ಟಾಕ್ಸಿಕ್ ಚಿತ್ರದ ಟೀಸರ್‌ ಮೆಚ್ಚಿಕೊಂಡ ಕಿಚ್ಚ – ಬರ್ತ್‌ಡೇ ವಿಶ್‌ ಜೊತೆ ಕಿಚ್ಚ ಹೇಳಿದ್ದೇನು ಗೊತ್ತಾ?

ಟಾಕ್ಸಿಕ್ ಚಿತ್ರದ ಟೀಸರ್‌ ಮೆಚ್ಚಿಕೊಂಡ ಕಿಚ್ಚ –  ಬರ್ತ್‌ಡೇ ವಿಶ್‌ ಜೊತೆ  ಕಿಚ್ಚ ಹೇಳಿದ್ದೇನು ಗೊತ್ತಾ?
ಟಾಕ್ಸಿಕ್ ಚಿತ್ರದ ಟೀಸರ್ ಅನ್ನ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮೆಚ್ಚಿಕೊಂಡು ಟ್ವಿಟರ್ ಅಲ್ಲಿಯೇ ಯಶ್‌ ಅವರಿಗೆ ವಿಶ್ ಕೂಡ ಮಾಡಿದ್ದಾರೆ. ತಮ್ಮದೇ ಶೈಲಿಯಲ್ಲಿಯೇ ವಿಶ್ ಕೂಡ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್​​ಗಳ ಮಧ್ಯೆ ಯಾವುದೂ ಸರಿ ಇಲ್ಲ, ಒಬ್ಬರಿಗೊಬ್ಬರು ಬೆಂಬಲ ಕೊಡೋದಿಲ್ಲ ಎಂಬಿತ್ಯಾದಿ ಮಾತುಗಳು ಆಗಾಗ ಕೇಳಿ ಬರುತ್ತಾ ಇರುತ್ತವೆ. ಈಗ ಕನ್ನಡ ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ‘ಟಾಕ್ಸಿಕ್’ ಸಿನಿಮಾದ ಟೀಸರ್  ನೋಡಿದ ಸುದೀಪ್ ಅವರು ಯಶ್​​ಗೆ ವಿಶ್ ಮಾಡಿದ್ದಾರೆ.

ಇಂದು (ಜನವರಿ 8) ಯಶ್ ಜನ್ಮದಿನ. ಈ ವಿಶೇಷ ದಿನದಂದು ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗಿದೆ.ಈ ಟೀಸರ್ ಬಗ್ಗೆ ಮಾಹಿತಿ ನೀಡಲು ಯಶ್ ಟ್ವೀಟ್ ಮಾಡಿದ್ದರು. ರಾಯ ಅನ್ನೋದು ಯಶ್ ಮಾಡುತ್ತಿರುವ ಪಾತ್ರದ ಹೆಸರು. ಪಾತ್ರವನ್ನು ಪರಿಚಯಿಸುವ ರೀತಿಯಲ್ಲಿ ಈ ಟೀಸರ್ ಇದೆ. ಈ ಟೀಸರ್ ಬಗ್ಗೆ ಯಶ್ ಮಾಡಿದ ಟ್ವೀಟ್​ನ ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ಯಶ್​​ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದು ಸುದೀಪ್ ಹೇಳಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.

ಟಾಕ್ಸಿಕ್’ ಟೀಸರ್ ತುಂಬಾನೇ ಬೋಲ್ಡ್ ಆಗಿದೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈ ಟೀಕೆಗಳು ಕೇಳಿ ಬಂದಿದ್ದರಿಂದಲೇ ‘ಅಲೆಗಳ ವಿರುದ್ಧ ಹೋಗಲು ಸಾಕಷ್ಟು ಸಮಯ ಬೇಕು’ ಎಂದು ಯಶ್ ಟ್ವೀಟ್ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ. ಯಶ್ ಅವರಿಗೆ ಸುದೀಪ್ ವಿಶ್ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ‘ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಇದು ನಮ್ಮ ಕಿಚ್ಚ ಸುದೀಪ್. ಯಶ್ ಹಾಗೂ ಸುದೀಪ್ ಮಧ್ಯೆ ಇರುವ ಬಾಂಡ್​​ನ ಅಭಿಮಾನಿಗಳೇ ಹಾಳು ಮಾಡಿದರು’ ಎಂದು ಕೆಲವರು ಹೇಳಿದ್ದಾರೆ.

Kishor KV