೆ. ಆಕ್ಸಿಡೆಂಟ್ ಆಗ್ತಿದ್ದಂತೆ ಕರ್ಣ ಕಾರಿನ ಬಳಿ ಓಡಿ ಬಂದಿದ್ದಾನೆ. ನಿಧಿ, ನಿಧಿ ಎಂದು ಜೋರಾಗಿ ಗೋಳಾಡಿದ್ದಾನೆ. ಇದೀಗ ನಿಧಿಗೆ ಏನಾಯ್ತು? ನಯನತಾರಾ ಸಂಚಿಗೆ ನಿಧಿ ಬಲಿ ಆದ್ಲಾ? ನಿಧಿ ಪಾತ್ರ ಮುಕ್ತಾಯ ಆಯ್ತಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.
ಮತ್ತೊಂದ್ಕಡೆ ಈಗಾಗಲೇ ರಿಲೀಸ್ ಆಗಿರೋ ಪ್ರೋಮೋದಲ್ಲಿ ತೇಜಸ್, ನಿತ್ಯಾ ಹಸೆಮಣೆ ಏರಿದ್ದು, ಕರ್ಣ-ನಿಧಿ ಅದನ್ನು ನೋಡಿ ಖುಷಿಪಟ್ಟ ಪ್ರೋಮೋ ಕೂಡ ಔಟ್ ಆಗಿದೆ. ಹೀಗಾಗಿ ನಿಧಿ ಬಚಾವ್ ಆಗಿರುತ್ತಾಳೆ. ನಿಧಿಗೆ ಏನೂ ಆಗಿರೋದಿಲ್ಲ ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.
ಇನ್ನೊಂದ್ಕಡೆ ಕರ್ಣ, ನಿತ್ಯಾ ತೇಜಸ್ ಮದುವೆ ಸಿದ್ಧತೆ ನಡೆಸಿದ್ದಾನೆ. ತೇಸಜ್ ಕೂಡ ಹಸೆಮಣೆಯಲ್ಲಿ ಕೂತಿದ್ದಾನೆ. ಆದ್ರೂ ಈ ಮದುವೆ ನಡೆಯೋದು ಡೌಟ್ ಎಂದು ಹೇಳಲಾಗ್ತಿದೆ. ನಿತ್ಯಾ ಅವಕಾಶ ಸಿಕ್ಕಾಗೆಲ್ಲ ಕರ್ಣನನ್ನು ಹೊಗಳುತ್ತಾಳೆ, ನಿತ್ಯಾಗೆ ಅಪಾಯ ಆದರೆ ಸಾಕು, ಕರ್ಣ ಓಡಿ ಬರುತ್ತಾನೆ. ಇದನ್ನೆಲ್ಲ ನೋಡಿ ತೇಜಸ್ಗೆ ಅಸೂಯೆ, ಹೊಟ್ಟೆಕಿಚ್ಚು ಶುರುವಾಗಿದೆ. ಹೀಗಾಗಿ ಅವನೇ ಈ ಮದುವೆಗೆ ಅಡ್ಡಿ ಮಾಡಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಕರ್ಣ ಹಾಗೂ ನಿಧಿ ಸುಲಭಕ್ಕೆ ಒಂದಾಗೋದಿಲ್ಲ, ಇವರಿಬ್ಬರು ಒಂದಾಗಲು ಇನ್ನಷ್ಟು ಸಮಸ್ಯೆ ಆಗುವುದು. ಇನ್ನು ತೇಜಸ್, ನಿತ್ಯಾ ಮದುವೆ ಕೂಡ ಈಗ ಆಗೋದು ಡೌಟ್ ಎನ್ನಬಹುದು.

ನೋಡಿರಿ

