ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ ಸಾಧ್ಯತೆ!

ದೇಶದೆಲ್ಲೆಡೆ ಮೈಕೊರೆಯುವ ಚಳಿಯಿದೆ. ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಭಾರತೀಯ ಹವಾಮಾನ ಇಲಾಖೆ ಎಚ್ಚರಿಗೆ ನೀಡಿದೆ. ದಕ್ಷಿಣ ಭಾರತದ ಎರಡು ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಖ್ಯಾತ ಹಿರಿಯ ಪರಿಸರಶಾಸ್ತ್ರಜ್ಞ ವಿಧಿವಶ – ಮಾಧವ ಗಾಡ್ಗಿಲ್ ಇನ್ನು ನೆನಪು ಮಾತ್ರ!
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ತಮಿಳುನಾಡು ಹಾಗೂ ಪುದುಚೇರಿ, ಕರ್ನಾಟಕದ ವಿವಿಧ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇನ್ನು ಮುಂದಿನ 5 ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಭಾಗದಲ್ಲಿ ಕನಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ಇಳಿಕೆ ಆಗಲಿದೆ. ಇನ್ನು ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಮಹತ್ವದ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಲಾಗಿದೆ.
ತಮಿಳುನಾಡು, ಪುದುಚೇರಿಗಳಲ್ಲಿ ಜನವರಿ 9 ಹಾಗೂ 10 ರಂದು ಗುಡುಗು ಸಹಿತ ಮಳೆಯಾಗಲಿದೆ. ಇನ್ನು ಜನವರಿ 10 ರಂದು ಇದರ ಪರಿಣಾಮ ಕೇರಳದ ಮೇಲೂ ಬೀರಲಿದೆ. ಹೀಗಾಗಿ ಜನವರಿ 10 ರಂದು ಕೇರಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಶ್ರೀಲಂಕಾ ಹಾಗೂ ಬಂಗಾಳ ಕೊಲ್ಲಿಯಲ್ಲಿ ವ್ಯತಿರಿಕ್ತ ಹವಾಮಾನ ರೂಪುಗೊಂಡಿದೆ. ಭಾರಿ ಮಳೆ, ಗುಡುಗು ಹಾಗೂ ಗಾಳಿ ಇರಲಿದೆ. ಇದರಿಂದ ಜನವರಿ 8 ರಿಂದ 10 ವರಗೆಗೆ ಮೀನುಗಾರರು ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಮೀನುಗಾರಕೆ ಇಳಿಯದಂತೆ ಎಚ್ಚರಿಸಿದೆ. ಮೀನುಗಾರರು ಮಾತ್ರವಲ್ಲ, ಈ ಭಾಗದ ಕರಾವಳಿ ತೀರ ಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ಉತ್ತರ ಭಾರತಕ್ಕೆ ಭಾರತೀಯ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ನೀಡಿದೆ. ಉತ್ತರ ಭಾರತದ ಹಲವು ರಾಜ್ಯಗಳು ಅತೀವ ಚಳಿಯಿಂದ ಸಂಕಷ್ಟಕ್ಕೆ ಸಿಲುಕಲಿದೆ ಎಂದಿದೆ. ದೆಹಲಿ, ಚತ್ತೀಸಘಡ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ಉತ್ತರ ಹಲವು ರಾಜ್ಯಗಳು ವಿಪರೀತ ಚಳಿಯಿಂದ ನಡುಗಲಿದೆ ಎಂದಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಿದೆ. ಇನ್ನು ಅಸ್ಸಾಂ, ಮೆಘಾಲಯ ಹಾಗೂ ಉತ್ತರಖಂಡದಲ್ಲೂ ಭಾರಿ ಚಳ ಇರಲಿದೆ ಎಂದಿದೆ.
ದಟ್ಟವಾದ ಮಂಜು ಆವರಿಸುವ ಕಾರಣ ಗೋಚರತೆ ಇರುವುದಿಲ್ಲ. ಹೀಗಾಗಿ ವಾಹನ ಸವಾರರು, ಪಾದಾಚಾರಿಗಳು ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮಂಜಿನ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಮೋಡ ಕವಿದ ವಾತಾವರಣ ಇರುವ ಹಲೆವೆಡೆ ಗೋಚರತೆ ಇರುವುದಿಲ್ಲ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ನೋಡಿರಿ

