ಟಾಸ್ಕ್‌ ವೇಳೆ ಟವರ್‌ನಿಂದ ಬಿದ್ದ ಅಶ್ವಿನಿ ಗೌಡ? – ಮುಂದಿನ ಟಾಸ್ಕ್‌ನಲ್ಲಿ ಅಶ್ವಿನಿ ಇರಲ್ವಾ?

ಟಾಸ್ಕ್‌ ವೇಳೆ ಟವರ್‌ನಿಂದ ಬಿದ್ದ ಅಶ್ವಿನಿ ಗೌಡ? – ಮುಂದಿನ ಟಾಸ್ಕ್‌ನಲ್ಲಿ ಅಶ್ವಿನಿ ಇರಲ್ವಾ?

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆಗೆ ಕೌಂಟ್‌ ಡೌನ್‌ ಶುರುವಾಗಿದೆ. ಇದೀಗ ಶೋನಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ನಡೆಯುತ್ತಿದೆ. ಟಾಪ್‌ 6 ಸ್ಪರ್ಧಿಗಳು ಫಿನಾಲೆಗೆ ಬರುತ್ತಾರೆ. ಅವರಲ್ಲಿ ಯಾರಿಗೆ ಮೊದಲ ಟಿಕೆಟ್‌ ಸಿಗಲಿದೆ ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ. ಇದೀಗ ಬಿಗ್‌ಬಾಸ್‌ ಟಾಸ್ಕ್‌ವೊಂದನ್ನ ನೀಡಿದ್ದು, ಅಶ್ವಿನಿ ಗೌಡ ಮೇಲಿಂದ ಕೆಳಗೆ ಬಿದ್ರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡಿದೆ.

ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ ಸಾಧ್ಯತೆ!

ಬಿಗ್‌ಬಾಸ್‌ ಮನೆಯಲ್ಲಿ ಟಾಪ್‌ 6 ಪ್ಲೇಸ್‌ಗೆ ರೇಸ್‌ಗೆ ಸ್ಪರ್ಧೆ ನಡೆಯುತ್ತಿದೆ. ಇದಕ್ಕಾಗಿ ಬಿಗ್‌ಬಾಸ್‌ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಒಂದಿಷ್ಟು ಕಬ್ಬಿಣದ ಎಳೆಗಳನ್ನು ಬಳಸಿ ಟವರ್‌ ಹತ್ತಬೇಕು, ಕೋಲು ಇಡುತ್ತ, ಟವರ್ ಕಟ್ಟುವಲ್ಲಿ ಯಾರು ಯಶಸ್ವಿಯಾಗುವರೋ ಅವರು ಫಿನಾಲೆಗೆ ಮೊದಲ ಟಿಕೆಟ್‌ ಪಡೆಯುತ್ತಾರೆ. ಇದೀಗ ಧನುಷ್‌ ಗೌಡ, ಧ್ರುವಂತ್‌, ಅಶ್ವಿನಿ ಗೌಡ, ಕಾವ್ಯ ಶೈವ ಅವರು ಟವರ್‌ ಕಟ್ಟಲು ಮುಂದಾಗಿದ್ದಾರೆ, ಉಳಿದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮುಳುಗಿ ಅಲ್ಲಿದ್ದ ಕೋಲುಗಳನ್ನು ತಂದು ಕೊಡಬೇಕು. ಕೋ ಆರ್ಡಿಶನ್‌ನಲ್ಲಿ ಇವರು ಆಟ ಆಡಬೇಕು.

ಇದೀಗ ಟಾಸ್ಕ್‌ ನಲ್ಲಿ ಎಲ್ಲ ಸ್ಪರ್ಧಿಗಳು ರಾಡ್‌ಗಳನ್ನ ಜೋಡಿಸಿ ಟವರ್‌ ಮೇಲೆ ಹತ್ತುತ್ತಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಬಿದ್ರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡುತ್ತಿದೆ. ಅಶ್ವಿನಿ ರಾಡ್‌ ಜೋಡಿಸಿ ಹತ್ತುವ ವೇಳೆ ಬೀಳುತ್ತಿರುವ ಹಾಗೇ ಪ್ರೋಮೋದಲ್ಲಿ ತೋರಿಸಲಾಗಿದೆ. ಅದನ್ನು ನೋಡಿ ಗಿಲ್ಲಿ ನಟ, ಧ್ರುವಂತ್‌, ರಕ್ಷಿತಾ ಕೂಡ ಶಾಕ್‌ ಆಗಿದ್ದಾರೆ.  ಅಶ್ವಿನಿ ಗೌಡ ಅವರು ಬಿದ್ದರಾ? ಗಾಯ ಆಯ್ತಾ ಅನ್ನೋದ್ರ ಬಗ್ಗೆ ಯಾವುದೇ ಅಪ್‌ಡೇಟ್‌ ಇಲ್ಲ. ಇಂದಿನ ಸಂಚಿಕೆಯಲ್ಲಿ ಏನಾಗಿದೆ ಅನ್ನೋದು ಗೊತ್ತಾಗಲಿದೆ.

Shwetha M