ರಕ್ಷಿತಾ‌ ಡ್ರೀಮ್‌ಬಾಯ್‌ ಬಗ್ಗೆ ಕೇಳಿ ಮನೆ ಮಂದಿ ಶಾಕ್! – ನನಗೆ ಮದುವೆಯೇ ಬೇಡ ಎಂದ ಗಿಲ್ಲಿನಟ!

ರಕ್ಷಿತಾ‌ ಡ್ರೀಮ್‌ಬಾಯ್‌ ಬಗ್ಗೆ ಕೇಳಿ ಮನೆ ಮಂದಿ ಶಾಕ್! – ನನಗೆ ಮದುವೆಯೇ ಬೇಡ ಎಂದ ಗಿಲ್ಲಿನಟ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಈಗ ರೋಚಕ ಘಟ್ಟ ತಲುಪಿದೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳು ಫುಲ್‌ ಅಲರ್ಟ್‌ ಆಗಿದ್ದಾರೆ. ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ನಡೆಯುತ್ತಿದೆ. ಇವೆಲ್ಲದ್ರ ನಡುವೆ ಗಿಲ್ಲಿನಟನ ಮದುವೆ ಬಗ್ಗೆ ಚರ್ಚೆ ನಡೆದಿದೆ.

ಇದನ್ನೂ ಓದಿ: ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋ*ಟ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆ!‌ – 8 ಜನ ಮೃತಪಟ್ಟರೂ ಮಾಲೀಕರ ವಿರುದ್ಧ ದಾಖಲಾಗದ ದೂರು

ಇಷ್ಟು ದಿನ ಟಾಸ್ಕ್‌ನಲ್ಲಿ ಬ್ಯೂಸಿಯಾಗಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಸರ್‌ಪ್ರೈಸ್‌ ನೀಡಿದ್ದಾರೆ. ದೊಡ್ಮನೆಗೆ ಇದೀಗ ಕಲರ್ಸ್‌ ಕನ್ನಡ ವಾಹಿನಿಯ ನಂದಗೋಕುಲ ಧಾರಾವಾಹಿ ತಂಡ ಮದುವೆಗೆ ಕರೆಯಲು ಬಂದಿದೆ. ಇಡೀ ತಂಡ ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದು,  ಇದೇ ವೇಳೆ ಗಿಲ್ಲಿ ನಟನಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಗಿಲ್ಲಿಗೆ ಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೇಜ್‌ ಯಾವುದು ಇಷ್ಟ ಅಂತ ಕೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ನಂದಗೋಕುಲ ಧಾರಾವಾಹಿ ಸದ್ಯ ವೀಕ್ಷಕರ ಮೆಚ್ಚಿನ ಧಾರಾವಾಹಿ. ಇನ್ನು ಮೊದಲನೇ ಮಗ ಮಾಧವನ ಮದುವೆ ಸಂಭ್ರಮ ಈಗ ನಂದಗೋಕುಲ ಕುಟುಂಬದಲ್ಲಿ ಕಳೆ ಗಟ್ಟಿದೆ. ಅಪ್ಪನ ಮೇಲಿನ ಗೌರವ, ಭಯಕ್ಕೆ ಮೊದಲು ಪ್ರೀತಿಸಿದ ಹುಡುಗಿಯನ್ನ ಕಳೆದುಕೊಂಡ ಮಾಧವನಿಗೆ ಕೊನೆಗೂ ಅಪ್ಪಟ ದೇಸಿ ಹುಡುಗಿ ಸಿಕ್ಕಿದ್ದಾಳೆ. ಇದೀಗ ಸೀರಿಯಲ್‌ ಟೀಮ್‌ ಬಿಗ್‌ಬಾಸ್‌ ಮನೆಗೆ ಆಗಮಿಸಿ ಮದುವೆ ಕಾರ್ಡ್‌ ನೀಡಿದ್ದಾರೆ. ಇದೇ ವೇಳೆ ನಂದಕುಮಾರ್‌ ಗಿಲ್ಲಿಗೆ  ಲವ್‌ ಮ್ಯಾರೆಜ್‌ ಅಥವಾ ಅರೇಂಜ್‌ ಮ್ಯಾರೆಜ್‌ ಇಷ್ಟನಾ ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ ಮದುವೆಯೇ ಆಗಬಾರದು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ಗಿಲ್ಲಿ. ಇನ್ನು ಕಾವ್ಯ ಕೂಡ ಯಾರಾದರೂ ಇಷ್ಟ ಆದರೆ ಲವ್‌ ಮ್ಯಾರೆಜ್‌ ಆಗ್ತೀನಿ ಎಂದಿದ್ದಾರೆ. ಇನ್ನು ರಕ್ಷಿತಾಗೆ ಕಾಮಿಡಿ ಆಗಿರೋ ಹುಡುಗ ಅಂದರೆ ಇಷ್ಟ ಅಂತೆ. ಅದೇ ಥರ ಇರೋ ಹುಡುಗನನ್ನ ಮದುವೆ ಆಗ್ತಾರಂತೆ.

Shwetha M