ಅರ್ಜುನ್ ಕೈ ಹಿಡಿಯದ ಕ್ರಿಕೆಟ್ – ಮೆರೆಯೋ ಮುನ್ನವೇ ಸಚಿನ್ ಪುತ್ರ ಮರೆ?
ಮದುವೆ ಬಳಿಕ ಮೈದಾನಕ್ಕೆ ಗುಡ್ ಬೈ?

ಅರ್ಜುನ್ ಕೈ ಹಿಡಿಯದ ಕ್ರಿಕೆಟ್ – ಮೆರೆಯೋ ಮುನ್ನವೇ ಸಚಿನ್ ಪುತ್ರ ಮರೆ?ಮದುವೆ ಬಳಿಕ ಮೈದಾನಕ್ಕೆ ಗುಡ್ ಬೈ?

ಅರ್ಜುನ್ ತೆಂಡೂಲ್ಕರ್. ಮೈದಾನಕ್ಕಿಳಿಯೋ ಮುನ್ನವೇ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದ್ದ ಹುಡುಗ. ಯಾಕಂದ್ರೆ ಕ್ರಿಕೆಟ್ ಜಗತ್ತನ್ನೇ ಆಳಿದ ದಿ ಗ್ರೇಟ್ ಸಚಿನ್ ತೆಂಡೂಲ್ಕರ್ ಅವ್ರ ಪುತ್ರ ಅನ್ನೋ ಕಾರಣಕ್ಕೆ. ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಪುತ್ರ ಅಂದಾಗ ಅಭಿಮಾನಿಗಳಿಗೂ ಸಹಜವಾಗೇ ಜಾಸ್ತಿ ನಿರೀಕ್ಷೆ ಇಟ್ಕೊಂಡಿದ್ರು. ಆದ್ರೆ ಕ್ರಿಕೆಟ್ ಕೆರಿಯರ್ ಸ್ಟಾರ್ಟ್ ಆಗೋ ಮುನ್ನವೇ ಅರ್ಜುನ್ ಮೈದಾನದಿಂದ ಹೊರ ನಡೆದುಬಿಡ್ತಾರಾ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ : ಸ್ಮೃತಿ ಓಪನರ್.. ರಿಚಾ ಫಿನಿಶರ್ – ಟಗರುಪುಟ್ಟಿ ಶ್ರೇಯಾಂಕಾ ಈಸ್ ಬ್ಯಾಕ್

ಅರ್ಜುನ್ ತೆಂಡೂಲ್ಕರ್ ಅಂದಾಗ ಕ್ರಿಕೆಟ್ ಫ್ಯಾನ್ಸ್ ಗುರುತಿಸೋದೇ ಸಚಿನ್ ಅವ್ರ ಪುತ್ರ ಅಂತಾ. ಈಗ್ಲೂ ಕೂಡ ತನ್ನದೇ ಆದ ಓನ್ ಐಡೆಂಟಿಟಿಗಾಗಿ ಅರ್ಜುನ್ ಸ್ಟ್ರಗಲ್ ಪಡ್ತಾನೇ ಇದ್ದಾರೆ. ಅರ್ಜುನ್​ಗಿಂತ ಚಿಕ್ಕವ್ರು ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೀತಿದ್ದಾರೆ.. ಅರ್ಜುನ್ ವಯಸ್ಸಿನ ಆಟಗಾರರು ಆಲ್ರೆಡಿ ಕ್ಯಾಪ್ಟನ್ಸಿ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ ಅರ್ಜುನ್ ಟೀಂ ಇಂಡಿಯಾಗೆ ಕಾಲಿಡೋಕೂ ಆಗಿಲ್ಲ. ಐಪಿಎಲ್​ನಲ್ಲೇ ಇನ್ನೂ ಪ್ರೂವ್ ಮಾಡಿಲ್ಲ. ಈಗ ವಿಜಯ್ ಹಜಾರೆಯಲ್ಲೂ ಅರ್ಜುನ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ.

ಡೊಮೆಸ್ಟಿಕ್ ಟೂರ್ನಿಗಳಲ್ಲೂ ಅರ್ಜುನ್ ಫೇಲ್!

ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಟ್ರೋಫಿ  ಟೂರ್ನಿಗಳಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡುತ್ತಿದ್ದಾರೆ. ವಿಷ್ಯ ಅಂದ್ರೆ ಅವ್ರಿಗೆ ಮುಂಬೈ ತಂಡದಲ್ಲಿ ಚಾನ್ಸ್ ಸಿಗ್ತಿಲ್ಲ ಹೀಗಾಗಿ ಗೋವಾ ಪರ ಆಡ್ತಿದ್ದಾರೆ. ಆಲ್ ರೌಂಡರ್ ಆಗಿರುವ ಅರ್ಜುನ್ ಮೇಲೆ ತುಂಬಾನೇ ಹೋಪ್ಸ್ ಇರುತ್ತೆ. ಆದ್ರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಯಾವುದ್ರಲ್ಲೂ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ತಿಲ್ಲ. ಪರಿಣಾಮ ಇಲ್ಲಿಯೂ ಅವಕಾಶ ಕಳ್ಕೊಳ್ತಾರಾ ಅನ್ನೋ ಅನುಮಾನ ಶುರುವಾಗಿದೆ.

