ಕ್ರಿಕೆಟ್ ಜಗತ್ತಿಗೆ ಮಾದರಿಯಾದ ಆಸ್ಟ್ರೇಲಿಯಾ – ಉಸ್ಮಾನ್ ಖ್ವಾಜಾಗೆ ಗೌರವ ಸಲ್ಲಿಸಲು ಸಂಪ್ರದಾಯವೇ ಬದಲಾಯ್ತು..!

ಕ್ರಿಕೆಟ್ ಜಗತ್ತಿಗೆ ಮಾದರಿಯಾದ ಆಸ್ಟ್ರೇಲಿಯಾ – ಉಸ್ಮಾನ್ ಖ್ವಾಜಾಗೆ ಗೌರವ ಸಲ್ಲಿಸಲು ಸಂಪ್ರದಾಯವೇ ಬದಲಾಯ್ತು..!

ಟೆಸ್ಟ್ ವೃತ್ತಿಜೀವನದ ಕೊನೇ ಪಂದ್ಯವಾಡಿದ ಉಸ್ಮಾನ್ ಖ್ವಾಜ ಅವರಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ತಮ್ಮ ಸಂಪ್ರದಾಯವನ್ನೇ ಬದಲಾಯಿಸಿದೆ. ಜೊತೆಗೆ ಖ್ವಾಜಾ ಅವರಿಗೆ ಗೌರವಪೂರ್ವಕ ವಿದಾಯ ಕೋರಿದೆ. ಈ ವಿಶೇಷ ಗೌರವ ನೋಡಿದ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ.

ಇದನ್ನೂ ಓದಿ:BCCI ಕೆಣಕಿದ್ರೆ ಬಾಂಗ್ಲಾ ಬಾಲ ಕಟ್ – IPLಗೂ ಸಮ ಇಲ್ಲ BCB ಆದಾಯ

ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ನಡುವಿನ ಪ್ರತಿಷ್ಠಿತ ಆ್ಯಶಸ್‌ ಸರಣಿಯನ್ನು ಆಸ್ಟ್ರೇಲಿಯಾ ತಂಡ 4-1 ಅಂತರದಲ್ಲಿ ಜಯಿಸಿತ್ತು. ಇದಾದ ನಂತರ ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಉಸ್ಮಾನ್ ಖವಾಜ ಅವರಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಗೌರವ ಸಲ್ಲಿಸಿತು. ಅದು ಕೂಡಾ ಈ ಗೌರವ ವಿನೂತನವಾಗಿತ್ತು. ಉಸ್ಮಾನ್ ಖ್ವಾಜ ಅವರಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶಾಂಪೇನ್ ಸೆಲಿಬ್ರೇಷನ್ ಕೈಬಿಟ್ಟಿತ್ತು. ಉಸ್ಮಾನ್ ಖ್ವಾಜ ಅವರನ್ನು ಸಂಭ್ರಮದಲ್ಲಿ ಭಾಗಿಯಾಗಿಸಲು ಆಸೀಸ್ ತಂಡ ತಮ್ಮ ಎಂದಿನ ಶಾಂಪೇನ್ ಆಚರಣೆಯನ್ನು ಬೇಡವೆಂದು ನಿರ್ಧರಿಸಿತು. ಯಾಕೆಂದರೆ, ಪಾಕಿಸ್ತಾನ ಮೂಲದ ಮತ್ತು ಇಸ್ಲಾಂ ಧರ್ಮದ ಅನುಯಾಯಿಯಾಗಿರುವ ಖ್ವಾಜ, ಮದ್ಯವನ್ನು ಒಳಗೊಂಡ ಯಾವುದೇ ಆಚರಣೆಗಳಲ್ಲಿ ಭಾಗವಹಿಸುವುದಿಲ್ಲ. ಇದೇ ಉದ್ದೇಶದಿಂದ ಕಾಂಗರೂ ಪಡೆ ಶಾಂಪೇನ್ ಸೆಲಿಬ್ರೇಷನ್ ಕೈಬಿಟ್ಟು ಹಿರಿಯ ಆಟಗಾರನಿಗೆ ಗೌರವ ಸಲ್ಲಿಸಿದೆ. ಇದು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

2022ರ ಆ್ಯಶಸ್‌ ಗೆಲುವಿನ ಸಂಭ್ರಮದ ವೇಳೆ ಖ್ವಾಜ ಅವರ ಮೇಲೆ ಶಾಂಪೇನ್ ಬೀಳದಂತೆ ಪ್ಯಾಟ್ ಕಮಿನ್ಸ್ ತಡೆದ ವಿಡಿಯೋ ಕ್ರಿಕೆಟ್ ಜಗತ್ತಿನಲ್ಲಿ ವೈರಲ್ ಆಗಿತ್ತು. ಇದೀಗ ಉಸ್ಮಾನ್ ಖ್ವಾಜಗೆ ಗೌರವ ಸೂಚಿಸಲು ಸಂಪ್ರದಾಯವನ್ನೇ ಮುರಿದ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Sulekha