ಚಪಾತಿ ತಿಂದ್ರೆ ತೂಕ ಇಳಿಯುತ್ತಾ?  – ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು?

ಚಪಾತಿ ತಿಂದ್ರೆ ತೂಕ ಇಳಿಯುತ್ತಾ?  – ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು?

ತೂಕ ಇಳಿಸ್ಬೇಕು. ನೋಡೋಕೆ ಸುಂದರವಾಗಿ ಕಾಣಿಸ್ಬೇಕು ಅನ್ನೋ ಆಸೆ ಅನೇಕರಿಗಿದೆ. ತೂಕ ಇಳಿಸಿಕೊಳ್ಳಲು ಕೆಲವರು ಜಿಮ್‌ನಲ್ಲಿ ಕಠಿಣ ವ್ಯಾಯಾಮ ಮಾಡುತ್ತಾರೆ. ಇನ್ನು ಕೆಲವರು ಆಹಾರಕ್ರಮದ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನದ ಬದಲು ಬರೀ ಚಪಾತಿ ತಿನ್ನೋ ಅಭ್ಯಾಸ ಮಾಡಿಕೊಂಡಿರ್ತಾರೆ. ಚಪಾತಿ ತಿಂದ್ರೆ ತೂಕ ಇಳಿಯುತ್ತೆ ಅಂತ ಹೊಟ್ಟೆ ತುಂಬಾ ತಿಂತಾರೆ. ಹೀಗೆ ಮಾಡಿದ್ರೆ  ಮಾಡಿದ್ರೆ ತೂಕ ಇಳಿಯಲ್ಲ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್‌ ಧರಿಸುವಾಗ ಈ ತಪ್ಪು ಮಾಡ್ತೀರಾ? – ಒಂದು ತಪ್ಪು.. ನಿಮ್ಮ ಕೂದಲಿಗೆ ಕುತ್ತು!  

ಆಹಾರ ತಜ್ಞರ ಪ್ರಕಾರ ತೂಕ ಇಳಿಸಿಕೊಳ್ಳಬೇಕಂದ್ರೆ ನಿಮ್ಮ ಆಹಾರದಲ್ಲಿ ಚಪಾತಿ ಮತ್ತು ಅನ್ನದ ಪ್ರಮಾಣವನ್ನ ಕಡಿಮೆ ಮಾಡಬೇಕು. ಚಪಾತಿ ಮತ್ತು ಅನ್ನ ಎರಡರಲ್ಲೂ ಕಾರ್ಬೋಹೈಡ್ರೇಟ್‌ಗಳಿದ್ದು, ಹೆಚ್ಚು ಸೇವಿಸಿದ್ರೆ ಬೊಜ್ಜುತನಕ್ಕೆ ಕಾರಣವಾಗಬಹುದು. ಹೀಗಾಗಿ ತೂಕ ಇಳಿಸಿಕೊಳ್ಳಲು ನಿಮ್ಮ ದೈನಂದಿನ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನ ಮೇಲ್ವಿಚಾರಣೆ ಮಾಡಬೇಕು. ತೂಕ ಇಳಿಸಿಕೊಳ್ಳಲು ದಿನಕ್ಕೆ 1800 ರಿಂದ 2000 ಕ್ಯಾಲೊರಿಗಳಷ್ಟು ಆಹಾರ ಸೇವಿಸಬೇಕು. ಈ ಪೈಕಿ 225 ರಿಂದ 325 ಕ್ಯಾಲೊರಿಗಳು ಕಾರ್ಬೋಹೈಡ್ರೇಟ್‌ಗಳಾಗಿವೆ. ಒಂದು ಚಪಾತಿ ತಿನ್ನುವುದರಿಂದ ಸರಿಸುಮಾರು 15 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಮತ್ತು 70 ಗ್ರಾಂ ಕ್ಯಾಲೋರಿಗಳು ದೊರೆಯುತ್ತವೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವ ಮಹಿಳೆಯರು ದಿನಕ್ಕೆ 3-4 ಸಣ್ಣ ಚಪಾತಿಗಳನ್ನ ತಿನ್ನಬೇಕು. ಇನ್ನು ಪುರುಷರು ದಿನಕ್ಕೆ 5-6 ಚಪಾತಿ ತಿನ್ನಬೇಕು. ಇದ್ರ ಜೊತೆಗೆ ಸಲಾಡ್‌, ತರಕಾರಿಗಳು ಮತ್ತು ಫ್ರೂಟ್ಸ್‌ ಜ್ಯೂಸ್‌ಗಳನ್ನ ಕುಡಿಯಬೇಕು. ಊಟದ ನಂತರ ಅರ್ಧ ಗಂಟೆ ವಾಕ್‌ ಮಾಡಬೇಕು. ಹೀಗೆ ಮಾಡಿದ್ರೆ, ನೀವು ಬೇಗ ತೂಕ ಇಳಿಸಬಹುದು.

Shwetha M