ವಿಜಯ್ ಹಜಾರೆಯಲ್ಲಿ ಬ್ಯಾಟಿಂಗ್ & ಬೌಲಿಂಗ್ ಫ್ಲ್ಯಾಪ್!

ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಲವು ಆಟಗಾರರು ಅಧ್ಭುತ ಇನ್ನಿಂಗ್ಸ್​ಗಳನ್ನ ಆಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮೂಲಕವೇ ಟೀಂ ಇಂಡಿಯಾ ಬಾಗಿಲು ಬಡಿತಿದ್ದಾರೆ. ಆದ್ರೆ ಅರ್ಜುನ್ ತೆಂಡೂಲ್ಕರ್ ಪ್ಲೇಯಿಂಗ್ 11ನಲ್ಲಿ ಉಳಿಯೋದೇ ಡೌಟ್ ಆಗಿದೆ. ವಿಜಯ್ ಹಜಾರೆಯಲ್ಲಿ ಗೋವಾ ಪರ ನಾಲ್ಕು ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ. ಬ್ಯಾಟಿಂಗ್​ನಲ್ಲೂ ಹೇಳಿಕೊಳ್ಳುವಂಥ ಇನ್ನಿಂಗ್ಸ್ ಬಂದಿಲ್ಲ.

ಆಟವಾಡದ ಅರ್ಜುನ್!

ಎದುರಾಳಿ                        ಬ್ಯಾಟಿಂಗ್                             ಬೌಲಿಂಗ್

ಹಿಮಾಚಲ ಪ್ರದೇಶ                 1 (1)                               58(6)

ಸಿಕ್ಕಿಂ                                    19(26)                               49 (9)

ಮುಂಬೈ                             24 (27)                              78 (9)

ಉತ್ತರಾಖಂಡ್                     6(16)                               54( 8 )

ಪಂಜಾಬ್                             1(8)                                 48 (6)

ಅಲ್ಲಿಗೆ ವಿಜಯ್ ಹಜಾರೆಯಲ್ಲಿ ಗೋವಾ ಪರ ಇದುವರೆಗೆ ಒಂದೇ ಒಂದು ವಿಕೆಟ್ ಪಡೆದಿಲ್ಲ. ಬ್ಯಾಟಿಂಗ್​ನಲ್ಲೂ ಬಿಗ್ ಸ್ಕೋರ್ ಬಂದಿಲ್ಲ. ಮುಂದಿನ ಪಂದ್ಯಗಳಲ್ಲಿ ಪ್ಲೇಯಿಂಗ್ 11ನಲ್ಲಿ ಆಡೋದೇ ಅನುಮಾನ ಎನ್ನುವಂತಾಗಿದೆ. ಅತ್ತ ಐಪಿಎಲ್​ನಲ್ಲಿ ಮುಂಬೈ ಪರ ಕಳೆದ 3 ವರ್ಷಗಳಿಂದ ತಂಡದಲ್ಲಿದ್ರೂ ಆಡಿದ್ದೇ ನಾಲ್ಕು ಮ್ಯಾಚ್. ಈಗ ಲಕ್ನೋ ಟೀಂ ಸೇರಿದ್ರೂ ಈ ವರ್ಷವೂ ಆಡಿಸ್ತಾರೋ ಅಥವಾ ಬೆಂಚ್ ಕಾಯಿಸ್ತಾರೋ ಗೊತ್ತಿಲ್ಲ. ಇದೆಲ್ಲದ್ರ ನಡುವೆ ಐಪಿಎಲ್​ ಆರಂಭಕ್ಕೂ ಮುನ್ನವೇ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಸಿದ್ಧವಾಗಿದ್ದಾರೆ. ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ಮದುವೆಯನ್ನ ಮಾರ್ಚ್ 5 ಫಿಕ್ಸ್ ಮಾಡಲಾಗಿದೆ. ಹೀಗಾಗಿ ಅರ್ಜುನ್ ಮುಂದಿನ ದಿನಗಳಲ್ಲಿ ಕ್ರಿಕೆಟ್​ನಲ್ಲಿ ಗಟ್ಟಿಯಾಗಿ ನಿಲ್ತಾರೋ ಅಥವಾ ಬ್ಯುಸಿಲೆಸ್, ಪರ್ಸನಲ್ ಲೈಫ್ ಅಂತಾ ಮೈದಾನದಿಂದ ದೂರ ಸರೀತಾರೋ ಕಾದು ನೋಡ್ಬೇಕು.

Shantha Kumari